ಹೈದರಾಬಾದ್: ಕೊರೊನಾದಿಂದ ಗುಣಮುಖರಾದವರಿಗೆ ಭವಿಷ್ಯದಲ್ಲಿ ಅರಿವಿನ ಸಮಸ್ಯೆ ಸೇರಿದಂತೆ ದೈಹಿಕ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆಯಿದ್ದು, ಇದರ ಪರಿಣಾಮವಾಗಿ ಅವರು ನಿರುದ್ಯೋಗ ಎದುರಿಸಬಹುದು ಎಂದು ಅಮೆರಿಕದ ಜಾನ್ಸ್ ಹಾಪ್ಕಿನ್ಸ್ ಮೆಡಿಸಿನ್‌ನ ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.
ಕೊರೊನಾದಿಂದ ಚೇತರಿಸಿಕೊಳ್ಳುವ ರೋಗಿಗಳು ಅರಿವಿನ ಮತ್ತು ದೈಹಿಕ ಬದಲಾವಣೆಗಳನ್ನು ಎದುರಿಸಬೇಕಾಗುತ್ತದೆ. ಇವರಲ್ಲಿ ದೈಹಿಕ ಶಕ್ತಿ ಮತ್ತು ಆಲೋಚನಾ ಸಾಮರ್ಥ್ಯ ಕಡಿಮೆ ಇರುತ್ತದೆ ಎಂದು ಸಂಶೋಧನೆ ಹೇಳಿದೆ.
ತೀವ್ರ ಉಸಿರಾಟದ ತೊಂದರೆಯಿಂದ ಚೇತರಿಸಿಕೊಳ್ಳುವ ರೋಗಿಗಳ ಬಗ್ಗೆ 2017ರಲ್ಲಿ ನಡೆಸಿರುವ ಅಧ್ಯಯನವನ್ನು ಕೊರೊನಾಗೆ ಹೋಲಿಕೆ ಮಾಡಿ ಸಂಶೋಧಕರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕೋವಿಡ್-19 ರೋಗಿಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಈ ಸ್ಥಿತಿಯು ಶ್ವಾಸಕೋಶದಲ್ಲಿ ಉರಿಯೂತವನ್ನು ಉಂಟುಮಾಡುತ್ತದೆ. ವಿಸ್ತೃತ ವಾತಾಯನದಿಂದಾಗಿ ಸಣ್ಣ ಉಸಿರಾಟದ ಚೀಲಗಳಲ್ಲಿ ದ್ರವದ ರಚನೆಯೊಂದಿಗೆ, ಬದುಕುಳಿದ 4 ರಲ್ಲಿ 3 ಜನರು ಗಳಿಕೆಯನ್ನು ಕಳೆದುಕೊಂಡಿದ್ದಾರೆ ಎಂದು ಬಹಿರಂಗಪಡಿಸಿದೆ.
ಐದು ವರ್ಷಗಳ ಗ್ರಹಿಕೆಯ ಪ್ರಕಾರ ಈ ರೀತಿ ಸಮಸ್ಯೆ ಎದುರಿಸಿದ ಮೂರನೇ ಒಂದು ಭಾಗದಷ್ಟು ಜನ ಮಾತ್ರ ಕೆಲಸಕ್ಕೆ ಮರಳಿದ್ದಾರೆ ಎಂದು ಈ ಅಧ್ಯಯನ ಹೇಳಿದೆ.