ನವದೆಹಲಿ: ಆರ್ಬಿಐ ರೆಪೋ ರೇಟ್ನಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಈ ಹಿಂದಿನ 5.15ರ ದರವನ್ನೇ ಮುಂದುವರಿಸಿದೆ. ಮೂರು ದಿನಗಳ ಮಹತ್ವದ ಸಭೆ ಬಳಿಕ ಆರ್ಬಿಐ ಗವರ್ನರ್ ಶಕ್ತಿಕಾಂತ್ ದಾಸ ಸುದ್ದಿಗೋಷ್ಠಿ ನಡೆಸಿದರು. ಈ ಬಾರಿ ರೆಪೋ ದರದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಪ್ರಕಟಿಸಿದರು.
ಭಾರತೀಯ ಕೇಂದ್ರ ಬ್ಯಾಂಕ್ ತನ್ನ ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡದೇ ಇರುವುದರಿಂದ ರೂಪಾಯಿ ಮೌಲ್ಯದಲ್ಲಿ ಕುಸಿತ ಕಂಡು ಬಂದಿದೆ. 8 ಪೈಸೆ ಕುಸಿಯುವುದರೊಂದಿಗೆ ಡಾಲರ್ ವಿರುದ್ಧ 71.61 ರಲ್ಲಿ ವಹಿವಾಟು ನಡೆಸುತ್ತಿದೆ.
ಇನ್ನು ರಿಸರ್ವ್ ರೆಪೋ ದರದಲ್ಲೂ ಯಾವುದೇ ಬದಲಾವಣೆ ಮಾಡದಿರಲು ಆರ್ಬಿಐ ನಿರ್ಧರಿಸಿದೆ. ಈ ಹಿಂದಿನಂತೆ ಅದು ಶೇ 4.90 ರಲ್ಲೇ ಮುಂದುವರೆಯಲಿದೆ. ಹಣಕಾಸು ಹಿಂಜರಿತದ ಹಿನ್ನೆಲೆಯಲ್ಲಿ ಆರ್ಥಿಕ ನೀತಿಗಳ ಸಮಿತಿಯ ಮಹತ್ವದ ಮೂರು ದಿನಗಳ ಸಭೆ, ಸದ್ಯದ ಪರಿಸ್ಥಿತಿ ನಿಭಾಯಿಸುವ ಕುರಿತು ಮಹತ್ವದ ಚರ್ಚೆ ನಡೆಯಿತು.