ETV Bharat / bharat

ಭಾರತೀಯ ಸೇನೆಗೆ ರಫೇಲ್​ ಯುದ್ಧ ವಿಮಾನ ಅಧಿಕೃತ ಸೇರ್ಪಡೆಗೆ ಮುಹೂರ್ತ ಫಿಕ್ಸ್

author img

By

Published : Aug 28, 2020, 10:48 AM IST

ರಫೇಲ್​ ಯುದ್ಧ ವಿಮಾನ ಭಾರತೀಯ ಸೇನೆ ಸೇರ್ಪಡೆ ಕಾರ್ಯಕ್ರಮದಲ್ಲಿ ರಕ್ಷಣಾ ಸಚಿವರು ಮುಖ್ಯ ಅತಿಥಿಗಳಾಗಿರಲಿದ್ದು, ಫ್ರಾನ್ಸ್ ರಕ್ಷಣಾ ಸಚಿವರೂ ಸಹ ಭಾಗಿಯಾಗಲಿದ್ದಾರೆ. ಈ ಮೂಲಕ ಫ್ರಾನ್ಸ್ ಮತ್ತು ಭಾರತದೊಂದಿಗಿನ ಭಾಂದವ್ಯ ಇನ್ನಷ್ಟು ಗಟ್ಟಿಯಾಗಲಿದೆ ಎಂದು ರಕ್ಷಣಾ ಮೂಲಗಳು ಮಾಹಿತಿ ನೀಡಿವೆ.

Rajnath Singh to induct Rafales on Sept 10,
ಅಧಿಕೃತವಾಗಿ ಭಾರತೀಯ ಸೇನೆಗೆ ರಫೇಲ್​ ಯುದ್ಧ ವಿಮಾನ ಸೇರಿಸಲು ಮುಹೂರ್ತ

ನವದೆಹಲಿ: ಭಾರತೀಯ ವಾಯುಸೇನೆಗೆ ಆಗಮಿಸಿರುವ ಅತ್ಯಾಧುನಿಕ ರಫೇಲ್​​ ಯುದ್ಧ ವಿಮಾನಗಳು ಸೇನೆಯ ಬಲ ಹೆಚ್ಚಿಸಿವೆ. ಇದೀಗ ರಫೇಲ್​ ವಿಮಾನಗಳು ಅಧಿಕೃತವಾಗಿ ಸೇನೆಗೆ ಸೇರ್ಪಡೆಗೊಳ್ಳಲು ಮುಹೂರ್ತ ಫಿಕ್ಸ್​ ಆಗಿದೆ. ಇದೇ ಸೆಪ್ಟೆಂಬರ್ 10ರಂದು ಸೇನೆಗೆ ರಫೇಲ್ ವಿಮಾನಗಳು ಸೇರ್ಪಡೆಗೊಳ್ಳುತ್ತಿದ್ದು, ರಕ್ಷಣಾ ಸಚಿವ ರಾಜನಾಥ್ ಸಿಂಗ್ ವಿಮಾನಗಳನ್ನು ಸೇನೆಗೆ ಹಸ್ತಾಂತರಿಸಲಿದ್ದಾರೆ.

ಹರಿಯಾಣದ ಅಂಬಾಲ ಏರ್​ಬೇಸ್​​​​ನಲ್ಲಿ ಈ ಸಮಾರಂಭ ನಡೆಯಲಿದ್ದು, ಸಮಾರಂಭಕ್ಕೆ ಫ್ರಾನ್ಸ್ ರಕ್ಷಣಾ ಸಚಿವ ಫ್ಲೋರೆನ್ಸ್ ಪಾರ್ಲಿಗೂ ಆಹ್ವಾನ ನೀಡಲಾಗಿದೆ. ಸದ್ಯ ರಕ್ಷಣಾ ಸಚಿವರು ಈ ಮೊದಲು ನಿಗದಿಗೊಳಿಸಿರುವ ಸೆ. 4-6ರ ರಷ್ಯಾ ಪ್ರವಾಸದ ಬಳಿಕ ಈ ಕಾರ್ಯಕ್ರಮ ಜರುಗಲಿದೆ.

ರಫೇಲ್​ ಯುದ್ಧ ವಿಮಾನ ಸೇನೆಗೆ ಸೇರ್ಪಡೆಗೊಳಿಸುವ ಕಾರ್ಯಕ್ರಮದಲ್ಲಿ ರಕ್ಷಣಾ ಸಚಿವರು ಮುಖ್ಯ ಅತಿಥಿಗಳಾಗಿರಲಿದ್ದು, ಫ್ರಾನ್ಸ್ ರಕ್ಷಣಾ ಸಚಿವರೂ ಸಹ ಭಾಗಿಯಾಗಲಿದ್ದಾರೆ. ಈ ಮೂಲಕ ಫ್ರಾನ್ಸ್ ಮತ್ತು ಭಾರತದೊಂದಿಗಿನ ಭಾಂದವ್ಯ ಇನ್ನಷ್ಟು ಗಟ್ಟಿಯಾಗಲಿದೆ ಎಂದು ರಕ್ಷಣಾ ಮೂಲಗಳು ಮಾಹಿತಿ ನೀಡಿವೆ.

ಜುಲೈ 29ರಂದು ಫ್ರಾನ್ಸ್​ನಿಂದ 5 ರಫೇಲ್​​ ಯುದ್ಧ ವಿಮಾನಗಳು ಭಾರತಕ್ಕೆ ಆಗಮಿಸಿದ್ದು, 17 ಗೋಲ್ಡನ್​ ಸ್ಕ್ವಾಡ್ರನ್​ಗೆ ಈ ರಫೇಲ್​ ವಿಮಾನಗಳು ಸೇರ್ಪಡೆಗೊಳ್ಳಲಿವೆ. ಈ 5 ಯುದ್ಧ ವಿಮಾನಗಳಲ್ಲಿ 3 ಸಿಂಗಲ್ ಸೀಟರ್​ ಆಗಿದ್ದರೆ, 2 ಡಬಲ್​ ಸೀಟರ್​ ಆಗಿವೆ.

ಭಾರತ 2016ರಲ್ಲಿ 60 ಸಾವಿರ ಕೋಟಿ ರೂ. ಮೌಲ್ಯದ ಅತೀ ದೊಡ್ಡ ಒಪ್ಪಂದದ ಮೂಲಕ 30 ಯುದ್ಧ ವಿಮಾನ ತರಿಸಿಕೊಳ್ಳಲು ನಿರ್ಧರಿಸಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.