ತಿರುವನಂತಪುರ : ಎರಡು ಬಾರಿ ಮುಖ್ಯಮಂತ್ರಿಯಾಗಿದ್ದ ಉಮ್ಮನ್ ಚಾಂಡಿ ಕೇರಳದ ಅತ್ಯಂತ ಜನಪ್ರಿಯ ಮತ್ತು ಕಾರ್ಯನಿರತ ರಾಜಕಾರಣಿಯಾಗಿ ಮುಂದುವರಿದ್ರೂ, ಅವರು ತಮ್ಮ ಮೊಮ್ಮಗನೊಂದಿಗೆ ಕಳೆದ ಅಪರೂಪದ ಕ್ಷಣಗಳ ಎರಡು ನಿಮಿಷಗಳ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
75 ವರ್ಷದ ನಾಯಕನ ಜೀವನ ಕುರಿತು ಸಾಕ್ಷ್ಯಚಿತ್ರ ಚಿತ್ರೀಕರಿಸಲು ಬಂದಾಗ ಕ್ಯಾಥೊಲಿಕ್ ಪಾದ್ರಿಯೊಬ್ಬರು ತಮ್ಮ ಮೊಬೈಲ್ನಲ್ಲಿ ಚಾಂಡಿ ಅವರಿಗೆ ಗೊತ್ತಾಗದಂತೆ ವಿಡಿಯೋವನ್ನು ಚಿತ್ರೀಕರಿಸಿದ್ದಾರೆ.
ರಾಜಧಾನಿ ನಗರದ ಚಾಂಡಿ ಅವರ ನಿವಾಸದಲ್ಲಿ ಜುಲೈ 14ರ ಸಂಜೆ ಚಿತ್ರೀಕರಿಸಲಾಯಿತು. ಅವರ 13 ವರ್ಷದ ಮೊಮ್ಮಗ ಎಫಿನೋವಾ ಊಟದ ಟೇಬಲ್ನ ಮೇಲೆ ನಿಂತು, ಅಜ್ಜನನ್ನು ತಬ್ಬಿಕೊಂಡು ತಮಾಷೆ ಮಾಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು.
ನನ್ನ ಹಿರಿಯ ಮಗಳು ಮಾರಿಯಾ ಅವರ ಮಗ ಎಪಿನೋವಾ. ನಮ್ಮಿಬ್ಬರ ತುಂಟಾಟವನ್ನು ವಿಡಿಯೋವನ್ನು ಚಿತ್ರೀಕರಿಸಿದ್ದೇ ಇಬ್ಬರಿಗೂ ಗೊತ್ತಿರಲಿಲ್ಲ ಎಂದು ಚಾಂಡಿ ಹೇಳಿದರು. ನನ್ನ ಮಗನಿಗೆ 13 ವರ್ಷ. ಅವನು ತಂದೆಯೊಂದಿಗೆ ತಮಾಷೆಯಾಗಿರುತ್ತಾನೆ. ಅವರಿಗೊಬ್ಬ ಉತ್ತಮ ಸ್ನೇಹಿತ. ನನ್ನ ತಂದೆ ಹೆಚ್ಚು ಸಿಗುವುದಿಲ್ಲ. ಮತ್ತು ಎಪಿನೋವಾ ತಮ್ಮ ಅಜ್ಜನನ್ನು ಮುಕ್ತವಾಗಿ ನೋಡಿದಾಗಲೆಲ್ಲಾ ತಮಾಷೆಯಾಗಿರುತ್ತಾನೆ ಎಂದು ಮಾರಿಯಾ ಹೇಳಿದರು.