ನವದೆಹಲಿ: ರಾಜ್ಯಸಭೆಯು ಶಾಶ್ವತವಾಗಿರುತ್ತೆ. ವೈವಿಧ್ಯತೆ ಮತ್ತು ದೇಶದ ಸಂಯುಕ್ತ ರಚನೆಯ ಮಹತ್ವವನ್ನು ಪ್ರತಿನಿಧಿಸುತ್ತದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
250ನೇ ರಾಜ್ಯಸಭೆ ಅಧಿವೇಶದ ವೇಳೆ ಮಾತನಾಡಿದ ಅವರು, ರಾಜ್ಯಸಭೆಯು ಭಾರತದ ಅಭಿವೃದ್ಧಿ ಪ್ರಯಾಣದ ಸಂಕೇತವಾಗಿದೆ. ಈ ಮನೆ ಅನೇಕ ಐತಿಹಾಸಿಕ ಕ್ಷಣಗಳನ್ನು ಕಂಡಿದೆ. ಇದು ಇತಿಹಾಸವನ್ನೂ ಸಹ ಮಾಡಿದೆ ಮತ್ತು ಇತಿಹಾಸವನ್ನೂ ನೋಡಿದೆ. ಇದು ದೂರದೃಷ್ಟಿ ಹೊಂದಿರುವ ಮನೆಯಾಗಿದೆ ಎಂದಿದ್ದಾರೆ.
ರಾಜ್ಯಸಭೆಯ ಬಗ್ಗೆ ಎರಡು ವಿಷಯಗಳು ಎದ್ದು ಕಾಣುತ್ತವೆ. ಒಂದು ಶಾಶ್ವತ ಸ್ವಭಾವ ಮತ್ತು ಭಾರತದ ವೈವಿಧ್ಯತೆಯ ಪ್ರತಿನಿಧಿಯೂ ಆಗಿದೆ. ಈ ಸದನವು ಭಾರತದ ಸಂಯುಕ್ತ ರಚನೆಗೆ ಮಹತ್ವ ನೀಡುತ್ತದೆ. ಚುನಾವಣಾ ರಾಜಕೀಯದಿಂದ ದೂರವಿರುವ ದೇಶ ಸೇವೆ ಮಾಡಲು ಆಸಕ್ತರಾಗಿರುವವರಿಗೆ ರಾಜ್ಯಸಭೆ ಅವಕಾಶ ನೀಡುತ್ತದೆ ಎಂದಿದ್ದಾರೆ. ಇಂದಿನಿಂದ ಆರಂಭವಾದ ಚಳಿಗಾಲದ ಅಧಿವೇಶನ ಡಿಸೆಂಬರ್ 13ರವರೆಗೂ ನಡೆಯಲಿದೆ.