ETV Bharat / bharat

ಇಂದಿನಿಂದ ಮುಂಗಾರು ಅಧಿವೇಶನ... ಮೊದಲ ದಿನವೇ ಮೇಲ್ಮನೆ ಉಪಾಧ್ಯಕ್ಷರ ಸ್ಥಾನಕ್ಕೆ ನಡೆಯಲಿದೆ ಫೈಟ್ - ಮೇಲ್ಮನೆ ಉಪಾಧ್ಯಕ್ಷರ ಸ್ಥಾನ

ಇಂದಿನಿಂದ ಆರಂಭವಾಗಲಿರುವ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಮೇಲ್ಮನೆ ಉಪಾಧ್ಯಕ್ಷರ ಆಯ್ಕೆ ಪ್ರಮುಖ ವಿಷಯವಾಗಲಿದೆ.

Rajya Sabha to elect Deputy Chairman today
ಯಾರಿಗೆ ಒಲಿಯಲಿದೆ ಮೇಲ್ಮನೆ ಉಪಾಧ್ಯಕ್ಷರ ಸ್ಥಾನ
author img

By

Published : Sep 14, 2020, 8:09 AM IST

ನವದೆಹಲಿ: ಇಂದು ಆರಂಭವಾಗಲಿರುವ ಮಾನ್ಸೂನ್​ ಅಧಿವೇಶನದ ಮೊದಲ ದಿನ ರಾಜ್ಯಸಭೆಯು ತನ್ನ ಉಪಾಧ್ಯಕ್ಷರನ್ನು ಆಯ್ಕೆ ಮಾಡಲಿದ್ದು, ಎನ್‌ಡಿಎಯ ಪರ ಹರಿವಂಶ್ ನಾರಾಯಣ್‌ ಸಿಂಗ್ ಮತ್ತು ಆರ್‌ಜೆಡಿಯ ಮನೋಜ್ ಜಾ ಈ ಹುದ್ದೆಗೆ ಸ್ಪರ್ಧೆಯಲ್ಲಿದ್ದಾರೆ.

ಆಡಳಿತಾರೂಢ ಎನ್​ಡಿಎ ಪರ, ಬಿಜೆಪಿ ಮುಖ್ಯಸ್ಥ ಜೆ.ಪಿ.ನಡ್ಡಾ ಅವರು ಹರಿವಂಶ್ ಅವರನ್ನು ಬೆಂಬಲಿಸಿ ಮೊದಲ ನಿರ್ಣಯವನ್ನು ಮಂಡಿಸಲಿದ್ದು, ಪ್ರತಿಪಕ್ಷದ ನಾಯಕ ಗುಲಾಮ್ ನಬಿ ಆಜಾದ್ ಅವರು ಪ್ರತಿಪಕ್ಷಗಳಿಂದ ಮೊದಲ ನಿರ್ಣಯವನ್ನು ಮಂಡಿಸಲಿದ್ದಾರೆ. ಅಗತ್ಯವಿದ್ದರೆ ಮತದಾನ ನಡೆಯಬಹುದು.

ಸಂಸತ್ತಿನ ಮೇಲ್ಮನೆಯಲ್ಲಿ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಮತ್ತು ಅಮರ್ ಸಿಂಗ್ ಸೇರಿದಂತೆ ಇತ್ತೀಚೆಗೆ ನಿಧನರಾದ 18 ಮಂದಿ ಸಂಸದರಿಗೆ ಸಂತಾಪ ಸೂಚಿಸಲಾಗುತ್ತದೆ. ನಂತರ ಸರ್ಕಾರ ನಾಲ್ಕು ಸುಗ್ರೀವಾಜ್ಞೆಗಳನ್ನು ಮಸೂದೆಗಳಾಗಿ ಪರಿಚಯಿಸುತ್ತದೆ.

ಸಾಂಕ್ರಾಮಿಕ ರೋಗಗಳ (ತಿದ್ದುಪಡಿ) ಸುಗ್ರೀವಾಜ್ಞೆ, 2020ರ ಮೂಲಕ ತಕ್ಷಣದ ಶಾಸನವನ್ನು ರೂಪಿಸಬೇಕಾದ ಸಂದರ್ಭಗಳನ್ನು ಆರೋಗ್ಯ ಸಚಿವ ಹರ್ಷ ವರ್ಧನ್ ವಿವರಿಸಲಿದ್ದಾರೆ. ಗೃಹ ಸಚಿವ ಅಮಿತ್ ಶಾ ಅವರು 2020ರ ಮಂತ್ರಿಗಳ ಸಂಬಳ ಮತ್ತು ಭತ್ಯೆ (ತಿದ್ದುಪಡಿ) ಸುಗ್ರೀವಾಜ್ಞೆಯಿಂದ ತಕ್ಷಣದ ಶಾಸನವನ್ನು ರೂಪಿಸಬೇಕಾದ ಸಂದರ್ಭಗಳನ್ನು ವಿವರಿಸುವ ಹೇಳಿಕೆಯನ್ನು ಮಂಡಿಸಲಿದ್ದಾರೆ ಎಂದು ರಾಜ್ಯಸಭೆ ಬುಲೆಟಿನ್ ತಿಳಿಸಿದೆ.

ಆಯುಷ್ ಸಚಿವ ಶ್ರೀಪಾದ್ ಯೆಸ್ಸೊ ನಾಯಕ್ ಅವರು 2020ರಲ್ಲಿ ಹೋಮಿಯೋಪತಿ ಕೇಂದ್ರ ಮಂಡಳಿ (ತಿದ್ದುಪಡಿ) ಸುಗ್ರೀವಾಜ್ಞೆ ಮತ್ತು ಭಾರತೀಯ ಔಷಧ ಕೇಂದ್ರ ಮಂಡಳಿ (ತಿದ್ದುಪಡಿ) ಸುಗ್ರೀವಾಜ್ಞೆಯಿಂದ 2020ರ ತಕ್ಷಣದ ಶಾಸನಗಳ ಅಗತ್ಯತೆಗಳನ್ನು ವಿವರಿಸುವ ಹೇಳಿಕೆಗಳನ್ನು ಮಂಡಿಸಲಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.