ಅಯೋಧ್ಯ (ಉತ್ತರ ಪ್ರದೇಶ): ಭಾರತ ಮತ್ತು ಚೀನಾ ನಡುವೆ ಉದ್ವಿಗ್ನತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜುಲೈ 2ರಂದು ರಾಮಮಂದಿರ ನಿರ್ಮಾಣಕ್ಕೆ ಜರುಗಬೇಕಿದ್ದ 'ಭೂಮಿ ಪೂಜೆ' ಕಾರ್ಯಕ್ರಮವನ್ನು ಮುಂದೂಡಲಾಗಿದೆ.
ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನ ಕಾರ್ಯದರ್ಶಿ ಚಂಪತ್ ರಾಯ್ ಅವರು ಹೊರಡಿಸಿರುವ ಹೇಳಿಕೆಯಲ್ಲಿ ರಾಷ್ಟ್ರದ ಭದ್ರತೆ ದೃಷ್ಟಿಯಲ್ಲಿಟ್ಟುಕೊಂಡು ಈ ಕಾರ್ಯಕ್ರಮವನ್ನು ಮುಂದೂಡಿಕೆ ಮಾಡಲಾಗಿದೆ. ಪರಿಸ್ಥಿತಿ ಹತೋಟಿಗೆ ಬಂತರ ನಂತರ ಮುಂದಿನ ದಿನಗಳಲ್ಲಿ ಹೊಸ ದಿನಾಂಕವನ್ನು ಘೋಷಿಸಲಾಗುವುದು ಎಂದು ಹೇಳಿಕೆಯಲ್ಲಿ ತಿಳಿಸಿಲಾಗಿದೆ.
ಅಯೋಧ್ಯೆ ಭೇಟಿಯನ್ನು ಗುರುವಾರ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ರದ್ದುಪಡಿಸಿದ್ದಾರೆ. 'ಭೂಮಿ ಪೂಜೆ' ಕಾರ್ಯಕ್ರಮ ವ್ಯವಸ್ಥೆಗಳ ಪರಿಶೀಲಿಸಲು ಆಯೋಧ್ಯೆಗೆ ಬರುವುದಾಗಿ ಈ ಹಿಂದೆ ಟ್ವೀಟ್ ಮಾಡಿದ್ದರು.
ಗಾಲ್ವನ್ ಕಣಿವೆಯಲ್ಲಿ ತಮ್ಮ ಪ್ರಾಣವನ್ನೇ ಅರ್ಪಿಸಿದ ಸೇನಾ ಸಿಬ್ಬಂದಿಗೆ ಟ್ರಸ್ಟ್ ಗೌರವ ಸಲ್ಲಿಸಿದೆ. ದೇವಾಲಯದ ಟ್ರಸ್ಟ್ ತನ್ನ ವೆಬ್‌ಸೈಟ್ ಅನ್ನು (https://srjbtkshetra.org/) ತೆರೆದಿದೆ. ಅದರಲ್ಲಿ ದೇವಾಲಯ ನಿರ್ಮಾಣ ಮತ್ತು ಸಂಬಂಧಿತ ಸುದ್ದಿಗಳ ಕುರಿತು ತಿಳಿಸಲಾಗುತ್ತದೆ.