ರಾಂಚಿ (ಜಾರ್ಖಂಡ್): ಪೀಪಲ್ಸ್ ಲಿಬರೇಶನ್ ಫ್ರಂಟ್ ಆಫ್ ಇಂಡಿಯಾ (ಪಿಎಲ್‌ಎಫ್‌ಐ)ದ ಆರು ಜನ ನಕ್ಸಲರನ್ನು ರಾಂಚಿಯ ನಕ್ಸಲ್ ಪೀಡಿತ ಪ್ರದೇಶ ನಾಮ್‌ಕುಮ್‌ನಲ್ಲಿ ಬಂಧಿಸಲಾಗಿದೆ.
ಪಿಎಲ್‌ಎಫ್‌ಐನ ಕೆಲವು ಸಕ್ರಿಯ ಗುಂಪು ನಾಮ್‌ಕುಮ್‌ನಲ್ಲಿ ಒಟ್ಟುಗೂಡಿ, ಉದ್ಯಮಿಯೊಬ್ಬರ ಮೇಲೆ ದಾಳಿ ನಡೆಸಲು ಯೋಜಿಸುತ್ತಿದ್ದವು. ಈ ಬಗೆಗಿನ ಸುಳಿವಿನ ಮೇರೆಗೆ, ಎಸ್‌ಎಸ್‌ಪಿ ಸುರೇಂದ್ರ ಕುಮಾರ್ ಝಾ ಅವರು ತಂಡ ರಚಿಸಿಕೊಂಡು ದಾಳಿ ನಡೆಸಿದ್ದಾರೆ.
ಪೊಲೀಸ್ ತಂಡ ಸ್ಥಳಕ್ಕೆ ತಲುಪಿ ಆರು ಮಂದಿ ನಕ್ಸಲರನ್ನು ಬಂಧಿಸಿದೆ. ಪೊಲೀಸರು ಇನ್ನೂ ಅವರ ಗುರುತುಗಳನ್ನು ದೃಢೀಕರಿಸಿಲ್ಲ. ಆದರೆ ಈ ಉಗ್ರರಿಗೆ ಪಿಎಲ್ಎಫ್ಐ ಸುಪ್ರೀಮೋ ದಿನೇಶ್ ಗೋಪೆ ಅವನೊಂದಿಗೆ ಸಂಬಂಧವಿದೆ ಎಂದು ಹೇಳಲಾಗುತ್ತಿದೆ.
ಪೊಲೀಸರು ಬಂಧಿತರಿಂದ ದೊಡ್ಡ ಪ್ರಮಾಣದ ಶಸ್ತ್ರಾಸ್ತ್ರಗಳು ಮತ್ತು ಮದ್ದು ಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ.