ETV Bharat / bharat

ಹೃದಯಕ್ಕೆ ಹತ್ತಿರವಾಗಿದ್ದ ತಮ್ಮನನ್ನು ಕಳೆದುಕೊಂಡೆ: ಬಾಲು ನಿಧನಕ್ಕೆ ಕಂಬನಿ ಮಿಡಿದ ರಾಮೋಜಿ ರಾವ್​

ಗಾಯನ ಕ್ಷೇತ್ರದ ದಿಗ್ಗಜ ಎಸ್​​.ಪಿ. ಬಾಲಸುಬ್ರಹ್ಮಣ್ಯಂ ಅವರ ನಿಧನಕ್ಕೆ ರಾಮೋಜಿ ಗ್ರೂಪ್​​ ಚೇರ್ಮನ್​​ ರಾಮೋಜಿ ರಾವ್​ ತೀವ್ರ ಸಂತಾಪ ಸೂಚಿಸಿದ್ದಾರೆ.

ramoji group chairman ramoji rao
ರಾಮೋಜಿ ರಾವ್​ ಬಾವುಕ
author img

By

Published : Sep 25, 2020, 5:42 PM IST

Updated : Sep 25, 2020, 7:47 PM IST

ಹೈದರಾಬಾದ್​: ಗಾಯನ ಕ್ಷೇತ್ರದ ದಿಗ್ಗಜ ಎಸ್​​.ಪಿ. ಬಾಲಸುಬ್ರಹ್ಮಣ್ಯಂ ಅವರ ನಿಧನಕ್ಕೆ ರಾಮೋಜಿ ಗ್ರೂಪ್​​ ಚೇರ್ಮನ್​​ ರಾಮೋಜಿ ರಾವ್​ ತೀವ್ರ ಸಂತಾಪ ಸೂಚಿಸಿದ್ದಾರೆ. ಬಾಲು ಇನ್ನಿಲ್ಲ ಎಂಬುದನ್ನು ಕೇಳುತ್ತಿದ್ದರೆ, ಅರಗಿಸಿಕೊಳ್ಳಲಾಗದಷ್ಟು ನೋವು, ದುಃಖವಾಗಿದೆ. ಮನಸ್ಸು ಗೊಂದಲಕ್ಕೆ ಒಳಗಾಗಿದೆ ಎಂದು ಕಂಬನಿ ಮಿಡಿದಿದ್ದಾರೆ.

ಬಾಲು ಗಂಧರ್ವ ಗಾಯಕ ಮಾತ್ರವಲ್ಲ, ನನಗೆ ಅತ್ಯಂತ ಆತ್ಮೀಯನಾಗಿದ್ದ. ಹೃದಯಕ್ಕೆ ಹತ್ತಿರವಾಗಿದ್ದ ಸಹೋದರನನ್ನು ಕಳೆದುಕೊಂಡು ದಿಗ್ಭ್ರಾಂತನಾಗಿದ್ದೇನೆ. ಅವರ ಕಂಠ ತೆಲುಗು ಮಾತ್ರವಲ್ಲ ವಿಶ್ವ ಸಂಗೀತಕ್ಕೇ ಒಂದು ವರದಾನ ಎಂದು ರಾಮೋಜಿ ರಾವ್​ ಬಣ್ಣಿಸಿದ್ದಾರೆ.

ಬಾಲು ನಿಧನಕ್ಕೆ ಕಂಬನಿ ಮಿಡಿದ ರಾಮೋಜಿ ರಾವ್

ಬಾಲು ಅವರ 50 ವರ್ಷಗಳ ಸಿನಿ ಪ್ರಯಾಣದಲ್ಲಿ ಸಾವಿರಾರು ಸುಮಧುರ ಹಾಡುಗಳನ್ನು ನಮಗಾಗಿ ಕೊಟ್ಟಿದ್ದಾರೆ. ಎಷ್ಟು ನೆನಪಿಗೆ ಬಂದರೂ ಈ ಕ್ಷಣದಲ್ಲಿ ಸುರಿಯುವುದು ಮಾತ್ರ ಕಣ್ಣೀರ ಜಲಪಾತ. ನಮಗಾಗಿ ಅತ್ಯದ್ಭುತ ಮತ್ತು ಮಧುರವಾದ ಹಾಡುಗಳನ್ನು ಉಳಿಸಿ, ನಮ್ಮನ್ನು ಬಿಟ್ಟು ಅಗಲಿದ ಸ್ನೇಹಿತನಿಗೆ ಏನನ್ನೂ ಹೇಳಲಾಗದ ಮಹಾ ವಿಷಾದದ ಸಂಗತಿ ಇದು. ಬಾಲು ನಿಮಗೆ ಇದೇ ನಮ್ಮ ಆಶ್ರುತರ್ಪಣ ಎಂದು ರಾಮೋಜಿ ಅವರು ಕಣ್ಣೀರು ಹಾಕಿದ್ದಾರೆ.

Last Updated : Sep 25, 2020, 7:47 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.