ನವದೆಹಲಿ: ಪ್ರಸ್ತುತ ಹಣಕಾಸು ವಸ್ತುಸ್ಥಿತಿಯ ಬಗ್ಗೆ ವಿತ್ತೀಯ ನೀತಿ ಸಮಿತಿಯ (ಎಂಪಿಸಿ) ಮೂವರು ನೂತನ ಸದಸ್ಯರನ್ನು ಒಳಗೊಂಡ ಆರು ಸದಸ್ಯರ ಸಭೆಯು ಇಂದಿನಿಂದ ಆರಂಭವಾಗಲಿದ್ದು, ಶುಕ್ರವಾರದಂದು (ಅ.9) ರೆಪೊ ದರದ ಅಂತಿಮ ನಿರ್ಧಾರ ಪ್ರಕಟವಾಗಲಿದೆ.
ಮೂವರು ಹೊಸ ಸದಸ್ಯರೊಂದಿಗೆ ವಿತ್ತೀಯ ನೀತಿ ಸಮಿತಿಯ ಪುನರ್ ನಿರ್ಮಾಣದ ನಂತರ ಆರ್‌ಬಿಐ ಹಣಕಾಸು ಮತ್ತು ಸಾಲ ನೀತಿ ಸಭೆಯ ದಿನಾಂಕ ನಿನ್ನೆ ಘೋಷಣೆಯಾಗಿದೆ. ಇದಕ್ಕೂ ಮೊದಲು ಸೆಪ್ಟೆಂಬರ್ 29, 30 ಮತ್ತು ಅಕ್ಟೋಬರ್ 1ರಂದು ನಡೆಯಬೇಕಿತ್ತು. ಎಂಪಿಸಿ ಸಭೆ ಮುಂದೂಡುವುದಾಗಿ ರಿಸರ್ವ್ ಬ್ಯಾಂಕ್ ಘೋಷಿಸಿದ ನಂತರ, ಕೇಂದ್ರವು ಎಂಪಿಸಿ ಸಮಿತಿಗೆ ಮೂವರು ಹೊಸ ಸದಸ್ಯರನ್ನು ನೇಮಿಸಿತು.
ನೂತನ ಸದಸ್ಯರಾದ ಆತಿಮಾ ಗೋಯಲ್, ಜಯಂತ್ ಆರ್ ವರ್ಮಾ, ಮತ್ತು ಶಶಾಂಕ್ ಭಿಡೆ ಅವರು ಚೇತನ್ ಘೇಟ್, ಪಮ್ಮಿ ದುವಾ ಮತ್ತು ರವೀಂದ್ರ ಧೋಲಾಕಿಯಾ ಅವರ ಸ್ಥಾನದಲ್ಲಿ ಮುಂದುವರೆಯಲ್ಲಿದ್ದಾರೆ. 2024ರ ಅಕ್ಟೋಬರ್ರವರೆಗೆ ಇವರು ಕಾರ್ಯನಿರ್ವಹಿಸಲಿದ್ದಾರೆ.
ನೂತನ ಸದಸ್ಯರ ನೇಮಕದ ಬಳಿಕ ವಿತ್ತೀಯ ನೀತಿ ದೃಷ್ಟಿಕೋನ ನಾಟಕೀಯವಾಗಿ ಬದಲಾಗುತ್ತವೆ ಎಂದು ನಂಬುವಂತಿಲ್ಲ. ಈ ಹಿಂದಿನ ಕೊನೆಯ ನೀತಿ ಸಭೆಯಲ್ಲಿ, ಆರ್‌ಬಿಐನ ಆರೂ ಸದಸ್ಯರು ಹಣಕಾಸು ನೀತಿ ಸಮಿತಿಯು ಬಡ್ಡಿದರಗಳನ್ನು ಹಿಡಿದಿಡಲು ಸರ್ವಾನುಮತದಿಂದ ಮತ ಚಲಾಯಿಸಿದ್ದರು ಎಂಬ ಮಾತುಗಳು ಕೇಳಿಬರುತ್ತಿವೆ.
ಮುಂದಿನ ಹಣಕಾಸಿನ ಮೊದಲ ತ್ರೈಮಾಸಿಕದಲ್ಲಿ ಮಾತ್ರ ದರ ಕಡಿತಗೊಳಿಸುವ ಸಾಧ್ಯತೆ ಇದೆ ಎಂದು ವರದಿಯೊಂದು ತಿಳಿಸಿದೆ. 2021ರ ಫೆಬ್ರವರಿ ಎಂಪಿಸಿ ಸಭೆಯಲ್ಲಿ 25 ಬೇಸಿಸ್ ಪಾಯಿಂಟ್‌ಗಳ ಒಂದು ದರ ಕಡಿತ ಆಗಬಹುದು ಎಂದು ನಿರೀಕ್ಷಿಸಲಾಗಿದೆ. ಅಲ್ಲಿಯವರೆಗೆ ಕೇಂದ್ರೀಯ ಬ್ಯಾಂಕ್ ದ್ರವ್ಯತೆ ಮತ್ತು ನಿಯಂತ್ರಕ ಕ್ರಮಗಳ ಮೂಲಕ ಹಣಕಾಸಿನ ಸ್ಥಿತಿಗತಿಗಳನ್ನು ಸರಾಗಗೊಳಿಸುವಲ್ಲಿ ಮುಂದುವರೆಯಬಹುದು.
ಎಂಪಿಸಿ ಸಮಿತಿಯ ಪುನರ್ರಚನೆಯು ರಿಸರ್ವ್ ಬ್ಯಾಂಕ್ನ ನೀತಿ ಚರ್ಚೆಗಳಿಗೆ ಕೆಲವು ಹೊಸ ಆಲೋಚನೆಗಳನ್ನು ತರುವ ಸಾಧ್ಯತೆಯಿದೆ. ಸರ್ಕಾರ ಮತ್ತೊಮ್ಮೆ ಮೂವರು ಬಾಹ್ಯ ಸದಸ್ಯರನ್ನು ಅಕಾಡೆಮಿಯಿಂದ ಆಯ್ಕೆ ಮಾಡಿದೆ. ಹೊಸ ಸದಸ್ಯರು ಸ್ಥೂಲ ಅರ್ಥಶಾಸ್ತ್ರ, ಕೃಷಿ, ಅಭಿವೃದ್ಧಿ ಅರ್ಥಶಾಸ್ತ್ರ ಮತ್ತು ಹಣಕಾಸು ಮಾರುಕಟ್ಟೆಗಳ ಕ್ಷೇತ್ರಗಳಿಗೆ ಸೇರಿದವರಾಗಿದ್ದಾರೆ. ಎಂಪಿಸಿ ಕಳೆದ ಸಭೆಯಲ್ಲಿ ರೆಪೊ ದರವನ್ನು ಬದಲಿಸಲಿಲ್ಲ. ರೆಪೊ ದರ ಕಡಿತದತ್ತ ಮುಂದಿನ ಕ್ರಮಗಳನ್ನು ತೆಗೆದುಕೊಳ್ಳುವ ಮೊದಲು ಹಣದುಬ್ಬರದ ಚಲನೆಗೆ ಅದು ಆದ್ಯತೆ ನೀಡಿತ್ತು.