ETV Bharat / bharat

ಕೋವಿಡ್-‌19: ಕಟ್ಟುಕತೆಗಳು ಮತ್ತು ವಾಸ್ತವಾಂಶಗಳು, ಮರೆಯದೇ ನೋಡಿ.. - ಕೊವಿಡ್​​​-19 ವೈರಸ್​ ಹೇಗೆ ಹರಡುತ್ತದೆ.

ಭಾರತದಲ್ಲಿ ಮಹಾಮಾರಿ ಕೊರೊನಾ ಮೂರನೇ ಹಂತ ಪ್ರವೇಶಿಸಿದೆ. ಜನ ಪ್ರಾಣ ಭಯಕ್ಕೆ ಕೊರೊನಾ ಲಾಕ್​ಡೌನ್​ ಆಗಿದ್ದಾರೆ. ಆದರೆ, ಕೆಲವೊಂದಿಷ್ಟು ಕಾಣದ ಕೈಗಳು ವೈರಸ್​ ಬಗ್ಗೆ ಇಲ್ಲದ ಸಲ್ಲದ ಆಚರಣೆಗೆ ಬೆಂಬಲ ನೀಡುತ್ತಿವೆ. ಕೋವಿಡ್-‌19 ಅಥವಾ ಕೊರೊನಾ ವೈರಸ್‌ಗೆ ಸಂಬಂಧಿಸಿದಂತೆ ಹಲವಾರು ವದಂತಿಗಳು ಮತ್ತು ಕಟ್ಟುಕತೆಗಳು ಎಲ್ಲ ಕಡೆ ಹರಡುತ್ತಿವೆ. ಅಂತಹ ಕೆಲವೊಂದಿಷ್ಟು ಪ್ರಶ್ನೇಗಳಿಗೆ ಉತ್ತರ ಇಲ್ಲಿವೆ ನೋಡಿ...

real-facts-about-corona-virus
ಕೋವಿಡ್-‌19
author img

By

Published : Mar 31, 2020, 11:14 PM IST

ಇತ್ತೀಚಿನ ದಿನಗಳಲ್ಲಿ ಕಟ್ಟುಕತೆಗಳು, ವದಂತಿಗಳು ದೊಡ್ಡ ಪ್ರಮಾಣದಲ್ಲಿ ಹರಡುತ್ತಿವೆ. ಕೋವಿಡ್‌-19 ಭಾರತದಲ್ಲಿ ಮೂರನೇ ಹಂತ ಪ್ರವೇಶಿಸಿದೆ ಎಂಬುದು ಅವುಗಳ ಪೈಕಿ ಒಂದು. ಆದರೆ, ವಾಸ್ತವ ಏನೆಂದರೆ, ಸಮುದಾಯದಲ್ಲಿ ಹರಡುವ ಈ ಹಂತಕ್ಕೆ ಭಾರತ ಇನ್ನೂ ತಲುಪಿಯೇ ಇಲ್ಲ. ಕೋವಿಡ್-‌19 ಅಥವಾ ಕೊರೊನಾ ವೈರಸ್‌ಗೆ ಸಂಬಂಧಿಸಿದಂತೆ ಇಂತಹ ಹಲವಾರು ವದಂತಿಗಳು ಮತ್ತು ಕಟ್ಟುಕತೆಗಳು ಎಲ್ಲ ಕಡೆ ಹರಡುತ್ತಿವೆ. ಆದರೆ, ಅವೆಲ್ಲ ನಿಜವೆ? ಕೊರೊನಾ ವೈರಸ್‌ ಸಾಂಕ್ರಾಮಿಕ ರೋಗಕ್ಕೆ ಸಂಬಂಧಿಸಿದ ಅಂತಹ ಕೆಲವು ಕಟ್ಟುಕತೆಗಳು ಇಲ್ಲಿವೆ.

  1. ಆ್ಯಂಟಿ ಬಯಾಟಿಕ್ಗಳಿಂದ ಕೊವಿಡ್-‌19ನ್ನು ಗುಣಪಡಿಸಬಹುದೇ ಅಥವಾ ನಿಯಂತ್ರಿಸಬಹುದೆ?

ಇಲ್ಲ. ಆಂಟಿಬಯಾಟಿಕ್‌ಗಳು ಕೇವಲ ಬ್ಯಾಕ್ಟೀರಿಯಾಗಳ ಮೇಲಷ್ಟೇ ಪರಿಣಾಮಕಾರಿ. ಆದರೆ, ಕೋವಿಡ್‌-19 ವೈರಸ್‌ನಿಂದ ಬರುವುದರಿಂದ, ಆಂಟಿಬಯಾಟಿಕ್‌ಗಳು ಅದರ ಮೇಲೆ ಪರಿಣಾಮ ಬೀರುವುದಿಲ್ಲ.

2. ಬಿಸಿ ಹವಾಮಾನದಲ್ಲಿ ವೈರಸ್ಪ್ರಸರಣವಾಗುವುದಿಲ್ಲ

ಇದು ಸತ್ಯವಲ್ಲ. ಬಿಸಿ, ತೇವಾಂಶ ಅಥವಾ ತಂಪು ಹವಾಮಾನ ಸಹಿತ ಎಲ್ಲ ಪ್ರದೇಶಗಳಲ್ಲಿಯೂ ಕೊರೊನಾ ವೈರಸ್‌ ಹರಡುವ ಸಂಭವವಿದೆ. ಸಾಮಾಜಿಕ (ದೈಹಿಕ) ಅಂತರ ಕಾಯ್ದುಕೊಳ್ಳುವುದು ಅಥವಾ ಇತರರಿಂದ ಕೈಯಳತೆ ದೂರದಲ್ಲಿರುವುಂತಹ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವುದಷ್ಟೇ ನೀವು ಮಾಡಬಹುದಾದ ಉತ್ತಮ ಕೆಲಸ.

3. ಕೈ ಒಣಗಿಸುವ ಸಾಧನಗಳಿಂದ ವೈರಸ್ಕೊಲ್ಲಬಹುದು

ಇಲ್ಲ. ಕೈ ಒಣಗಿಸುವ ಸಾಧನಗಳು ಕೋವಿಡ್-‌19 ವೈರಸ್‌ ಕೊಲ್ಲುವಲ್ಲಿ ಪರಿಣಾಮಕಾರಿಯಲ್ಲ. ಸಾಬೂನು ಮತ್ತು ನೀರು ಅಥವಾ ಅಲ್ಕೋಹಾಲ್‌ ಆಧರಿತ ಶುಚಿಕಾರಕಗಳಿಂದ (ಸ್ಯಾನಿಟೈಸರ್‌) ಕೈ ತೊಳೆದುಕೊಳ್ಳುವುದು ಹಾಗೂ ಕಾಗದದ ವಸ್ತ್ರ ಅಥವಾ ಗಾಳಿ ಬೀಸುವ ಸಾಧನಗಳ ಮೂಲಕ ಕೈಗಳನ್ನು ಒಣಗಿಸುವಂತಹ ಮುನ್ನೆಚ್ಚರಿಕೆ ಕ್ರಮಗಳನ್ನು ಮಾತ್ರ ನೀವು ತೆಗದುಕೊಳ್ಳಬಹುದು.

4. ವಯಸ್ಸಾದವರು ಮತ್ತು ಮಕ್ಕಳಿಗೆ ಮಾತ್ರ ವೈರಸ್ಸೋಂಕು ತಗಲುತ್ತದೆ

ಇಲ್ಲ. ಎಲ್ಲಾ ವಯಸ್ಸಿನವರಿಗೂ ವೈರಸ್‌ ಸೋಂಕು ಬರುವ ಸಾಧ್ಯತೆಗಳಿವೆ. ವಯಸ್ಸಾದವರು ಹಾಗೂ ಆಸ್ತಮಾ, ಮಧುಮೇಹ ಮತ್ತು ಹೃದಯ ಸಂಬಂಧಿ ಕಾಯಿಲೆಯಂತಹ ಇತರ ವೈದ್ಯಕೀಯ ಕಾರಣಗಳಿಗಾಗಿ ತೊಂದರೆಯಲ್ಲಿರುವವರು ಈ ವೈರಸ್‌ನಿಂದಾಗಿ ತೀವ್ರವಾಗಿ ಕಾಯಿಲೆಪೀಡಿತರಾಗುವ ಅಪಾಯ ಹೊಂದಿರುತ್ತಾರೆ.

5. ದೇಹದ ಮೇಲೆ ಮದ್ಯಸಾರ (ಅಲ್ಕೋಹಾಲ್‌) ಸಿಂಪಡಿಸುವುದರಿಂದ ವೈರಸ್ಕೊಲ್ಲಬಹುದು

ಇಲ್ಲ. ಮದ್ಯಸಾರವನ್ನು (ಅಲ್ಕೋಹಾಲ್‌) ದೇಹದ ಮೇಲೆ ಸಿಂಪಡಿಸುವುದು ಅಥವಾ ಲೇಪಿಸುವುದರಿಂದ, ಮುಖ್ಯವಾಗಿ ಒಂದು ವೇಳೆ ಅದು ಕಣ್ಣುಗಳನ್ನು ಪ್ರವೇಶಿಸಿದರೆ, ಅಪಾಯವಾಗಬಲ್ಲುದು. ಅದಾಗ್ಯೂ ದೇಹದ ಮೇಲ್ಭಾಗವನ್ನು ಸೋಂಕುಮುಕ್ತವಾಗಿಸಲು ಮದ್ಯಸಾರವನ್ನು ಸೋಂಕು ನಿರೋಧಕದಂತೆ ಹಾಗೂ ಮದ್ಯಸಾರ ಆಧರಿತ ಶುಚಿಕಾರಕಗಳ ಬಳಕೆಯನ್ನು ಶಿಫಾರಸು ಮಾಡಲಾಗಿದೆ.

6. ಕೋವಿಡ್-‌೧೯ ಸೋಂಕುಪೀಡಿತರೆಲ್ಲರೂ ಸಾಯುತ್ತಾರೆ

ಇದು ಸತ್ಯವಲ್ಲ. ದುರ್ಬಲ ರೋಗನಿರೋಧಕ ಶಕ್ತಿ ಹೊಂದಿರುವ ಶೇಕಡಾ ಕೆಲ ಭಾಗದ ಜನರಿಗಷ್ಟೇ ಈ ವೈರಸ್‌ ಮಾರಕ. ಅಲ್ಪಸ್ವಲ್ಪ ಲಕ್ಷಣಗಳಿರುವ ಜನರನ್ನು ಚಿಕಿತ್ಸೆ ಮೂಲಕ ಗುಣಪಡಿಸಬಹುದು. ಆದ್ದರಿಂದ, ಇಂತಹ ಲಕ್ಷಣಗಳು ನಿಮಗೆ ಕಂಡು ಬಂದರೆ, ನೀವೂ ಪರೀಕ್ಷೆ ಮಾಡಿಸಿಕೊಳ್ಳಿ.

7. ಬೆಳ್ಳುಳ್ಳಿಯು ಕೊರೊನಾ ವೈರಸ್ನಿಂದ ರಕ್ಷಿಸುತ್ತದೆ

ಬೆಳ್ಳುಳ್ಳಿಯನ್ನು ಸೇವಿಸುವುದರಿಂದ ನೂತನ ಕೊರೊನಾ ವೈರಸ್​ ನಿಯಂತ್ರಿಸಬಹುದು ಎಂಬುದಕ್ಕೆ ಇದುವರೆಗೆ ಯಾವುದೇ ಪುರಾವೆ ದೊರಕಿಲ್ಲ. ಕೆಲ ಜಾತಿಯ ಬ್ಯಾಕ್ಟೀರಿಯಾಗಳ ಬೆಳವಣಿಗೆಯನ್ನು ಬೆಳ್ಳುಳ್ಳಿ ನಿಧಾನಿಸುತ್ತದೆ ಎಂದು ಕೆಲವು ಸಂಶೋಧಕರು ಹೇಳಿದ್ದಾರಾದರೂ, ಕೋವಿಡ್‌-19 ಹರಡುವುದು ವೈರಸ್‌ನಿಂದ.

8. ಗೋಮೂತ್ರ ವೈರಸ್ನಿಯಂತ್ರಿಸುತ್ತದೆ

ಸಾಂಪ್ರದಾಯಿಕ ಔಷಧ ಪದ್ಧತಿಯಲ್ಲಿ ಗೋಮೂತ್ರಕ್ಕೆ ಕೆಲವು ಔಷಧೀಯ ಗುಣಗಳಿವೆ ಎಂದು ಪರಿಗಣಿಸಲಾಗಿದೆ. ಆದರೆ, ಇದರ ಸೇವನೆಯಿಂದ ಕೊರೊನಾ ವೈರಸ್‌ ಸೋಂಕು ಬಾರದಂತೆ ತಡೆಗಟ್ಟಲು ಸಾಧ್ಯವಿಲ್ಲ.

“ಗುಣವಾಗುವುದಕ್ಕಿಂತ ಮುನ್ನೆಚ್ಚರಿಕೆ ವಹಿಸುವುದು ಉತ್ತಮ” ಎಂಬ ಮಾತಿನಂತೆ, ಸರಕಾರ ನೀಡಿದ ನಿರ್ದೇಶನಗಳನ್ನು ಪ್ರತಿಯೊಬ್ಬ ನಾಗರಿಕನೂ ಪಾಲಿಸಬೇಕು. ಸಾಮಾಜಿಕ (ದೈಹಿಕ) ಅಂತರ ಕಾಯ್ದುಕೊಳ್ಳುವುದು ಹಾಗೂ ಮನೆಯೊಳಗೇ ಇರುವಂತೆ ನೋಡಿಕೊಳ್ಳುವ ಆದೇಶಗಳನ್ನು ಪಾಲಿಸುವ ಮೂಲಕ ಕೋವಿಡ್-‌19 ಹರಡುವಿಕೆ ಪ್ರಮಾಣವನ್ನು ಕಡಿಮೆ ಮಾಡಬಹುದು. ಆದರೆ, ವಾಸ್ತವಕ್ಕಿಂತ ವದಂತಿಗಳು ಬಲು ಬೇಗ ಹರಡುತ್ತವೆ. ಆದ್ದರಿಂದ ವಾಸ್ತವಾಂಶಗಳು ಏನೆಂಬುದನ್ನು ಮೊದಲು ತಿಳಿದುಕೊಳ್ಳುವುದು ಉತ್ತಮ. ಆಗ, ಯಾವುದು ಸತ್ಯ ಎಂಬುದನ್ನು ನಂಬಲು ಸಾಧ್ಯ. ಸಾಂಕ್ರಾಮಿಕ ರೋಗ ವ್ಯಾಪಕವಾಗಿ ಹರಡುತ್ತಿರುವ ಇಂತಹ ಪರಿಸ್ಥಿತಿಯಲ್ಲಿ, ಒಬ್ಬ ಜವಾಬ್ದಾರಿಯುತ ನಾಗರಿಕರಾಗಿ, ನಾವು ವದಂತಿಗಳನ್ನು ನಂಬಲೂಬಾರದು, ಹರಡಲೂಬಾರದು. ಎಲ್ಲಾ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು ಹಾಗೂ ನಿಮ್ಮ ರೋಗನಿರೋಧಕ ಶಕ್ತಿ ಹೆಚ್ಚುವಂತೆ ನೋಡಿಕೊಳ್ಳಬೇಕು.

ರೋಗದೆಡೆಗಿನ ಭಯ ನಮ್ಮ ಮಾನಸಿಕ ಸಮತೋಲನದ ಮೇಲೆಯಷ್ಟೇ ಅಲ್ಲ, ದೈಹಿಕ ಕ್ಷಮತೆಯ ಮೇಲೂ ಪರಿಣಾಮ ಬೀರುತ್ತದೆ. ಆದ್ದರಿಂದ, ನಾವು ದಿಟ್ಟತನ ತೋರಬೇಕು. ಪ್ರಕೃತಿ ನಮ್ಮನ್ನೆಲ್ಲ ಹೊಸಕಿ ಹಾಕುವುದಿಲ್ಲ. ಆದ್ದರಿಂದ ಪ್ರಕೃತಿಯನ್ನು ಗೌರವಿಸೋಣ ಹಾಗೂ ನಮ್ಮನ್ನು ನಾವು ರಕ್ಷಿಸಿಕೊಳ್ಳೋಣ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.