ಅಯೋಧ್ಯೆ (ಉತ್ತರ ಪ್ರದೇಶ): ಶ್ರೀ ರಾಮ ಜನ್ಮಭೂಮಿ ದೇವಸ್ಥಾನದಲ್ಲಿ ಪ್ರತಿದಿನ ನಡೆಯುವ ಐದು 'ಆರತಿ'ಗೆ ಭಕ್ತರು ಇನ್ಮುಂದೆ ಸಾಮಾಜಿಕ ಮಾಧ್ಯಮದಲ್ಲಿ ಮೂಲಕ ಸಾಕ್ಷಿಯಾಗಬಹುದು ಎಂದು ಆಡಳಿತ ಮಂಡಳಿ ತಿಳಿಸಿದೆ.
ಸಾಮಾಜಿಕ ಮಾಧ್ಯಮಗಳಾದ ಫೇಸ್‌ಬುಕ್, ಟ್ವಿಟ್ಟರ್ ಮತ್ತು ಯೂಟ್ಯೂಬ್‌ಗಳಲ್ಲಿ ದೇವರ ಆರತಿಯನ್ನು ನೇರ ಪ್ರಸಾರ ಮಾಡಲು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ವ್ಯವಸ್ಥೆ ಮಾಡುತ್ತಿದೆ.
ದೇವಾಲಯದ ಮುಖ್ಯ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ ಅವರು ಮಾತನಾಡಿ, ಬೆಳಗ್ಗೆ ನಡೆಯುವ 'ಮಂಗಳಾರತಿ' ನೇರ ಪ್ರಸಾರವಾಗಲಿದೆ. ಆನಂತರ 'ಶೃಂಗಾರ ಆರತಿ', ನಂತರ 'ಬಾಲ ಭೋಗ ಮತ್ತು ಆರತಿ' ಸಂಜೆ 'ಸಂಧ್ಯಾರತಿ' ಹಾಗೂ ಕೊನೆಯಲ್ಲಿ 'ಶಯಾನ್ ಆರತಿ' ನಡೆಯುತ್ತದೆ. ಇದಕ್ಕೆಲ್ಲ ಭಕ್ತರು ಸಾಮಾಜಿಕ ಜಾಲತಾಣದ ಮೂಲಕ ಸಾಕ್ಷಿಯಾಗಬಹುದು ಎಂದು ತಿಳಿಸಿದ್ದಾರೆ.
ದೇವಾಲಯದ ಟ್ರಸ್ಟ್ ನ ಫೇಸ್‌ಬುಕ್ ಪೇಜ್ ಈಗಾಗಲೇ ಚಾಲ್ತಿಯಲ್ಲಿದ್ದು, ಅಧಿಕೃತ ವೆಬ್‌ಸೈಟ್ ಅನ್ನು ಪ್ರಾರಂಭಿಸಲು ಸಿದ್ಧತೆ ನಡೆಯುತ್ತಿದೆ ಎಂದು ಅರ್ಚಕರು ಮಾಹಿತಿ ನೀಡಿದರು.
ಟ್ರಸ್ಟ್‌ನ ಕಚೇರಿ ಇದೀಗ ಕಾರ್ಯನಿರ್ವಹಿಸಲು ಪ್ರಾರಂಭಿಸಿದ್ದು, ದೇವಾಲಯ ನಿರ್ಮಾಣದ ಬಗೆಗಿನ ಎಲ್ಲಾ ಅಧಿಕೃತ ವಿವರಗಳನ್ನು ಟ್ರಸ್ಟ್ ವೆಬ್‌ಸೈಟ್ ಮೂಲಕ ಬಿಡುಗಡೆ ಮಾಡುತ್ತದೆ ಎಂದು ಟ್ರಸ್ಟ್ ಸದಸ್ಯ ಅನಿಲ್ ಮಿಶ್ರಾ ತಿಳಿಸಿದ್ದಾರೆ.