ETV Bharat / bharat

ಕೊರೊನಾ ವೈರಸ್ ಸವಾಲುಗಳನ್ನು ಸ್ವೀಕರಿಸಲು ಆರ್‌ಬಿಐ ಸಿದ್ಧ: ಶಕ್ತಿಕಾಂತ್ ದಾಸ್ - rbi governor shaktikant das

ಕೊರೊನಾ ವೈರಸ್​ನಿಂದ ಉಂಟಾದ ಸವಾಲುಗಳನ್ನು ಸ್ವೀಕರಿಸಿ ದೇಶದ ಆರ್ಥಿಕತೆಯನ್ನು ಭದ್ರಪಡಿಸಿಕೊಳ್ಳಲು ಕೇಂದ್ರ ಬ್ಯಾಂಕ್ ಅಗತ್ಯವಿರುವ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ್​ ದಾಸ್ ಭರವಸೆ ನೀಡಿದ್ದಾರೆ.

das
das
author img

By

Published : Mar 6, 2020, 1:21 PM IST

ಮುಂಬೈ: ಕೊರೊನಾ ವೈರಸ್​ನಿಂದ ಉಂಟಾದ ಸವಾಲುಗಳನ್ನು ಸ್ವೀಕರಿಸಿ ದೇಶದ ಆರ್ಥಿಕತೆಯನ್ನು ಭದ್ರಪಡಿಸಿಕೊಳ್ಳಲು ಕೇಂದ್ರ ಬ್ಯಾಂಕ್ ಅಗತ್ಯವಿರುವ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ್​ ದಾಸ್ ಭರವಸೆ ನೀಡಿದ್ದಾರೆ.

ಚೀನಾದಲ್ಲಿ ಹುಟ್ಟಿರುವ ಮಾರಣಾಂತಿಕ ವೈರಸ್, ಸುಮಾರು 80 ದೇಶಗಳಿಗೆ ಹರಡಿ 3,300 ಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡಿದೆ.

ಕೊರೊನಾ ವೈರಸ್​ ಸೃಷ್ಟಿಸಿರುವ​ ಸವಾಲುಗಳನ್ನು ನಾವು ಸಮರ್ಥವಾಗಿ ಎದುರಿಸಲು ಸಾಧ್ಯವಿದೆ. ವೈರಸ್ ಕಾರಣದಿಂದಾಗಿ ಜಾಗತಿಕ ಬೆಳವಣಿಗೆ ಕುಂಠಿತವಾಗಲಿದೆ ಅನ್ನೋದು ಸತ್ಯ. ಆದರೆ ನಮ್ಮಲ್ಲಿ ವೈರಸ್​ನಿಂದ ಸೃಷ್ಟಿಯಾದ ಬಿಕ್ಕಟ್ಟಿನ ವಿರುದ್ಧ ಹೋರಾಡಲು ಸಾಕಷ್ಟು ಸಂಪನ್ಮೂಲಗಳಿವೆ. ಸಾಂಕ್ರಾಮಿಕ ಸವಾಲುಗಳಿಗೆ ಸ್ಪಂದಿಸುವಲ್ಲಿ ಮಧ್ಯ ಪ್ರವೇಶಿಸಲು ಆರ್‌ಬಿಐ ಸದಾ ಸಿದ್ಧವಾಗಿದೆ ಎಂದು ವಾಣಿಜ್ಯನಗರಿಯಲ್ಲಿ ನಡೆದ ಉದ್ಯಮ ಕಾರ್ಯಕ್ರಮವೊಂದರಲ್ಲಿ ಶಕ್ತಿಕಾಂತ್ ದಾಸ್​ ಹೇಳಿದ್ದಾರೆ.

ಚೀನಾವನ್ನು ಅವಲಂಬಿಸಿರುವ ಕೆಲ ಕ್ಷೇತ್ರಗಳ ಮೇಲೆ ಕೊರೋನಾ ವೈರಸ್ ಪರಿಣಾಮ ಬೀರುತ್ತದೆ. ಆದರೆ ಅದನ್ನು ನಿಯಂತ್ರಿಸುವ ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದು ಅವರು ಹೇಳಿದರು.

ನಮ್ಮ ದೇಶದ ಆರ್ಥಿಕತೆಯು ಜಾಗತಿಕ ಸರಪಳಿಯೊಂದಿಗೆ ಹೆಚ್ಚು ಸಂಯೋಜನೆಗೊಳ್ಳದ ಕಾರಣ, ಕೊರೊನಾ ವೈರಸ್ ಹರಡುವಿಕೆ ಭಾರತದ ಮೇಲೆ ಹೆಚ್ಚಿನ ಪರಿಣಾಮ ಬೀರುವುದಿಲ್ಲ ಎಂದು ಶಕ್ತಿಕಾಂತ ದಾಸ್ ಸ್ಪಷ್ಟಪಡಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.