ತಿರುವನಂತಪುರಂ: 8ನೇ ತರಗತಿಯ ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಂಬ್ ಸ್ಕ್ವಾಡ್ ಎಸ್ಐ ಸಂಜೀವ್ ಕುಮಾರ್ ವಿರುದ್ಧ ಕೇರಳದ ತಿರುವನಂತಪುರಂನ ಪೆರೂರ್ಕಾಡಾ ಪೊಲೀಸರು ಪೊಕ್ಸೊ ಪ್ರಕರಣ ದಾಖಲಿಸಿದ್ದಾರೆ.
ಪೆರೂರ್ಕಾಡಾ ಪೊಲೀಸ್ ಎಸ್‌ಎಪಿ ಕ್ಯಾಂಪ್ ಬಳಿಯ ಪೊಲೀಸ್ ಕ್ವಾರ್ಟರ್ಸ್‌ನಲ್ಲಿ ಘಟನೆ ನಡೆದಿದೆ ಎನ್ನಲಾಗಿದೆ. ಕ್ವಾರ್ಟರ್ಸ್‌ನಲ್ಲಿ ಹತ್ತಿರದಲ್ಲೇ ವಾಸವಾಗಿರುವ ಸಬ್ ಇನ್ಸ್ಪೆಕ್ಟರ್ ಸಜೀವ್ ಕುಮಾರ್, ಅಲ್ಲಿನ ಮನೆಯೊಂದರಲ್ಲಿ ಬಾಲಕಿ ಒಬ್ಬಳೆ ಇದ್ದ ವೇಳೆ ಆಕೆಯ ಮೇಲೆ ಅತ್ಯಾಚಾರ ಎಸಗಲು ಪ್ರಯತ್ನ ಪಟ್ಟಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಬಾಲಕಿ ನೀಡಿರುವ ಗೌಪ್ಯ ಹೇಳಿಕೆ ಮೇರೆಗೆ ಪೊಲೀಸರು ತನಿಖೆ ನಡೆಸಿ, ದೂರು ದಾಖಲಿಸಿಕೊಂಡಿದ್ದು, ಎಸ್ಐ ವಿರುದ್ಧ ಪೊಕ್ಸೊ ಪ್ರಕರಣ ದಾಖಲಿಸಿದ್ದಾರೆ.