ETV Bharat / bharat

ವರ್ತಮಾನದಲ್ಲಿ ಗಾಂಧೀಜಿಯ ಪರಧರ್ಮ ಸಹಿಷ್ಣತೆ, ಶಾಂತಿಯ ತತ್ವಗಳ ಪ್ರಸ್ತುತತೆ - ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್

ತಾಳ್ಮೆಯಿಲ್ಲದೆ ಶಾಂತಿವಾದ ಸಾಧ್ಯವಿಲ್ಲ. ಸಹಬಾಳ್ವೆಯ ಮುಖೇನ ಸಮಾಜದಲ್ಲಿ ಶಾಂತಿ ಸ್ಥಾಪಿಸಬಹುದು. ನಕಾರಾತ್ಮಕ ಸನ್ನಿವೇಶಗಳಿಗೆ ನಕಾರಾತ್ಮಕ ಪ್ರತಿಕ್ರಿಯೆ ನೀಡಿದರೆ ದೈನಂದಿನ ಜೀವನದಲ್ಲಿನ ಶಾಂತಿಗೆ ಅವಕಾಶವಿರುವುದಿಲ್ಲ. ನಮ್ಮಲ್ಲಿ ಹಲವು ಬಗೆಯ ಶಾಂತಿಯ ವಾದಗಳಿವೆ. ಆದರೆ, ಅವೆಲ್ಲವುಗಳಿಗೆ ಯುದ್ಧ ಮತ್ತು ಹಿಂಸಾಚಾರ ಸಮರ್ಥನೀಯವಲ್ಲ. ಘರ್ಷಣೆಯನ್ನೂ ಶಾಂತಿಯುತ ಮಾರ್ಗದಲ್ಲಿ ಬಗೆಹರಿಸಬೇಕು. ಸಹಬಾಳ್ವೆಯ ತತ್ವಗಳ ಮೇಲೆ ಸ್ಥಾಪಿತವಾದ ಸಮಾಜದ ವೈವಿಧ್ಯತೆಯನ್ನು ಗೌರವಿಸಬೇಕಾಗುತ್ತದೆ. ಇದುವೇ ಉತ್ತಮವಾದ ನಡೆ ಎಂದು ಮಹಾತ್ಮ ಗಾಂಧಿಯ ನಿಲುವಾಗಿತ್ತು.

ಸಾಂದರ್ಭಿಕ ಚಿತ್ರ
author img

By

Published : Sep 14, 2019, 5:01 AM IST

ಧಾರ್ಮಿಕ ಸಾಮರಸ್ಯ ಕಾಪಾಡಿಕೊಳ್ಳಲು ಪಕ್ಷಗಳ ನಡುವಿನ ಅರ್ಥಪೂರ್ಣ ಮತ್ತು ಸಕಾರಾತ್ಮಕ ಸಂವಾದದ ಮೂಲಕ ವಿವಿಧ ಧಾರ್ಮಿಕ ಸಿದ್ಧಾಂತಗಳ ನಡುವಿನ ವ್ಯತ್ಯಾಸಗಳನ್ನು ನಿರ್ವಹಿಸಬಹುದು. ಭಾರತದ ಪಿತಾಮಹ ಮಹಾತ್ಮ ಗಾಂಧಿ ಅವರು ‘ಶಾಂತಿಯ ನಂಬಿಕೆ’ಯನ್ನು ಕಾಪಾಡಿಕೊಳ್ಳಲು ಶಾಂತಿವಾದವನ್ನೇ ತಮ್ಮ ಧರ್ಮವನ್ನಾಗಿ ಸ್ವೀಕರಿಸಿ ಅನುಸರಿಸಿದ್ದರು.

ತಾಳ್ಮೆಯಿಲ್ಲದೆ ಶಾಂತಿವಾದ ಅಭ್ಯಾಸ ಮಾಡಲು ಸಾಧ್ಯವಿಲ್ಲ. ಪರಸ್ಪರರು ಸಹಬಾಳ್ವೆಯ ಮುಖೇನ ಸಮಾಜದಲ್ಲಿ ಶಾಂತಿ ಸ್ಥಾಪಿಸಬಹುದು. ನಕಾರಾತ್ಮಕ ಸನ್ನಿವೇಶಗಳಿಗೆ ನಕಾರಾತ್ಮಕ ಪ್ರತಿಕ್ರಿಯೆ ನೀಡಿದರೆ ದೈನಂದಿನ ಜೀವನದಲ್ಲಿನ ಶಾಂತಿಗೆ ಅವಕಾಶವಿರುವುದಿಲ್ಲ. ನಮ್ಮಲ್ಲಿ ಹಲವು ಬಗೆಯ ಶಾಂತಿಯ ವಾದಗಳಿವೆ. ಆದರೆ, ಅವೆಲ್ಲವೂಗಳಿಗೆ ಯುದ್ಧ ಮತ್ತು ಹಿಂಸಾಚಾರ ಸಮರ್ಥನೀಯವಲ್ಲ. ಘರ್ಷಣೆಯನ್ನೂ ಶಾಂತಿಯುತ ಮಾರ್ಗದಲ್ಲಿ ಬಗೆಹರಿಸಬೇಕು. ಸಹಬಾಳ್ವೆಯ ತತ್ವಗಳ ಮೇಲೆ ಸ್ಥಾಪಿತವಾದ ಸಮಾಜದ ವೈವಿಧ್ಯತೆಯನ್ನು ಗೌರವಿಸಬೇಕಾಗುತ್ತದೆ. ಇದುವೇ ಉತ್ತಮವಾದ ನಡೆ.

ಲಿಯೋ ಟಾಲ್ ಸ್ಟಾಯ್, ಗಾಂಧಿ ಮತ್ತು ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ ಅವರು ವಿವರಿಸಿದ ವಿಚಾರಗಳಿಗೂ ಧಾರ್ಮಿಕ ಶಾಂತಿವಾದವೇ ಕೇಂದ್ರ ಬಿಂದುವಾಗಿದೆ. ಶಾಂತಿಪ್ರಿಯರು ಕೆಲವೊಮ್ಮೆ ಅಹಿಂಸೆಗೆ ಬದ್ಧರಾಗಿದ್ದಾರೆ. ಜೀವನ ವಿಧಾನ, ಶಾಂತಿಯುತ ಮತ್ತು ಸಾಮರಸ್ಯದ ಸಹಬಾಳ್ವೆ ದೃಷ್ಟಿಯತ್ತ ಗಮನಹರಿಸಬೇಕು. ಸಸ್ಯಾಹಾರಿ ಸೇವನೆ ಸೇರಿದಂತೆ ಜೀವನದ ಎಲ್ಲ ಆಯಾಮಗಳಲ್ಲಿ ಅಹಿಂಸೆಯ ಬದ್ಧತೆಯ ಕಡೆಗೆ ಶಾಂತಿವಾದವನ್ನು ವಿಸ್ತರಿಸಬಹುದು.

ಭಾರತದಂತಹ ಬಹು-ಧಾರ್ಮಿಕ ಸಮಾಜದಲ್ಲಿ ಶಾಂತಿವಾದ ಅಥವಾ ಸಹಬಾಳ್ವೆಯ ಅತ್ಯುತ್ತಮವಾದ ಉದಾಹರಣೆಯನ್ನು ಭಾರತದ ಸ್ವಾತಂತ್ರ್ಯ ಸಂಗ್ರಾಮದ ಅವಧಿಯಲ್ಲಿ ಕಾಣಬಹುದು. ಆ ಸಮಯದಲ್ಲಿ ಗಾಂಧೀಜಿಯವರು ಆಂದೋಲನವನ್ನು ಆರಂಭಿಸಿ ತಾವೇ ಅದನ್ನು ಮುನ್ನಡೆಸಿದ್ದರು. ಧಾರ್ಮಿಕ ಸಹಬಾಳ್ವೆ, ಸಹನೆ, ಪರಸ್ಪರ ಗೌರವ ಮತ್ತು ಸಾರ್ವತ್ರಿಕ ಭ್ರಾತೃತ್ವದ ಪ್ರತಿಪಾದಕರಾಗಿದ್ದರು. ಭಾರತದ ರಾಜಕೀಯ ಮತ್ತು ಸಮಾಜದಲ್ಲಿ ಹಿಂದೂಗಳು ಮತ್ತು ಮುಸ್ಲಿಮರು ಸಮಾನ ಪಾಲು ಹೊಂದಬೇಕೆಂದು ಬಯಸಿದ್ದರು. ಇದನ್ನು ಸಾಧಿಸಲು ಎರಡೂ ಸಮುದಾಯಗಳನ್ನು ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಸಮಾನ ಹೆಜ್ಜೆಯಾಗಿ ಪಾಲ್ಗೊಳ್ಳುವಂತೆ ನೋಡಿಕೊಂಡಿದ್ದರು. ಇದನ್ನು ಪ್ರಾಯೋಗಿಕವಾಗಿ ಸಾಧಿಸಲು ಆಗಾಗ ಸಲಹೆ ನೀಡಿದ್ದರು. ಖಿಲಾಫತ್ ಚಳವಳಿಯಲ್ಲಿ (1919-22) ಪರಿಪೂರ್ಣ ಅವಕಾಶವನ್ನು ಬಳಸಿಕೊಂಡಿದ್ದನ್ನು ಕಾಣಬಹುದು.

ಮೊದಲನೆಯ ಮಹಾಯುದ್ಧದ ಸಮಯದಲ್ಲಿ ಬ್ರಿಟನ್ ಟರ್ಕಿಯ ವಿರುದ್ಧ ಹೋರಾಟ ನಡೆಸಿತ್ತು. ಅರಬ್​ ದೇಶದವರು ತುರ್ಕೀ ದೇಶದ ಒಟ್ಟೊಮನ್ ಸುಲ್ತಾನ್​ನ ಇಸ್ಲಾಂ ಧರ್ಮದ ಖಲೀಫ್ ಅಧಿಕಾರವನ್ನು ಕಿತ್ತೆಸೆದಿದ್ದರು. ಅದನ್ನು ಉಳಿಸಿಕೊಳ್ಳಲು ಭಾರತೀಯ ಮುಸ್ಲಿಮರು ಬ್ರಿಟಿಷ್ ಸರ್ಕಾರದ ಮೇಲೆ ಒತ್ತಡ ತಂದು ನಡೆಸಿದ ಆಂದೋಲನವೆ ಖಿಲಾಫತ್ ಚಳವಳಿ (1919-1922). ತುರ್ಕೀಯ ಆ ಘಟನೆ ಭಾರತೀಯ ಮುಸ್ಲಿಮರ ಧಾರ್ಮಿಕ ಭಾವನೆಗಳನ್ನು ಗಾಯಗೊಳಿಸಿತು. ಅವರು ಬ್ರಿಟಿಷರ ವಿರೋಧಿ ಆಕ್ರಮಣಕಾರಿ ಮನೋಭಾವ ಅಳವಡಿಸಿಕೊಂಡರು. ಖಿಲಾಫತ್ ಆಂದೋಲನವನ್ನು ಬ್ರಿಟಿಷರ ವಿರುದ್ಧದ ಅಸಹಕಾರ ಚಳುವಳಿ ಎಂದೇ ಕರೆಯಲಾಯಿತು.

'ಖಿಲಾಫತ್ ಮತ್ತು ಅಸಹಕಾರ ಚಳುವಳಿ' ಎಂಬ ಏಕೀಕೃತ ಚಳವಳಿಯಡಿ ಮುಸ್ಲಿಮರನ್ನು ಒಂದೇ ಸೂರಿನಡಿ ತರಲು ಗಾಂಧೀಜಿಯವರು ಪ್ರಯತ್ನಿಸಿದ್ದರು.

ಗಾಂಧೀಜಿಯವರು ಹೃದಯವೂರ್ವಕವಾಗಿ ಖಿಲಾಫತ್ ಚಳವಳಿಯ ಕಾರಣವನ್ನು ಸಮರ್ಥಿಸಿಕೊಂಡರು. ಆ ಸಮಯದಲ್ಲಿ ಹಿಂದೂ ಮತ್ತು ಮುಸ್ಲಿಮರ ನಡುವೆ ಅಭೂತಪೂರ್ವವಾದ ಭ್ರಾತೃತ್ವವಿತ್ತು. ಧಾರ್ಮಿಕ ಮತ್ತು ರಾಜಕೀಯ ಭಾವನೆಗಳನ್ನು ಪ್ರಸಾರ ಮಾಡಿ ಏಕೀಕೃತ ಅಹಿಂಸಾತ್ಮಕ, ಅಸಹಕಾರ ಚಳವಳಿಯನ್ನು ರೂಪಿಸಿದ್ದರು.1920ರಲ್ಲಿ ಕೋಲ್ಕತ್ತಾದಲ್ಲಿ ನಡೆದ ಕಾಂಗ್ರೆಸ್​ನ ವಾರ್ಷಿಕ ಸಮಾವೇಶ ಗಾಂಧೀಜಿಯ ನೀತಿಯನ್ನು ಅನುಮೋದಿಸಿತು. ಈ ಬಳಿಕ ನಾಗ್ಪುರದಲ್ಲಿ ನಡೆದ ಕಾಂಗ್ರೆಸಿನ ವಾರ್ಷಿಕ ಅಧಿವೇಶನದಲ್ಲಿಯೂ ಅದನ್ನೇ ಪುನರುಚ್ಚರಿಸಲಾಯಿತು.

ಖಿಲಾಫತ್ ಚಳವಳಿಯು ಭಾರತೀಯ ರಾಷ್ಟ್ರೀಯತಾವಾದಿ ಚಳವಳಿಯ ಮೇಲೆ ಬೀರಿದ ಪರಿಣಾಮಕ್ಕಿಂತ ಅದರ ಪ್ಯಾನ್- ಇಸ್ಲಾಂ ಧರ್ಮದ ಮೇಲೆ ಕಡಿಮೆ ಪರಿಣಾಮ ಬೀರಿತ್ತು. ಹಿಂದೂ- ಮುಸ್ಲಿಮರು ಒಗ್ಗೂಡಿ ಬ್ರಿಟಿಷ್ ವಸಾಹತುಶಾಹಿ ಆಡಳಿತದ ವಿರುದ್ಧ ಹೋರಾಡುತ್ತಿದ್ದರು. ಬ್ರಿಟಿಷರಿಗೆ ಭಾರತೀಯರ ಒಗ್ಗಟ್ಟಿನ ಪ್ರತಿರೋಧ ದೊಡ್ಡ ಸವಾಲಾಗಿತ್ತು.

ರಾಜಕೀಯ ನಂಬಿಕೆಯ ವಿಷಯಗಳಲ್ಲಿ ಹಿಂದೂಗಳು ಮತ್ತು ಮುಸ್ಲಿಮರು ಯುನೈಟೆಡ್ ಫ್ರಂಟ್ ರಚಿಸಬಹುದು ಎಂಬುದನ್ನು ಬ್ರಿಟಿಷರಿಗೆ ಸಾಬೀತುಪಡಿಸಲು ಗಾಂಧೀಜಿಯವರು ಖಿಲಾಫತ್ ಚಳವಳಿಯಡಿಯಲ್ಲಿ ಮುಸ್ಲಿಮರು ಮತ್ತು ಹಿಂದೂಗಳನ್ನು ಒಟ್ಟುಗೂಡಿಸಿದರು. ಈ ಪ್ರಯೋಗವು ಧಾರ್ಮಿಕ ಸಹಬಾಳ್ವೆ ಮತ್ತು ಶಾಂತಿವಾದದ ತತ್ವಗಳನ್ನು ಪರೀಕ್ಷಿಸಲು ಮತ್ತು ಸಾದರಪಡಿಸಲು ಸಾಧ್ಯವಾಯಿತು. ಗಾಂಧೀಜಿ ನೇತೃತ್ವದ ಆಂದೋಲನವು ಭಾರತದ ಎರಡು ಪ್ರಮುಖ ಧಾರ್ಮಿಕ ಸಮುದಾಯಗಳನ್ನು ಒಟ್ಟುಗೂಡಿಸಿತು. 'ಅಹಿಂಸೆ'ಯಂತಹ ಶಾಂತಿವಾದಿ ಗುಣಲಕ್ಷಣಗಳ ಮೂಲಕ ಜಗತ್ತಿಗೆ ತೋರಿಸಿಕೊಟ್ಟರು. ಸಹಬಾಳ್ವೆ ಮತ್ತು ಸಹಿಷ್ಣುತೆಯ ತತ್ವಗಳಿಂದ ಒಬ್ಬರು ಇನ್ನೊಬ್ಬರಿಗೆ ಬೆಂಬಲವಾಗಿದ್ದರೇ ತಮ್ಮ ಉದ್ದೇಶವನ್ನು ಸಾಧಿಸಿಕೊಳ್ಳಬಹುದು ಎಂಬುದನ್ನು ಬಾಪೂ ಸಾರಿದ್ದರು.

ಇಂದು ನಾವು ಮಾಹಿತಿ ಯುಗದಲ್ಲಿ ಅಥವಾ ಜ್ಞಾನ ಸ್ಫೋಟದ ಕಾಲದಲ್ಲಿ ವಾಸಿಸುತ್ತಿದ್ದೇವೆ. ಏಕಕಾಲದಲ್ಲಿ ನಾವು ಬಹು-ಧಾರ್ಮಿಕ, ಬಹು-ಸಾಂಸ್ಕೃತಿಕ, ಬಹು-ಜನಾಂಗೀಯ ಬಹು-ಸಮಾಜಗಳ ವ್ಯತ್ಯಾಸಗಳ ಜಗತ್ತಿನಲ್ಲಿ ಬದುಕುತ್ತಿದ್ದೇವೆ. ಜನರು ತಮ್ಮ ನಡುವಿನ ವೈವಿಧ್ಯತೆಗಳನ್ನು ತೆಗೆದುಹಾಕುವ ಹೋರಾಟದ ಜೀವನವನ್ನೂ ಕಾಣಬಹುದು. ಜಗತ್ತಿನಲ್ಲಿ ಏನೇ ನಡೆದರೂ ಶಾಂತಿಯುತವಾಗಿ ಸಹಬಾಳ್ವೆ ನಡೆಸುವ ಮಾರ್ಗಗಳನ್ನು ಕಾಣಬಹುದು. 'ಪ್ರಕೃತಿ ಏಕರೂಪತೆಯನ್ನು ಅಸಹ್ಯಪಡಿಸುತ್ತದೆ' ಎಂದ ಒಬ್ಬ ಸುಧಾರಕನ ಹೇಳಿಕೆಯನ್ನು ನೆನಪಿಸಿಕೊಳ್ಳಬಹುದು.

ಧಾರ್ಮಿಕ ಮತ್ತು ಜಾತ್ಯತೀತ ಪ್ರಪಂಚದಲ್ಲಿನ ಸಂಘರ್ಷ, ರಾಜಕೀಯ, ಅಕಾಡೆಮಿ, ಇಂಟರ್ಫೇತ್, ವಿಜ್ಞಾನ, ಕಲೆ, ಅರ್ಥಶಾಸ್ತ್ರ, ಜಾಗತಿಕ ಸಮಸ್ಯೆಗಳು ಸೇರಿದಂತೆ ಹಲವು ವಿಷಯಗಳ ಬಗ್ಗೆ ಜನರ ನಡುವೆ ಅರ್ಥಪೂರ್ಣ ಮತ್ತು ಸಕಾರಾತ್ಮಕ ಸಂವಾದದ ಮೂಲಕ ವ್ಯತ್ಯಾಸಗಳನ್ನು ನಿರ್ವಹಿಸಬಹುದು. ಸಂವಾದದ ಮುಖ್ಯ ಗುರಿ ವಿವಾದಾತ್ಮಕ ವಿಷಯಗಳಿಗೆ ಶಾಂತಿಯುತ ಪರಿಹಾರಗಳನ್ನು ಸಾಧಿಸಲು ಪ್ರಯತ್ನಿಸುವುದು. ವೈವಿಧ್ಯತೆಗಳ ಬಗ್ಗೆ ಸಹಿಷ್ಣುತೆಯ ಮನೋಭಾವವನ್ನು ಸೃಷ್ಟಿಸುವುದು ಮತ್ತು ಅದನ್ನು ಬೆಳೆಸಿ ಶಾಂತಿಯುತ ಸಮಾಜವನ್ನು ಕಟ್ಟುವುದು. ಒಗ್ಗೂಡಿ ಕಲಿಯುವ ಮೂಲಕ ಸಂಘರ್ಷಗಳನ್ನು ತೊಲಗಿಸಿ ಏಕತೆಯನ್ನು ಸಾಧಿಸಬಹುದು.

- ಅಸಾದ್ ಮಿರ್ಜಾ, ದೆಹಲಿ ಮೂಲದ ಪತ್ರಕರ್ತ

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.