ETV Bharat / bharat

ಸಂಕಷ್ಟ ತಪ್ಪಬೇಕೆಂದರೆ ಜೀವಜಲ ಉಳಿಸುವುದೇ ಉತ್ತಮ!

ನೀರೆಂಬುದು ಸಕಲ ಜೀವಜಗತ್ತಿನ ಜೀವತಂತು. ನೀರಿಲ್ಲದೇ ಯಾವ ಜೀವವೂ ಬದುಕುಳಿಯಲಾರದು. ಮನುಷ್ಯ ಜೀವಿ ಆಹಾರ ಸೇವಿಸದೇ ಕೆಲ ಕಾಲ ಬದುಕಬಲ್ಲ. ಆದರೆ, ನೀರಿಲ್ಲದೇ ಬದುಕಲಾರ. ಹೀಗಾಗಿ, ಜಲಮೂಲಗಳನ್ನು ರಕ್ಷಿಸುವುದು, ನೀರಿನ ದುರ್ಬಳಕೆ ತಡೆಯುವುದು ಹಾಗೂ ಹೊಸ ಜಲಮೂಲಗಳನ್ನು ಸೃಷ್ಟಿಸುವುದು ನಾಗರಿಕರು ಮತ್ತು ಸರ್ಕಾರಗಳಿಗೆ ಅನಿವಾರ್ಯ.

author img

By

Published : Nov 18, 2019, 9:41 PM IST

ಸಾಂದರ್ಭಿಕ ಚಿತ್ರ

ತೆಲುಗು ರಾಜ್ಯಗಳಲ್ಲಿ ಇತ್ತೀಚೆಗೆ ಸಮೃದ್ಧವಾಗಿ ಮಳೆಯಾಯಿತು. ಮೇಲ್ಭಾಗದ ಜಲಾನಯನ ಪ್ರದೇಶಗಳು ಉಕ್ಕಿ ಹರಿದಿದ್ದರಿಂದ ಕೃಷ್ಣಾ ಮತ್ತು ಗೋದಾವರಿ ನದಿಗಳಲ್ಲಿ ದೊಡ್ಡ ಪ್ರಮಾಣದ ಒಳಹರಿವು ಬಂದಿತು. ಭವಿಷ್ಯದ ಬಳಕೆಗಾಗಿ ಇದನ್ನು ಪರಿಣಾಮಕಾರಿಯಾಗಿ ಸಂಗ್ರಹಿಸಿಟ್ಟುಕೊಳ್ಳಬೇಕು. ಆದರೆ, ಈ ನಿಟ್ಟಿನಲ್ಲಿ ಯಾವುದೇ ಪ್ರಯತ್ನಗಳು ನಡೆದಿಲ್ಲ ಎಂಬುದು ನಿಜಕ್ಕೂ ಬೇಸರದ ಸಂಗತಿ.

1960ರಿಂದ ಈಚೆಗೆ ಜಾಗತಿಕವಾಗಿ ನೀರಿನ ಬಳಕೆ ಹೆಚ್ಚಾಗುತ್ತಿದೆ. ಇದರ ಪರಿಣಾಮವಾಗಿ ಜಲಮೂಲಗಳು ನಿಧಾನವಾಗಿ ನಶಿಸತೊಡಗಿವೆ. ಜಗತ್ತಿನ ಜನಸಂಖ್ಯೆಯ ಕಾಲು ಭಾಗ ಹೊಂದಿರುವ 17 ದೇಶಗಳು ನೀರಿನ ತೀವ್ರ ಕೊರತೆ ಎದುರಿಸುತ್ತಿವೆ. ಈ ದೇಶಗಳ ಕೃಷಿ, ಕೈಗಾರಿಕೆಗಳು ಹಾಗೂ ನಗರವಾಸಿಗಳು ಲಭ್ಯವಿರುವ ನೀರಿನ ಶೇ.80ರಷ್ಟು ಪಾಲನ್ನು ಬಳಸುತ್ತಿವೆ.

ಜಗತ್ತಿನ 3ನೇ ಒಂದು ಭಾಗದ ಜನಸಂಖ್ಯೆ ಹೊಂದಿರುವ 44 ದೇಶಗಳು ಶೇ.40ರಷ್ಟು ನೀರನ್ನು ಬಳಸುತ್ತಿದ್ದು, ಈಗ ಜಲಸಂಕಷ್ಟದ ಅಂಚಿನಲ್ಲಿವೆ. ನೀರಿನ ಲಭ್ಯತೆ ಹಾಗೂ ಪೂರೈಕೆ ನಡುವಿನ ಈ ಅಗಾಧ ಅಂತರದಿಂದಾಗಿ, ಬರಪೀಡಿತ ಪ್ರದೇಶ ಹೆಚ್ಚುತ್ತಿದೆ. ಜೀವನೋಪಾಯ, ಉದ್ಯೋಗ, ಕೃಷಿ ಉತ್ಪನ್ನ, ಆಹಾರ ಭದ್ರತೆ ಹಾಗೂ ವ್ಯಾಪಾರದ ಬಾಳಿಕೆಯ ಮೇಲೆ ಇದರ ತೀವ್ರತೆ ಉಂಟಾಗುತ್ತಿದೆ. ಹೆಚ್ಚುತ್ತಿರುವ ಜನಸಂಖ್ಯೆ, ನಗರಿಕರಣ, ಸಾಮಾಜಿಕ-ಆರ್ಥಿಕ ಅಭವೃದ್ಧಿ ಮತ್ತು ಕೈಗಾರಿಕರಣಗಳು ನೀರಿನ ಬೇಡಿಕೆಯನ್ನು ನಿರಂತರವಾಗಿ ಹೆಚ್ಚಿಸುತ್ತಿವೆ.

ಭಾರತದ ಶೇ.90ರಷ್ಟು ನಗರಗಳು ನೀರು ಪಡೆಯುತ್ತಿರುವುದು ನೀರಿನ ಪಂಪ್‌ಗಳಿಂದ. ಶೇಕಡಾ 80ಕ್ಕೂ ಹೆಚ್ಚು ಹಳ್ಳಿಗಳಲ್ಲಿ ನೀರಿನ ಪೂರೈಕೆಯಿಲ್ಲ. ಇದರಿಂದಾಗಿ ಮಹಿಳೆಯರು ಮತ್ತು ಮಕ್ಕಳು ನೀರು ತರಲು ಹಲವಾರು ಕಿಲೋಮೀಟರ್‌ ಕ್ರಮಿಸುವುದು ಅನಿವಾರ್ಯವಾಗಿದೆ. ಸ್ವಾತಂತ್ರ್ಯದ ನಂತರ ನೀರಾವರಿ ವ್ಯವಸ್ಥೆ ಹಾಗೂ ಜಲಾಶಯಗಳ ನಿರ್ಮಾಣದ ಮೇಲೆ ಸರ್ಕಾರಗಳು ತಮ್ಮ ಗಮನ ಕೇಂದ್ರೀಕರಿಸಿದವೇ ಹೊರತು ಕುಡಿಯುವ ನೀರಿನ ಮೂಲಗಳಿಗೆ ಮಹತ್ವ ನೀಡಲಿಲ್ಲ. ನಾಗರಿಕರ ಅವಶ್ಯಕತೆಗಳಿಗೆ ತಕ್ಕಂತೆ ಕುಡಿಯುವ ನೀರಿನ ಪರಿಣಾಮಕಾರಿ ಸದ್ಬಳಕೆಗೆ ಮಹತ್ವ ಕೊಡಬೇಕಾದ ಅನಿವಾರ್ಯತೆ ಕ್ರಮೇಣ ನಮ್ಮ ಸರ್ಕಾರಗಳಿಗೆ ಅರಿವಾಯಿತು. ಇದರ ಪರಿಣಾಮವಾಗಿ 1987ರಲ್ಲಿ ಮೊದಲ ರಾಷ್ಟ್ರೀಯ ಜಲ ನೀತಿಯನ್ನು ಪರಿಚಯಿಸಲಾಯಿತು.

ಬರ ಸಂಭವನೀಯ ಪ್ರದೇಶಗಳಲ್ಲಿ ಮುಂಗಾರು ಮಳೆಯೇ ನೀರಿನ ಪ್ರಮುಖ ಮೂಲ. ಉತ್ತರದ ರಾಜ್ಯಗಳಲ್ಲಿ ಮೇಲ್ಮೈ ನೀರಿನ ಮಟ್ಟ ಉನ್ನತ ಹಂತದಲ್ಲಿದೆ. ದಕ್ಷಿಣದ ರಾಜ್ಯಗಳಲ್ಲಿ ಪರಿಸ್ಥಿತಿ ಬೇರೆಯೇ ಆಗಿದೆ. ಈ ಭಾಗದಲ್ಲಿ ಮೇಲ್ಮೈ ಬಹುತೇಕ ಕಲ್ಲಿನಿಂದ ಕೂಡಿದ್ದು, ಮಳೆ ನೀರು ಸಂಗ್ರಹಿಸುವುದು ಕಷ್ಟಕರ. ಭಾರತದಾದ್ಯಂತ ಬಹುತೇಕ ಪ್ರದೇಶಗಳಲ್ಲಿ ಅದರಲ್ಲೂ ಮಳೆಗಾಲದಲ್ಲಿ ವಾರ್ಷಿಕ ಸರಾಸರಿ 500 ಮಿಲಿಮೀಟರ್‌ ಮಳೆ ದಾಖಲಾಗುತ್ತದೆ. ಈ ಪ್ರಮಾಣದ ಮಳೆಯನ್ನು ಗಮನದಲ್ಲಿಟ್ಟುಕೊಂಡು, 10-12 ಚದರ ಮೀಟರ್‌ ಪ್ರದೇಶದ ಮೇಲ್ಮೈ ಅಥವಾ ಭೂಗರ್ಭದಲ್ಲಿ ಮಳೆ ನೀರು ಸಂಗ್ರಹಕ್ಕೆ ವ್ಯವಸ್ಥೆ ಮಾಡಿಕೊಳ್ಳಬಹುದು.

ಇತ್ತೀಚಿನ ದಿನಗಳಲ್ಲಿ ರಾಜಸ್ತಾನ ಮತ್ತು ತಮಿಳುನಾಡಿನ ಜನರು ನೀರಿನ ತೀವ್ರ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ತಮಿಳುನಾಡಿನ ನೀರಿನ ಸಂಕಷ್ಟವಂತೂ ಎಲ್ಲರಿಗೂ ತಿಳಿದಿರುವಂಥದು. ಲಭ್ಯವಿರುವ ಮೇಲ್ಮೈ ನೀರನ್ನು ಸಂರಕ್ಷಿಸಲು ವಿಫಲವಾಗಿರುವುದು ಇದರಿಂದ ಸ್ಪಷ್ಟ. ಕೈಗಾರಿಕಾ ತ್ಯಾಜ್ಯಗಳು, ರಸಾಯನಿಕ ಗೊಬ್ಬರಗಳು ಹಾಗೂ ಇತರ ವಿಷಕಾರಿ ವಸ್ತುಗಳಿಂದ ಅಂತರ್ಜಲ ಕಲುಷಿತಗೊಂಡಿದೆ. ಕಳಪೆ ಗುಣಮಟ್ಟದ ಪಂಪ್‌ಗಳ ಬಳಕೆ ಹಾಗೂ ಅವುಗಳೊಳಗಿನ ಸೀಳುಗಳಿಂದ ಕುಡಿಯುವ ನೀರಿಗೆ ಚರಂಡಿ ನೀರು ಸೇರಿಕೊಳ್ಳುವುದರಿಂದ ಜನರು ಹಲವಾರು ರೋಗಗಳಿಗೆ ಈಡಾಗಲು ಕಾರಣವಾಗಿದೆ. ನೀರಿನ ತೀವ್ರ ಸಂಕಷ್ಟ ಎದುರಿಸುತ್ತಿರುವ ಮತ್ತೊಂದು ರಾಜ್ಯವೆಂದರೆ ರಾಜಸ್ತಾನ. ಕಾಲುವೆಗಳ ಮೂಲಕ ಕುಡಿಯುವ ನೀರು ಪಡೆಯುವ ಸೌಲಭ್ಯ ಈ ರಾಜ್ಯದಲ್ಲಿ ಅತ್ಯಲ್ಪ.

ನೀತಿ ಆಯೋಗದ 2018ರ ವರದಿಯ ಪ್ರಕಾರ, ನೀರಿನ ತೀವ್ರ ಕೊರತೆ ಎದುರಿಸುತ್ತಿರುವ ದೇಶಗಳ ಪೈಕಿ ಭಾರತ 13ನೇ ಸ್ಥಾನದಲ್ಲಿದೆ. ಜಗತ್ತಿನ ಕಾಲು ಭಾಗದಷ್ಟು ಜನಸಂಖ್ಯೆ ಹೊಂದಿರುವ 17 ದೇಶಗಳ ಜನಸಂಖ್ಯೆಗಿಂತ ಭಾರತದ ಜನಸಂಖ್ಯೆ ಮೂರು ಪಟ್ಟು ಹೆಚ್ಚಿದೆ. ಕೇಂದ್ರ ಅಂತರ್ಜಲ ಮಂಡಳಿಯ 2018ರ ವರದಿಯ ಪ್ರಕಾರ, ಅಂತರ್ಜಲ ಮಟ್ಟ ಪ್ರತಿ ವರ್ಷ 8 ಸೆಂಟಿಮೀಟರ್‌ನಷ್ಟು ಕಡಿಮೆಯಾಗುತ್ತಿದೆ. ಇದರ ಪರಿಣಾಮ ದೇಶದ ಆರ್ಥಿಕತೆಯ ಮೇಲೂ ಕಾಣಿಸಿಕೊಳ್ಳುತ್ತಿದೆ. ನೀರಿನ ವಿಷಯವನ್ನು ಗಂಭೀರವಾಗಿ ಪರಿಗಣಿಸದೇ ಹೋದರೆ, ಮುಂದಿನ ಕೆಲ ದಶಕಗಳಲ್ಲಿ ಪರಿಸ್ಥಿತಿ ಇನ್ನಷ್ಟು ವಿಷಮಿಸಲಿದೆ.

ಅಂತಾರಾಷ್ಟ್ರೀಯ ಸಂಪನ್ಮೂಲ ತಜ್ಞರ ಸಮಿತಿಯ 2019ರ ಸಮೀಕ್ಷೆಯ ಪ್ರಕಾರ, ನೀರಿನ ಕೊರತೆಯಲ್ಲಿ 8ನೇ ಸ್ಥಾನದಲ್ಲಿರುವ ಸೌದಿ ಅರೇಬಿಯಾ ದೇಶವು ಪ್ರತಿಯೊಂದು ಹನಿ ನೀರನ್ನೂ ಸಂರಕ್ಷಿಸಲು ಕ್ರಮಗಳನ್ನು ಕೈಗೊಂಡಿದ್ದು, ನೀರಿನ ಬಳಕೆ ಪ್ರಮಾಣವನ್ನು, ಒಂದು ದಶಕದ ಅವಧಿಯಲ್ಲಿ, ಶೇಕಡಾ 43ರಷ್ಟು ತಗ್ಗಿಸುವ ಗುರಿ ಹೊಂದಿದೆ. 37ನೇ ಸ್ಥಾನದಲ್ಲಿರುವ ನಮೀಬಿಯಾ ದೇಶವು, ಕಳೆದ 50 ವರ್ಷಗಳಿಂದ ಬಳಸಿದ ನೀರನ್ನು ಪುನರ್‌ಬಳಕೆ ಮಾಡುತ್ತ ಬಂದಿದೆ. 50ನೇ ಸ್ಥಾನದಲ್ಲಿರುವ ಆಸ್ಟ್ರೇಲಿಯಾ ದೇಶವು, ಬರ ಸಂದರ್ಭದಲ್ಲಿ ಗೃಹ ಬಳಕೆಯ ನೀರಿನ ಪ್ರಮಾಣವನ್ನು ಅರ್ಧದಷ್ಟು ಕಡಿತಗೊಳಿಸುತ್ತದೆ. 56ನೇ ಸ್ಥಾನದಲ್ಲಿರುವ ಚೀನಾ ದೇಶವು ನಿರ್ಮಾಣವಾಗಿರುವ ಹೊಸ ಕಟ್ಟಡಗಳಲ್ಲಿ ಮಳೆ ನೀರು ಸಂಗ್ರಹವನ್ನು ಅಳವಡಿಸುತ್ತಿದೆ.

ಆವಿಯಾಗುವುದು ಮತ್ತು ಬಾಷ್ಪೀಕರಿಸುವುದನ್ನು ಬಿಟ್ಟರೆ ಇನ್ಯಾವುದೇ ರೀತಿ ನೀರನ್ನು ಉತ್ಪತ್ತಿ ಮಾಡುವುದು ಸಾಧ್ಯವಿಲ್ಲ. ಸೀಮಿತ ಜಲ ಸಂಪನ್ಮೂಲಗಳನ್ನು ಎಚ್ಚರಿಕೆಯಿಂದ ಬಳಸುವುದನ್ನು ಬಿಟ್ಟರೆ ಬೇರೆ ದಾರಿಯೇ ಇಲ್ಲ. ಆದ್ದರಿಂದ, ಮಳೆಯ ಪ್ರತಿಯೊಂದು ಹನಿಯನ್ನೂ ಸಂರಕ್ಷಿಸಲೇಬೇಕು ಹಾಗೂ ಬಳಸಿದ ನೀರನ್ನು ಪುನರ್‌ಬಳಕೆ ಮಾಡಲೇಬೇಕು. ಬಳಸಿದ ನೀರಿನ ಮರುಬಳಕೆ ಹಾಗೂ ಕಡಿಮೆ ನೀರು ಬೇಡುವ ಬೆಳೆಗಳನ್ನು ಬೆಳೆಯಬೇಕಿರುವುದು ಈಗ ತಕ್ಷಣದ ಅವಶ್ಯಕತೆ. ಜಲಸಂರಕ್ಷಣೆಯಲ್ಲಿ ಜನತೆ ಕೂಡಾ ತಮ್ಮ ಹೊಣೆಗಾರಿಕೆಯನ್ನು ನಿಭಾಯಿಸಬೇಕಿದೆ. ಈ ಎಲ್ಲ ಕ್ರಮಗಳನ್ನು ಅನುಸರಿಸಿದಾಗ ಮಾತ್ರ ನಾವು ಸಂಕಷ್ಟ ಪರಿಸ್ಥಿತಿಯಿಂದ ಪಾರಾಗಬಲ್ಲೆವು.

Intro:Body:

water save, water save news, water save latest news, water save update, how to water save, ಜೀವಜಲ ಉಳಿಸು, ಜೀವಜಲ ಉಳಿಸುವ ಸುದ್ದಿ, ಜೀವಜಲ ಉಳಿಸುವುದು ಹೇಗೆ, 

Reduce, reuse, recycle can help processors meet water save goals

ಸಂಕಷ್ಟ ತಪ್ಪಬೇಕೆಂದರೆ ಜೀವಜಲ ಉಳಿಸುವುದೇ ಉತ್ತಮ!

ನೀರೆಂಬುದು ಸಕಲ ಜೀವಜಗತ್ತಿನ ಜೀವತಂತು. ನೀರಿಲ್ಲದೇ ಯಾವ ಜೀವವೂ ಬದುಕುಳಿಯಲಾರದು. ಮನುಷ್ಯ ಜೀವಿ ಆಹಾರ ಸೇವಿಸದೇ ಕೆಲ ಕಾಲ ಬದುಕಬಲ್ಲ. ಆದರೆ, ನೀರಿಲ್ಲದೇ ಬದುಕಲಾರ. ಹೀಗಾಗಿ, ಜಲಮೂಲಗಳನ್ನು ರಕ್ಷಿಸುವುದು, ನೀರಿನ ದುರ್ಬಳಕೆ ತಡೆಯುವುದು ಹಾಗೂ ಹೊಸ ಜಲಮೂಲಗಳನ್ನು ಸೃಷ್ಟಿಸುವುದು ನಾಗರಿಕರು ಮತ್ತು ಸರಕಾರಗಳಿಗೆ ಅನಿವಾರ್ಯ. 

ತೆಲುಗು ರಾಜ್ಯಗಳಲ್ಲಿ ಇತ್ತೀಚೆಗೆ ಸಮೃದ್ಧವಾಗಿ ಮಳೆಯಾಯಿತು. ಮೇಲ್ಭಾಗದ ಜಲಾನಯನ ಪ್ರದೇಶಗಳು ಉಕ್ಕಿ ಹರಿದಿದ್ದರಿಂದ, ಕೃಷ್ಣಾ ಮತ್ತು ಗೋದಾವರಿ ನದಿಗಳಲ್ಲಿ ದೊಡ್ಡ ಪ್ರಮಾಣದ ಒಳಹರಿವು ಬಂದಿತು. ಭವಿಷ್ಯದ ಬಳಕೆಗಾಗಿ ಇದನ್ನು ಪರಿಣಾಮಕಾರಿಯಾಗಿ ಸಂಗ್ರಹಿಸಿಟ್ಟುಕೊಳ್ಳಬೇಕು. ಆದರೆ, ಈ ನಿಟ್ಟಿನಲ್ಲಿ ಯಾವುದೇ ಪ್ರಯತ್ನಗಳು ನಡೆದಿಲ್ಲ ಎಂಬುದು ನಿಜಕ್ಕೂ ಬೇಸರದ ಸಂಗತಿ.

1960ರಿಂದ ಈಚೆಗೆ ಜಾಗತಿಕವಾಗಿ ನೀರಿನ ಬಳಕೆ ಹೆಚ್ಚಾಗುತ್ತಿದೆ. ಇದರ ಪರಿಣಾಮವಾಗಿ, ಜಲಮೂಲಗಳು ನಿಧಾನವಾಗಿ ನಶಿಸತೊಡಗಿವೆ. ಜಗತ್ತಿನ ಜನಸಂಖ್ಯೆಯ ಕಾಲು ಭಾಗ ಹೊಂದಿರುವ 17 ದೇಶಗಳು ನೀರಿನ ತೀವ್ರ ಕೊರತೆ ಎದುರಿಸುತ್ತಿವೆ. ಈ ದೇಶಗಳ ಕೃಷಿ, ಕೈಗಾರಿಕೆಗಳು ಹಾಗೂ ನಗರವಾಸಿಗಳು ಲಭ್ಯವಿರುವ ನೀರಿನ ಶೇಕಡಾ 80ರಷ್ಟು ಪಾಲನ್ನು ಬಳಸುತ್ತಿವೆ. 

ಜಗತ್ತಿನ ಮೂರನೇ ಒಂದು ಭಾಗದ ಜನಸಂಖ್ಯೆ ಹೊಂದಿರುವ 44 ದೇಶಗಳು ಶೇಕಡಾ 40ರಷ್ಟು ನೀರನ್ನು ಬಳಸುತ್ತಿದ್ದು, ಈಗ ಜಲಸಂಕಷ್ಟದ ಅಂಚಿನಲ್ಲಿವೆ. ನೀರಿನ ಲಭ್ಯತೆ ಹಾಗೂ ಪೂರೈಕೆ ನಡುವಿನ ಈ ಅಗಾಧ ಅಂತರದಿಂದಾಗಿ, ಬರಪೀಡಿತ ಪ್ರದೇಶ ಹೆಚ್ಚುತ್ತಿದೆ. ಜೀವನೋಪಾಯ, ಉದ್ಯೋಗ, ಕೃಷಿ ಉತ್ಪನ್ನ, ಆಹಾರ ಭದ್ರತೆ ಹಾಗೂ ವ್ಯಾಪಾರದ ಬಾಳಿಕೆಯ ಮೇಲೆ ಇದರ ತೀವ್ರತೆ ಉಂಟಾಗುತ್ತಿದೆ. ಹೆಚ್ಚುತ್ತಿರುವ ಜನಸಂಖ್ಯೆ, ನಗರೀಕರಣ, ಸಾಮಾಜಿಕ-ಆರ್ಥಿಕ ಅಭವೃದ್ಧಿ ಮತ್ತು ಕೈಗಾರೀಕರಣಗಳು ನೀರಿನ ಬೇಡಿಕೆಯನ್ನು ನಿರಂತರವಾಗಿ ಹೆಚ್ಚಿಸುತ್ತಿವೆ.

ಭಾರತದ ಶೇಕಡಾ 90ರಷ್ಟು ನಗರಗಳು ನೀರು ಪಡೆಯುತ್ತಿರುವುದು ನೀರಿನ ಪಂಪ್‌ ಗಳಿಂದ. ಶೇಕಡಾ 80ಕ್ಕೂ ಹೆಚ್ಚು ಹಳ್ಳಿಗಳಲ್ಲಿ ನೀರಿನ ಪೂರೈಕೆಯಿಲ್ಲ. ಇದರಿಂದಾಗಿ ಮಹಿಳೆಯರು ಮತ್ತು ಮಕ್ಕಳು ನೀರು ತರಲು ಹಲವಾರು ಕಿಲೋಮೀಟರ್‌ ಕ್ರಮಿಸುವುದು ಅನಿವಾರ್ಯವಾಗಿದೆ. ಸ್ವಾತಂತ್ರ್ಯದ ನಂತರ, ನೀರಾವರಿ ವ್ಯವಸ್ಥೆ ಹಾಗೂ ಜಲಾಶಯಗಳ ನಿರ್ಮಾಣದ ಮೇಲೆ ಸರಕಾರಗಳು ತಮ್ಮ ಗಮನ ಕೇಂದ್ರೀಕರಿಸಿದವೇ ಹೊರತು ಕುಡಿಯುವ ನೀರಿನ ಮೂಲಗಳಿಗೆ ಮಹತ್ವ ನೀಡಲಿಲ್ಲ. ನಾಗರಿಕರ ಅವಶ್ಯಕತೆಗಳಿಗೆ ತಕ್ಕಂತೆ ಕುಡಿಯುವ ನೀರಿನ ಪರಿಣಾಮಕಾರಿ ಸದ್ಬಳಕೆಗೆ ಮಹತ್ವ ಕೊಡಬೇಕಾದ ಅನಿವಾರ್ಯತೆ ಕ್ರಮೇಣ ನಮ್ಮ ಸರಕಾರಗಳಿಗೆ ಅರಿವಾಯಿತು. ಇದರ ಪರಿಣಾಮವಾಗಿ, 1987ರಲ್ಲಿ ಮೊದಲ ರಾಷ್ಟ್ರೀಯ ಜಲ ನೀತಿಯನ್ನು ಪರಿಚಯಿಸಲಾಯಿತು.

ಬರ ಸಂಭವನೀಯ ಪ್ರದೇಶಗಳಲ್ಲಿ ಮುಂಗಾರು ಮಳೆಯೇ ನೀರಿನ ಪ್ರಮುಖ ಮೂಲ. ಉತ್ತರದ ರಾಜ್ಯಗಳಲ್ಲಿ ಮೇಲ್ಮೈ ನೀರಿನ ಮಟ್ಟ ಉನ್ನತ ಹಂತದಲ್ಲಿದೆ. ದಕ್ಷಿಣದ ರಾಜ್ಯಗಳಲ್ಲಿ ಪರಿಸ್ಥಿತಿ ಬೇರೆಯೇ ಆಗಿದೆ. ಈ ಭಾಗದಲ್ಲಿ, ಮೇಲ್ಮೈ ಬಹುತೇಕ ಕಲ್ಲಿನಿಂದ ಕೂಡಿದ್ದು, ಮಳೆ ನೀರು ಸಂಗ್ರಹಿಸುವುದು ಕಷ್ಟಕರ. ಭಾರತದಾದ್ಯಂತ ಬಹುತೇಕ ಪ್ರದೇಶಗಳಲ್ಲಿ, ಅದರಲ್ಲೂ ಮಳೆಗಾಲದಲ್ಲಿ ವಾರ್ಷಿಕ ಸರಾಸರಿ 500 ಮಿಲಿಮೀಟರ್‌ ಮಳೆ ದಾಖಲಾಗುತ್ತದೆ. ಈ ಪ್ರಮಾಣದ ಮಳೆಯನ್ನು ಗಮನದಲ್ಲಿಟ್ಟುಕೊಂಡು, 10-12 ಚದರ ಮೀಟರ್‌ ಪ್ರದೇಶದ ಮೇಲ್ಮೈ ಅಥವಾ ಭೂಗರ್ಭದಲ್ಲಿ ಮಳೆ ನೀರು ಸಂಗ್ರಹಕ್ಕೆ ವ್ಯವಸ್ಥೆ ಮಾಡಿಕೊಳ್ಳಬಹುದು.

ಇತ್ತೀಚಿನ ದಿನಗಳಲ್ಲಿ ರಾಜಸ್ತಾನ ಮತ್ತು ತಮಿಳುನಾಡಿನ ಜನರು ನೀರಿನ ತೀವ್ರ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ತಮಿಳುನಾಡಿನ ನೀರಿನ ಸಂಕಷ್ಟವಂತೂ ಎಲ್ಲರಿಗೂ ತಿಳಿದಿರುವಂಥದು. ಲಭ್ಯವಿರುವ ಮೇಲ್ಮೈ ನೀರನ್ನು ಸಂರಕ್ಷಿಸಲು ವಿಫಲವಾಗಿರುವುದು ಇದರಿಂದ ಸ್ಪಷ್ಟ. ಕೈಗಾರಿಕಾ ತ್ಯಾಜ್ಯಗಳು, ರಸಾಯನಿಕ ಗೊಬ್ಬರಗಳು ಹಾಗೂ ಇತರ ವಿಷಕಾರಿ ವಸ್ತುಗಳಿಂದ ಅಂತರ್ಜಲ ಕಲುಷಿತಗೊಂಡಿದೆ. ಕಳಪೆ ಗುಣಮಟ್ಟದ ಪಂಪ್‌ಗಳ ಬಳಕೆ ಹಾಗೂ ಅವುಗಳೊಳಗಿನ ಸೀಳುಗಳಿಂದ ಕುಡಿಯುವ ನೀರಿಗೆ ಚರಂಡಿ ನೀರು ಸೇರಿಕೊಳ್ಳುವುದರಿಂದ, ಜನರು ಹಲವಾರು ರೋಗಗಳಿಗೆ ಈಡಾಗಲು ಕಾರಣವಾಗಿದೆ. ನೀರಿನ ತೀವ್ರ ಸಂಕಷ್ಟ ಎದುರಿಸುತ್ತಿರುವ ಮತ್ತೊಂದು ರಾಜ್ಯವೆಂದರೆ ರಾಜಸ್ತಾನ. ಕಾಲುವೆಗಳ ಮೂಲಕ ಕುಡಿಯುವ ನೀರು ಪಡೆಯುವ ಸೌಲಭ್ಯ ಈ ರಾಜ್ಯದಲ್ಲಿ ಅತ್ಯಲ್ಪ.

ನೀತಿ ಆಯೋಗದ 2018ರ ವರದಿಯ ಪ್ರಕಾರ, ನೀರಿನ ತೀವ್ರ ಕೊರತೆ ಎದುರಿಸುತ್ತಿರುವ ದೇಶಗಳ ಪೈಕಿ ಭಾರತ 13ನೇ ಸ್ಥಾನದಲ್ಲಿದೆ. ಜಗತ್ತಿನ ಕಾಲು ಭಾಗದಷ್ಟು ಜನಸಂಖ್ಯೆ ಹೊಂದಿರುವ 17 ದೇಶಗಳ ಜನಸಂಖ್ಯೆಗಿಂತ ಭಾರತದ ಜನಸಂಖ್ಯೆ ಮೂರು ಪಟ್ಟು ಹೆಚ್ಚಿದೆ. ಕೇಂದ್ರ ಅಂತರ್ಜಲ ಮಂಡಳಿಯ 2018ರ ವರದಿಯ ಪ್ರಕಾರ, ಅಂತರ್ಜಲ ಮಟ್ಟ ಪ್ರತಿ ವರ್ಷ 8 ಸೆಂಟಿಮೀಟರ್‌ನಷ್ಟು ಕಡಿಮೆಯಾಗುತ್ತಿದೆ. ಇದರ ಪರಿಣಾಮ ದೇಶದ ಆರ್ಥಿಕತೆಯ ಮೇಲೂ ಕಾಣಿಸಿಕೊಳ್ಳುತ್ತಿದೆ. ನೀರಿನ ವಿಷಯವನ್ನು ಗಂಭೀರವಾಗಿ ಪರಿಗಣಿಸದೇ ಹೋದರೆ, ಮುಂದಿನ ಕೆಲ ದಶಕಗಳಲ್ಲಿ ಪರಿಸ್ಥಿತಿ ಇನ್ನಷ್ಟು ವಿಷಮಿಸಲಿದೆ. 

ಅಂತಾರಾಷ್ಟ್ರೀಯ ಸಂಪನ್ಮೂಲ ತಜ್ಞರ ಸಮಿತಿಯ 2019ರ ಸಮೀಕ್ಷೆಯ ಪ್ರಕಾರ, ನೀರಿನ ಕೊರತೆಯಲ್ಲಿ 8ನೇ ಸ್ಥಾನದಲ್ಲಿರುವ ಸೌದಿ ಅರೇಬಿಯಾ ದೇಶವು ಪ್ರತಿಯೊಂದು ಹನಿ ನೀರನ್ನೂ ಸಂರಕ್ಷಿಸಲು ಕ್ರಮಗಳನ್ನು ಕೈಗೊಂಡಿದ್ದು, ನೀರಿನ ಬಳಕೆ ಪ್ರಮಾಣವನ್ನು, ಒಂದು ದಶಕದ ಅವಧಿಯಲ್ಲಿ, ಶೇಕಡಾ 43ರಷ್ಟು ತಗ್ಗಿಸುವ ಗುರಿ ಹೊಂದಿದೆ. 37ನೇ ಸ್ಥಾನದಲ್ಲಿರುವ ನಮೀಬಿಯಾ ದೇಶವು, ಕಳೆದ 50 ವರ್ಷಗಳಿಂದ, ಬಳಸಿದ ನೀರನ್ನು ಪುನರ್‌ಬಳಕೆ ಮಾಡುತ್ತ ಬಂದಿದೆ. 50ನೇ ಸ್ಥಾನದಲ್ಲಿರುವ ಆಸ್ಟ್ರೇಲಿಯಾ ದೇಶವು, ಬರ ಸಂದರ್ಭದಲ್ಲಿ ಗೃಹ ಬಳಕೆಯ ನೀರಿನ ಪ್ರಮಾಣವನ್ನು ಅರ್ಧದಷ್ಟು ಕಡಿತಗೊಳಿಸುತ್ತದೆ. 56ನೇ ಸ್ಥಾನದಲ್ಲಿರುವ ಚೀನಾ ದೇಶವು, ನಿರ್ಮಾಣವಾಗಿರುವ ಹೊಸ ಕಟ್ಟಡಗಳಲ್ಲಿ ಮಳೆ ನೀರು ಸಂಗ್ರಹವನ್ನು ಅಳವಡಿಸುತ್ತಿದೆ.

ಆವಿಯಾಗುವುದು ಮತ್ತು ಬಾಷ್ಪೀಕರಿಸುವುದನ್ನು ಬಿಟ್ಟರೆ ಇನ್ಯಾವುದೇ ರೀತಿ ನೀರನ್ನು ಉತ್ಪತ್ತಿ ಮಾಡುವುದು ಸಾಧ್ಯವಿಲ್ಲ. ಸೀಮಿತ ಜಲ ಸಂಪನ್ಮೂಲಗಳನ್ನು ಎಚ್ಚರಿಕೆಯಿಂದ ಬಳಸುವುದನ್ನು ಬಿಟ್ಟರೆ ಬೇರೆ ದಾರಿಯೇ ಇಲ್ಲ. ಆದ್ದರಿಂದ, ಮಳೆಯ ಪ್ರತಿಯೊಂದು ಹನಿಯನ್ನೂ ಸಂರಕ್ಷಿಸಲೇಬೇಕು ಹಾಗೂ ಬಳಸಿದ ನೀರನ್ನು ಪುನರ್‌ಬಳಕೆ ಮಾಡಲೇಬೇಕು. ಬಳಸಿದ ನೀರಿನ ಮರುಬಳಕೆ ಹಾಗೂ ಕಡಿಮೆ ನೀರು ಬೇಡುವ ಬೆಳೆಗಳನ್ನು ಬೆಳೆಯಬೇಕಿರುವುದು ಈಗ ತಕ್ಷಣದ ಅವಶ್ಯಕತೆ. ಜಲಸಂರಕ್ಷಣೆಯಲ್ಲಿ ಜನತೆ ಕೂಡಾ ತಮ್ಮ ಹೊಣೆಗಾರಿಕೆಯನ್ನು ನಿಭಾಯಿಸಬೇಕಿದೆ. ಈ ಎಲ್ಲ ಕ್ರಮಗಳನ್ನು ಅನುಸರಿಸಿದಾಗ ಮಾತ್ರ ನಾವು ಸಂಕಷ್ಟ ಪರಿಸ್ಥಿತಿಯಿಂದ ಪಾರಾಗಬಲ್ಲೆವು.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.