ETV Bharat / bharat

ರಾಮಮಂದಿರ ವಿವಾದ ಇಂದು ನಿನ್ನೆಯದಲ್ಲ: ಇಲ್ಲಿದೆ ಅಷ್ಟೂ ಡೀಟೇಲ್ಸ್​ - ರಾಮಮಂದಿರ ವಿಚಾರದಲ್ಲಿ ಸುಪ್ರೀಂ ಕೋರ್ಟ್​ ತೀರ್ಪು

ಆಗಸ್ಟ್‌ ೫ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭಗವಾನ್‌ ರಾಮನ ದೇವಸ್ಥಾನಕ್ಕೆ ಅಡಿಗಲ್ಲು ಇಡುವ ಮೂಲಕ, ೫೦ ವರ್ಷ ಹಳೆಯದಾದ ಹಾಗೂ ಬಹುಶಃ ಸಾಕಷ್ಟು ಸಂಕೀರ್ಣತೆ ಮತ್ತು ಹಿಂಸಾತ್ಮಕ ಕೋಮು ಘಟನೆಗಳಿಗೆ ಕಾರಣವಾಗಿದ್ದ ವಿಷಯವೊಂದಕ್ಕೆ ಮುಚ್ಚಳ ಹಾಕಿ ಭದ್ರಪಡಿಸಿದಂತಾಗುತ್ತದೆ ಎಂದು ತಮ್ಮಷ್ಟಕ್ಕೆ ತಾವೇ ಭರವಸೆ ಹೊಂದಬಹುದೇನೋ.

dss
ರಾಮಮಂದಿರ ವಿವಾದ ನಡೆದು ಬಂದ ಹಾದಿ
author img

By

Published : Aug 1, 2020, 8:42 AM IST

ನವದೆಹಲಿ: ರಾಮ ಮಂದಿರ ನಿರ್ಮಾಣ ವಿಷಯವು ಸಂಘ ಪರಿವಾರದ ಹೃದಯಕ್ಕೆ ಸದಾ ಹತ್ತಿರದ ವಿಷಯವಾಗಿತ್ತು. ಅದು ಎಷ್ಟು ತೀವ್ರವಾಗಿತ್ತೆಂದರೆ, ಇತ್ತೀಚಿನ ಎಲ್ಲ ಚುನಾವಣೆಗಳ ಪ್ರಣಾಳಿಕೆಗಳಲ್ಲಿ ಈ ವಿಷಯ ಮಹತ್ವದ ಸ್ಥಾನ ಪಡೆದುಕೊಂಡಿತ್ತು. ಹೀಗಿದ್ದರೂ, ತಮ್ಮ ಈ ಧ್ಯೇಯ ಹೇಗೆ ಈಡೇರಬಹುದು ಎಂಬುದರ ಬಗ್ಗೆ ಅವರ್ಯಾರಿಗೂ ಕಿಂಚಿತ್ತೂ ಸುಳಿವು ಇರಲಿಲ್ಲ. ಹೆಚ್ಚಿನ ಎಲ್ಲ ಪ್ರಯತ್ನಗಳು ಕೇವಲ ಮೇಜಿನ ಸುತ್ತ ಕೂತು ನಡೆಸಿದ ಮಾತುಕತೆಗಳಾಗಿದ್ದವು – ಈ ಪೈಕಿ ಡಜನ್‌ಗೂ ಹೆಚ್ಚು ಮಾತುಕತೆಗಳು ಮಧ್ಯಂತರ ಅವಧಿಯಲ್ಲಿ ನಡೆದವುಗಳಾಗಿದ್ದರೂ, ಅವುಗಳಿಂದ ಯಾವುದೇ ಫಲಿತಾಂಶ ಹೊಮ್ಮಿರಲಿಲ್ಲ.

ಅಂತಿಮ ಆದೇಶ ಹೊರಬೀಳುವುದಕ್ಕೆ ವೇದಿಕೆ ಸಿದ್ಧವಾಗಲು ನರೇಂದ್ರ ಮೋದಿ ಅವರು ಎರಡನೇ ಅವಧಿಗೆ, ಸಂಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಹಿಂದಿರುಗಿ ಬರಬೇಕಾಯಿತು. ಈ ಸಂದರ್ಭದಲ್ಲಿ ಮೋದಿ ಅವರು ಸುಪ್ರೀಂಕೋರ್ಟ್‌ನ ಮಾರ್ಗವನ್ನು ಹಿಡಿಯಲು ನಿರ್ಧರಿಸಿದರು. ದಶಕಗಳಿಂದ ಇತ್ಯರ್ಥ ಕಾಣದೇ ಇದ್ದ ವಿಷಯವನ್ನು ಮುಖ್ಯ ನ್ಯಾಯಮೂರ್ತಿ ನೇತೃತ್ವದ ಐವರು ಸದಸ್ಯರ ಸಾಂವಿಧಾನಿಕ ಪೀಠ ಅವಿರೋಧವಾಗಿ ಇತ್ಯರ್ಥಗೊಳಿಸಲು ತೆಗೆದುಕೊಂಡ ಅವಧಿ ಕೇವಲ 40 ದಿನಗಳು ಮಾತ್ರ.

1980 ರಷ್ಟು ಹಿಂದಿನಿಂದಲೇ, ರಾಮ ಮಂದಿರ / ಬಾಬ್ರಿ ಮಸೀದಿ ವಿಷಯವನ್ನು ಹಿಂದುತ್ವ ಧ್ಯೇಯದ ಸಶಕ್ತ ವಿಷಯ ಎಂದೇ ಸಂಘ ಪರಿವಾರ ಪರಿಗಣಿಸಿತ್ತು. ಅಯೋಧ್ಯೆಯ ಸರಯೂ ನದಿ ತಟಗಳಲ್ಲಿ, ಜನವರಿ 1984ರಲ್ಲಿ ಸಂಘ ಪರಿವಾರದ ಕಾರ್ಯಕರ್ತರ ಬೃಹತ್‌ ಪ್ರದರ್ಶನವನ್ನು ನಡೆಸಿತ್ತು ವಿಶ್ವ ಹಿಂದು ಪರಿಷತ್ತು. “ತಾಲಾ ಖುಲೋ ತಾಲಾ ಖುಲೋ, ಜನ್ಮಭೂಮಿ ಕಾ ತಾಲಾ ಖುಲೋ (ಬೀಗ ತೆಗೆಯಿರಿ, ಬೀಗ ತೆಗೆಯಿರಿ, ಜನ್ಮಭೂಮಿಯ ಬೀಗ ತೆಗೆಯಿರಿ) ಎಂಬುದು ಆ ಪ್ರದರ್ಶನದ ಘೋಷ ವಾಕ್ಯವಾಗಿತ್ತು.

ವಿಎಚ್‌ಪಿಯ ಈ ಪ್ರತಿಭಟನೆಯ ಬೆನ್ನೇರಿ ಬಂದಿದ್ದು ಬಿಜೆಪಿ. ರಾಮ ಜನ್ಮಭೂಮಿಯ ಬೀಗ ತೆರೆದು ಅಲ್ಲಿ ಪ್ರಾರ್ಥನೆ ಸಲ್ಲಿಸಲು ಫೈಜಾಬಾದ್‌ ನ್ಯಾಯಾಲಯ ಫೆಬ್ರವರಿ 1986ರಲ್ಲಿ ಹಿಂದುಗಳಿಗೆ ಅವಕಾಶ ನೀಡಿದ್ದು ವಿಎಚ್‌ಪಿ ಪ್ರತಿಭಟನೆಯ ಧ್ವನಿಗೆ ಇನ್ನಷ್ಟು ಬಲ ತಂದಿತು. ಆಗಸ್ಟ್‌ 1989 ರಂದು ಅಲಹಾಬಾದ್‌ ಹೈಕೋರ್ಟ್‌ ರಾಮ ಜನ್ಮಭೂಮಿ / ಬಾಬ್ರಿ ಮಸೀದಿ ಪ್ರಕರಣದ ಪ್ರಮುಖ ದಾವೆಯ ವಿಚಾರಣೆಯನ್ನು ವಹಿಸಿಕೊಂಡಿತು.

ಗೋಲಿಬಾರಿನಲ್ಲಿ 30 ಕ್ಕೂ ಹೆಚ್ಚು ಜನರ ಸಾವು

ಈ ಪ್ರಕರಣದ ಇತಿಹಾಸದಲ್ಲಿ ಮಹತ್ವದ ತಿರುವು ಬಂದಿದ್ದೇ ಅಲ್ಲಿಂದ. ನವೆಂಬರ್‌ 1989 ರ ಸಾರ್ವತ್ರಿಕ ಚುನಾವಣೆಗಳಿಗೆ ಮುಂಚೆ, ಆಗಿನ ರಾಜೀವ್‌ ಗಾಂಧಿ ಸರ್ಕಾರವು ವಿವಾದಿತ ಸ್ಥಳದಲ್ಲಿ ಪೂಜೆ ಕೈಂಕರ್ಯ ಕೈಗೊಳ್ಳಲು ವಿಎಚ್‌ಪಿಗೆ ಅವಕಾಶ ಮಾಡಿಕೊಟ್ಟಿತು. ಇದೇ ಸಂದರ್ಭ ಬಳಸಿಕೊಂಡು, ಮಂದಿರ ವಿಷಯಕ್ಕೆ ಸಂಬಂಧಿಸಿದಂತೆ ಅದರ ಸುತ್ತ ಭಾವೋನ್ಮಾದ ಹೆಚ್ಚಿಸುವ ಕೆಲಸವನ್ನು ವಿಎಚ್‌ಪಿ ಪ್ರಾರಂಭಿಸಿತು. ನವೆಂಬರ್‌ 1990 ರಂದು ಸಂಘ ಪರಿವಾರದ ಲಕ್ಷಾಂತರ ಕಾರ್ಯಕರ್ತರು, ಸರಕಾರದ ನಿಷೇಧವಿದ್ದಾಗ್ಯೂ, ಅಯೋಧ್ಯೆಗೆ ಬಂದು ಸೇರಿದರು. ಅವರೆಲ್ಲ ವಿವಾದಿತ ಸ್ಥಳಕ್ಕೆ ಮೆರವಣಿಗೆ ಪ್ರಾರಂಭಿಸಿದಾಗ ಅಂದಿನ ಮುಲಾಯಂ ಸಿಂಗ್‌ ಯಾದವ್‌ ಸರಕಾರ ಮಾತು ಕೇಳದ ಜನಜಂಗುಳಿಯ ಮೇಲೆ ಗೋಲಿಬಾರ್‌ಗೆ ಆದೇಶಿಸಿತು. ಆಗ ನಡೆದ ಪೊಲೀಸ್‌ ಗೋಲಿಬಾರಿನಲ್ಲಿ 30 ಕ್ಕೂ ಹೆಚ್ಚು ಜನ ಪ್ರಾಣ ಬಿಟ್ಟರು.

ಸಹಜವಾಗಿ,1991 ರ ಲೋಕಸಭಾ ಚುನಾವಣೆಗಳಲ್ಲಿ ಬಿಜೆಪಿಯ ಸ್ಥಾನ ಗಳಿಕೆ ಹೆಚ್ಚಿತು. ಆ ಸಂದರ್ಭದಲ್ಲಿ ಅದು 45 ಸ್ಥಾನಗಳನ್ನು ಗೆದ್ದುಕೊಂಡಿತು. ಆದರೆ, ವಿಧಾನಸಭೆಯಲ್ಲಿ ಮಾತ್ರ ಅದರ ಸ್ಥಾನ ಗಳಿಕೆ 57 ಸ್ಥಾನಗಳಿಂದ ಬೃಹತ್‌ 193 ಸ್ಥಾನಗಳಿಗೆ ಹೆಚ್ಚಳವಾಗಿಬಿಟ್ಟಿತು.

ಮಂಡಲ ಯೋಜನೆ ಫಲ ನೀಡಿದರೂ, ಬಿಜೆಪಿಯನ್ನು ಕಟ್ಟಿಹಾಕಲಾಗಲಿಲ್ಲ

ಬಿಜೆಪಿಯ ಈ ಅಬ್ಬರದ ವಿಜಯೋತ್ಸವ ರಥವನ್ನು ತಡೆದು ನಿಲ್ಲಿಸುವ ಕಾಂಗ್ರೆಸ್‌ ನಾಯಕತ್ವದ ಯಾವೊಂದು ಯೋಜನೆಯೂ ಫಲಿಸಲಿಲ್ಲ.1990 ರ ಸೆಪ್ಟೆಂಬರ್‌ನಲ್ಲಿ ಆಡ್ವಾಣಿ ಅವರು ಸೋಮನಾಥದಿಂದ ಅಯೋಧ್ಯೆಯವರೆಗೆ ಹಮ್ಮಿಕೊಂಡ ರಥ ಯಾತ್ರೆ ದೊಡ್ಡ ಪ್ರಮಾಣದಲ್ಲಿ ಜನರನ್ನು ಸೆಳೆಯಿತಲ್ಲದೇ ಎಲ್ಲೆಡೆ ಹಿಂದೂ ಅಲೆಯನ್ನು ಸೃಷ್ಟಿಸಲು ನೆರವಾಯಿತು. ಈ ವಿವಾದಾತ್ಮಕ ಪ್ರಕರಣದಲ್ಲಿ, ಬೀಗ ತೆರೆಸುವುದೂ ಸೇರಿದಂತೆ ಮಹತ್ವದ ತಿರುವುಗಳು ಒದಗಿ ಬಂದಿದ್ದು ಕಾಂಗ್ರೆಸ್‌ನಿಂದಾದರೂ, ಪರಿಸ್ಥಿತಿಯ ಲಾಭವನ್ನು ಸದಾ ಪಡೆದುಕೊಂಡಿದ್ದು ಮಾತ್ರ ಸಂಘ ಪರಿವಾರವೇ. ಪ್ರಧಾನಮಂತ್ರಿ ವಿ.ಪಿ. ಸಿಂಗ್‌ ಆದರೂ ಸಂಘ ಪರಿವಾರದ ಬೆಂಬಲವನ್ನು ತಿದ್ದುವಂತಹ ವಾಸ್ತವ ಯೋಜನೆಯನ್ನಾದರೂ ಹೊಂದಿದ್ದರು. ಕಮಂಡಲ ಎದುರಿಸಲು ಅವರು ಮಂಡಲ್‌ ಮುಂದೆ ತಂದರು. ಆಗಸ್ಟ್‌ 7,1990 ರಂದು ಮಂಡಲ ಆಯೋಗದ ಶಿಫಾರಸುಗಳನ್ನು ಒಪ್ಪಿಕೊಂಡ ವಿ.ಪಿ. ಸಿಂಗ್‌ ಸರ್ಕಾರ ಇತರ ಹಿಂದುಳಿದ ಜಾತಿಗಳ ಸದಸ್ಯರಿಗೆ ಉದ್ಯೋಗದಲ್ಲಿ ಶೇಕಡಾ 78 ರಷ್ಟು ಮೀಸಲಾತಿ ಕಲ್ಪಿಸುವ ಯೋಜನೆಯನ್ನು ಜಾರಿಗೊಳಿಸುವುದಾಗಿ ಘೋಷಿಸಿತು. ಕೆಲ ಮಟ್ಟಿಗೆ ಮಂಡಲ ಯೋಜನೆ ಫಲ ನೀಡಿದರೂ, ಬಿಜೆಪಿಯನ್ನು ಕಟ್ಟಿಹಾಕಲು ಅದಕ್ಕೆ ಸಾಧ್ಯವಾಗಲಿಲ್ಲ.

ಡಿಸೆಂಬರ್‌ 6,1992 : ಅಂತಿಮ ಮುಖಾಮುಖಿ ನಡೆದಿದ್ದು ಡಿಸೆಂಬರ್‌ 6,1992 ರಂದು, ವಿವಾದಿತ ಮಸೀದಿಯನ್ನು ನೆಲಕ್ಕೆ ಕೆಡವಿ ಹಾಕಿದಾಗ ಹಲವಾರು ಪತ್ರಕರ್ತರನ್ನು ಕರಸೇವಕರು ಹಿಮ್ಮೆಟ್ಟಿಸಿದರಲ್ಲದೇ, ಅವರ ಟೇಪ್‌ ರೆಕಾರ್ಡರ್‌ ಹಾಗೂ ಕ್ಯಾಮರಾಗಳನ್ನು ಕಸಿದುಕೊಂಡರು. ಬೃಹತ್‌ ಕಟ್ಟಡವನ್ನು ಕೇವಲ ನಾಲ್ಕು ಗಂಟೆಗಳಲ್ಲಿ ಕೆಳಕ್ಕೆ ಉರುಳಿಸುವವರೆಗೆ ನಮ್ಮನ್ನು ನೆಲದ ಮೇಲೆ ಕೂಡಿಸಿ ಕೆಟ್ಟದಾಗಿ ನಡೆಸಿಕೊಳ್ಳಲಾಯಿತು. ಈ ಪ್ರಕರಣದಲ್ಲಿ ಸಹ ಕಾಂಗ್ರೆಸ್‌ನ ಪ್ರಧಾನಮಂತ್ರಿ ನರಸಿಂಹ ರಾವ್‌ ಅವರ ನಿಷ್ಕ್ರಿಯತೆ ಸದಾ ಪರೀಶೀಲನೆಗೆ ಅರ್ಹವಾಗಿರುವಂಥದು.

1993ರರಲ್ಲಿ 68 ಎಕರೆ ಭೂಮಿ ಸ್ವಾಧೀನ

ನಂತರ1993 ಪಿ.ವಿ. ನರಸಿಂಹ ರಾವ್‌ ಅವರು ವಿವಾದಿತ ಸ್ಥಳಕ್ಕೆ ಹತ್ತಿರದಲ್ಲಿದ್ದ 68 ಎಕರೆ ಭೂಮಿಯನ್ನು ಸ್ವಾಧೀನ ಪಡಿಸಿಕೊಂಡರು.1992 ರಲ್ಲಿ ಕೆಡವಿ ಹಾಕಿದ ನಂತರ, ಈ ವಿವಾದಿತ ತಾಣವನ್ನು ಸಾರ್ವಜನಿಕರಿಗೆ ಸಂಪೂರ್ಣವಾಗಿ ನಿರ್ಬಂಧಿಸಲಾಯಿತು. ಲಾಲ್‌ ಕೃಷ್ಣ ಆಡ್ವಾಣಿ, ಮುರಳಿ ಮನೋಹರ ಜೋಶಿ, ಕಲ್ಯಾಣ್‌ ಸಿಂಗ್‌ ಮತ್ತು ಉಮಾ ಭಾರತಿ ಸಹಿತ ಸಂಘ ಪರಿವಾರಕ್ಕೆ ಸೇರಿದ 68 ನಾಯಕರ ಮೇಲೆ ಆರೋಪ ಹೊರಿಸಿದ ಲಿಬರ್ಹಾನ್‌ ಆಯೋಗ ಜೂನ್‌ 2009 ರಂದು ವರದಿ ಸಲ್ಲಿಸಿತು.

ಎರಡು ಭಾಗವಾಗಿ ವಿಭಜಿಸಿ ತೀರ್ಪು ನೀಡಿದ್ದ ಅಲಹಾಬಾದ್​ ಹೈಕೋರ್ಟ್​

ವಿವಾದಿತ ಸ್ಥಳವನ್ನು ಎರಡು ಭಾಗಗಳಾಗಿ ವಿಭಜಿಸಬೇಕು ಎಂದು ಅಲಹಾಬಾದ್‌ ಹೈಕೋರ್ಟ್‌ 2010 ಸೆಪ್ಟೆಂಬರ್ 30 ರಂದು ಬಹುಮತದ ತೀರ್ಪು ನೀಡಿದ ನಂತರ ಮತ್ತೊಮ್ಮೆ ದೇಶವ್ಯಾಪಿ ಆಂದೋಲನ ಪ್ರಾರಂಭವಾಯಿತು. ಆದರೆ, ಮೇ 2011ರಲ್ಲಿ ಸುಪ್ರೀಂ ಕೋರ್ಟ್‌ ಈ ತೀರ್ಪಿಗೆ ತಡೆಯಾಜ್ಞೆ ನೀಡಿತು.

2019ರ ಅಂತ್ಯದಲ್ಲಿ ವಿವಾದಕ್ಕೆ ಸುಪ್ರೀಂ ತೆರೆ

2019 ರ ಜನವರಿಯಲ್ಲಿ, ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯ್‌ ನೇತೃತ್ವದ ಐವರು ನ್ಯಾಯಮೂರ್ತಿಗಳನ್ನು ಒಳಗೊಂಡ ಸಾಂವಿಧಾನಿಕ ಪೀಠವು ಪ್ರಕರಣದ ವಿಚಾರಣೆ ಪ್ರಾರಂಭಿಸಿತಲ್ಲದೇ ಮಧ್ಯಸ್ಥಿಕೆ ಮೂಲಕ ಸಮಸ್ಯೆ ಪರಿಹಾರಕ್ಕೆ ಸಲಹೆ ನೀಡಿತು. ಆದರೆ, ಮಧ್ಯಸ್ಥಿಕೆ ಪ್ರಯತ್ನಗಳು ವಿಫಲವಾದ ನಂತರ, 2019 ರ ಆಗಸ್ಟ್‌ 6 ರಿಂದ ಪ್ರತಿ ದಿನ ವಿಚಾರಣೆ ನಡೆಸಲು ಪ್ರಾರಂಭಿಸಿ, ಭರವಸೆ ನೀಡಿದಂತೆ 40 ದಿನಗಳ ನಂತರ ತನ್ನ ತೀರ್ಪನ್ನು ಪ್ರಕಟಿಸಿತು. ಆ ಪ್ರಕಾರ, ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಉಸ್ತುವಾರಿ ನೋಡಿಕೊಳ್ಳಲೆಂದು ಒಂದು ಟ್ರಸ್ಟ್‌ ರಚಿಸಲಾಗಿದ್ದು, ಅದಕ್ಕಾಗಿ ಆಗಸ್ಟ್‌ 5, 2020 ರಂದು ಭೂಮಿಪೂಜೆ ನಡೆಸಲಾಗುತ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.