ಜೈಪುರ(ರಾಜಸ್ಥಾನ): ನಮ್ಮ ವಿವಿಧ ಬೇಡಿಕೆಗಳಿಗೆ ರಾಜಸ್ಥಾನ ಸರ್ಕಾರ ಸ್ಪಂದಿಸುವುದಾಗಿ ಭರವಸೆ ನೀಡಿದೆ ಎಂದು ಗುಜ್ಜರ್ ಮುಖಂಡರೊಬ್ಬರು ಬುಧವಾರ ತಿಳಿಸಿದ್ದಾರೆ.
ರಾಜ್ಯ ಸರ್ಕಾರವು ಗುಜ್ಜರ್ ಸಮುದಾಯಕ್ಕೆ ಮೀಸಲಾತಿ ನೀಡಬೇಕು. ಸಂವಿಧಾನದ ಒಂಬತ್ತನೇ ಪರಿಚ್ಛೇದದಲ್ಲಿ ಸೇರಿಸಿ ಖಾಲಿ ಹುದ್ದೆಗಳನ್ನು ಭರ್ತಿಮಾಡಬೇಕು. ಮತ್ತು ಅತ್ಯಂತ ಹಿಂದುಳಿದ ವರ್ಗಗಳಿಗೆ(ಎಂಬಿಸಿ) ಶೇಕಡಾ 5 ರಷ್ಟು ಮೀಸಲಾತಿ ಹೆಚ್ಚಿಸಿ ಬಾಕಿ ಉಳಿದಿರುವ ನೇಮಕಾತಿ ಪ್ರಕ್ರಿಯೆ ಪೂರ್ಣ ಮಾಡಬೇಕು ಎಂದು ಗುಜ್ಜರ್ ಆರಕ್ಷಣ ಸಂಘರ್ಷ ಸಮಿತಿಯು ಬೇಡಿಕೆ ಇಟ್ಟಿತ್ತು.
ಗುಜ್ಜರ್ ಸಮುದಾಯದ ಸಂಘಟನೆಯು ತಮ್ಮ ಬೇಡಿಕೆಗಳ ಈಡೇರಿಕೆಗೆ ನವೆಂಬರ್ 1 ರಿಂದ ಪ್ರತಿಭಟನೆ ಪ್ರಾರಂಭಿಸಿತ್ತು. ಈ ವೇಳೆ ಹಿಂದಾನ್ - ಬಯಾನಾ ರಸ್ತೆ ಮತ್ತು ದೆಹಲಿ-ಮುಂಬೈ ರೈಲು ಮಾರ್ಗವನ್ನು ನಿರ್ಬಂಧಿಸಿ ಪ್ರತಿಭಟಿಸಲಾಗಿತ್ತು.
ಸದ್ಯ ಮಂತ್ರಿಮಂಡಲದೊಂದಿಗಿನ ಮ್ಯಾರಥಾನ್ ಸಭೆಯ ನಂತರ, ಕರ್ನಲ್ ಕಿರೋರಿ ಸಿಂಗ್ ಬೈನ್ಸ್ಲಾ ಸೇರಿದಂತೆ ಗುಜ್ಜರ್ ನಿಯೋಗ ಮುಖ್ಯಮಂತ್ರಿಗಳು ಅಶೋಕ್ ಗೆಹ್ಲೋಟ್ ಅವರನ್ನು ಭೇಟಿಯಾಗಿದ್ದಾರೆ. ಸದ್ಯ ಸರ್ಕಾರ ಅವರ ಬೇಡಿಕೆಗಳ ಪೂರೈಕೆಯ ಭರವಸೆ ನೀಡಿರುವ ಹಿನ್ನೆಲೆ ಭರತ್‌ಪುರದ ಬಯಾನಾದ ಪ್ರತಿಭಟನಾ ಸ್ಥಳದಲ್ಲಿ ತಮ್ಮ ಆಂದೋಲನವನ್ನು ರದ್ದುಗೊಳಿಸುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ನಿಯೋಗ ತಿಳಿಸಿದೆ.