ETV Bharat / bharat

ಜೂ.24ಕ್ಕೆ ರಷ್ಯಾದಲ್ಲಿ 75ನೇ ವಿಜಯ ದಿವಸ​: ಕೇಂದ್ರ ರಕ್ಷಣಾ ಸಚಿವರೂ ಭಾಗಿ - ರಷ್ಯಾ- ಭಾರತ ಸಂಬಂಧ

ಎರಡನೇ ಮಹಾಯುದ್ಧದಲ್ಲಿ ನಾಜಿಗಳ ವಿರುದ್ಧ ಜಯ ಸಾಧಿಸಿದ ಹಿನ್ನೆಲೆಯಲ್ಲಿ ರಷ್ಯಾ ’ವಿಕ್ಟರಿ ದಿನವನ್ನು ಆಚರಣೆ ಮಾಡಲಿದ್ದು, ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್​ ಭಾಗಿಯಾಗಲಿದ್ದಾರೆ. ಅದಕ್ಕಾಗಿ ಅವರು ನವದೆಹಲಿಯಿಂದ ರಷ್ಯಾಗೆ ತೆರಳಿದರು.

Rajnath Singh
ರಕ್ಷಣಾ ಸಚಿವ ರಾಜನಾಥ್ ಸಿಂಗ್​
author img

By

Published : Jun 22, 2020, 10:02 AM IST

ನವದೆಹಲಿ: ಎರಡನೇ ವಿಶ್ವ ಯುದ್ಧದಲ್ಲಿ ಜರ್ಮನಿ ವಿರುದ್ಧ ಜಯಗಳಿಸಿದ್ದರ ನೆನಪಿಗಾಗಿ ಜೂನ್​ 24ರಂದು ರಷ್ಯಾ ಮಾಸ್ಕೋ ವಿಕ್ಟರಿ ದಿನವನ್ನು ಆಚರಿಸುತ್ತಿದ್ದು, ಕೇಂದ್ರ ರಕ್ಷಣಾ ಮಂತ್ರಿ ರಾಜನಾಥ್ ಸಿಂಗ್​ ಭಾಗಿಯಾಗಲಿದ್ದಾರೆ.

  • Delhi: Defence Minister Rajnath Singh departs for Moscow, Russia on a 3-day visit. During his visit to Russia, he'll hold talks on ways to further deepen India-Russia defence & strategic partnership&attend 75th Victory Day Parade of World War II. Defence Secy is accompanying him. https://t.co/PI90vkHRFu pic.twitter.com/XE4dde5PVE

    — ANI (@ANI) June 22, 2020 " class="align-text-top noRightClick twitterSection" data=" ">

ಎರಡನೇ ಮಹಾಯುದ್ಧದಲ್ಲಿ ಜಯ ಸಾಧಿಸಿ 75 ವರ್ಷಗಳು ತುಂಬಿದ್ದು, ಇದಕ್ಕಾಗಿ ಭಾರತದ ಮೂರೂ ಪಡೆಗಳ ಕೆಲವೊಂದು ತುಕಡಿಗಳು ಕೂಡಾ ಪಾಲ್ಗೊಂಡು ರೆಡ್​ ಸ್ಕ್ವೇರ್​ನಲ್ಲಿ ನಡೆಯಲಿರುವ ಪರೇಡ್​ನಲ್ಲಿ ಭಾಗವಹಿಸುವ ಸಾಧ್ಯತೆ ದಟ್ಟವಾಗಿದೆ. ಈ ತುಕಡಿಯಲ್ಲಿ ಕರ್ನಲ್​ ರ‍್ಯಾಂಕ್‌ನ ಸುಮಾರು 75 ಸಿಬ್ಬಂದಿ ಭಾಗಿಯಾಗಲಿದ್ದಾರೆ ಎಂದು ಸೇನಾ ಮೂಲಗಳು ಸ್ಪಷ್ಟನೆ ನೀಡಿವೆ.

  • Leaving for Moscow on a three day visit. The visit to Russia will give me an opportunity to hold talks on ways to further deepen the India-Russia defence and strategic partnership. I shall also be attending the 75th Victory Day Parade in Moscow.

    — Rajnath Singh (@rajnathsingh) June 22, 2020 " class="align-text-top noRightClick twitterSection" data=" ">

ಇದಕ್ಕೂ ಮೊದಲು ಮಾರ್ಚ್​ 9ಕ್ಕೆ ಈ ವಿಜಯೋತ್ಸವ ದಿನ ಆಚರಿಸಲಾಗಬೇಕಿತ್ತು. ಆದರೆ, ಕೊರೊನಾ ಮಹಾಮಾರಿ ಹಿನ್ನೆಲೆಯಲ್ಲಿ ಈ ವಿಜಯೋತ್ಸವ ದಿನವನ್ನು ಮುಂದೂಡಲಾಗಿತ್ತು. ಈಗ ಜೂನ್​ 24ಕ್ಕೆ ಮಾಸ್ಕೋ ವಿಜಯೋತ್ಸವ ದಿವಸವನ್ನು ಆಚರಿಸಲಾಗುತ್ತಿದೆ.

ಮಾಸ್ಕೋ ವಿಕ್ಟರಿ ದಿನದಲ್ಲಿ ಪಾಲ್ಗೊಳ್ಳುವ ಬಗ್ಗೆ ಟ್ವೀಟ್​ ಮಾಡಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮೂರು ದಿನಗಳ ರಷ್ಯಾ ಪ್ರವಾಸ ಮಾಡಲಿದ್ದು, ಜೂನ್ 24ರ ಸಮಾರಂಭದಲ್ಲಿಯೂ ಪಾಲ್ಗೊಳ್ಳಿದ್ದೇನೆ. ಜೊತೆಗೆ ಭಾರತ, ರಷ್ಯಾ ಸಂಬಂಧ ಸುಧಾರಣೆಯ ಮಾತುಕತೆಗಳು ನಡೆಯಲಿವೆ ಎಂದು ಸ್ಪಷ್ಟಪಡಿಸಿದ್ದಾರೆ. ಚೀನಾ- ಭಾರತ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ನೆಲಸಿರುವ ಈ ಸಂದರ್ಭದಲ್ಲಿ ರಾಜನಾಥ್​ ಸಿಂಗ್​ ರಷ್ಯಾ ಭೇಟಿ ಭಾರಿ ಕುತೂಹಲ ಕೆರಳಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.