ETV Bharat / bharat

'ರಕ್ಷಣೆ'ಯಲ್ಲಿ ಆತ್ಮ ನಿರ್ಭರ ಭಾರತ, 101 ಶಸ್ತ್ರಾಸ್ತ್ರಗಳ ಆಮದಿಗೆ ಬ್ರೇಕ್​..!

ಪ್ರಧಾನಿ ಮೋದಿ ಘೋಷಿಸಿರುವಂತೆ ಆತ್ಮ ನಿರ್ಭರ ಭಾರತಕ್ಕೆ ರಕ್ಷಣಾ ಇಲಾಖೆ ಒತ್ತು ನೀಡಲಿದ್ದು, ಸುಮಾರು 101 ವಸ್ತುಗಳ ಆಮದನ್ನು ರದ್ದು ಮಾಡಲಾಗುತ್ತದೆ ಎಂದು ಕೇಂದ್ರ ರಕ್ಷಣಾ ಸಚಿವರು ಟ್ವೀಟ್​ ಮಾಡಿದ್ದಾರೆ.

Rajnath Singh
ರಾಜನಾಥ್ ಸಿಂಗ್​
author img

By

Published : Aug 9, 2020, 10:58 AM IST

ನವದೆಹಲಿ: ರಕ್ಷಣಾ ಇಲಾಖೆಯು ಆತ್ಮ ನಿರ್ಭರ ಭಾರತ ಅಭಿಯಾನಕ್ಕೆ ಹೆಚ್ಚಿನ ಒತ್ತು ನೀಡಲಿದೆ. ಈ ನಿಟ್ಟಿನಲ್ಲಿ ದೇಶಿಯವಾಗಿ ರಕ್ಷಣಾ ಸಾಮಗ್ರಿಗಳ ಉತ್ಪಾದನೆ ಮಾಡುವ ಸಲುವಾಗಿ 101 ವಸ್ತುಗಳ ಆಮದನ್ನು ನಿರ್ಬಂಧಿಸಲಾಲಾಗುತ್ತದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸ್ಪಷ್ಟಪಡಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಸಚಿವರು, ರಕ್ಷಣಾ ಸಚಿವಾಲಯವು 101 ವಸ್ತುಗಳ ಪಟ್ಟಿಯನ್ನು ಸಿದ್ಧಪಡಿಸಿದೆ. ಇವುಗಳ ಆಮದನ್ನು ನಿರ್ಬಂಧಿಸಲಾಗಿದೆ. ರಕ್ಷಣೆಯಲ್ಲಿ ಸ್ವಾವಲಂಬನೆಗೆ ಇದು ಒಂದು ದೊಡ್ಡ ಹೆಜ್ಜೆಯಾಗಿದೆ ಎಂದಿದ್ದಾರೆ.

ರಕ್ಷಣಾ ಇಲಾಖೆಯ ವಿವಿಧ ಷೇರುದಾರರು, ಸೇನೆ, ಸರ್ಕಾರಿ ಹಾಗೂ ಖಾಸಗಿ ಉದ್ಯಮಗಳೊಂದಿಗೆ ಚರ್ಚಿಸಿ ಈ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ದೇಶದ ಪ್ರಸ್ತುತ ಸಾಮರ್ಥ್ಯವನ್ನು ಇಲ್ಲಿ ಗಣನೆಗೆ ತೆಗೆದುಕೊಳ್ಳಲಾಗಿದೆ. ಈ ನಿರ್ಧಾರದಿಂದಾಗಿ ತಮ್ಮದೇ ಆದ ವಿನ್ಯಾಸ ಮತ್ತು ಸಾಮರ್ಥ್ಯಗಳನ್ನು ಅಭಿವೃದ್ಧಿ ಪಡಿಸಿಕೊಳ್ಳಬಹುದು. ಡಿಆರ್​​ಡಿಒ ಮೂಲಕ ಸೇನೆಗೆ ಶಸ್ತ್ರಾಸ್ತ್ರಗಳನ್ನು ಪೂರೈಲಾಗುತ್ತದೆ ಎಂದು ರಾಜನಾಥ್ ಸಿಂಗ್ ತಿಳಿಸಿದ್ದಾರೆ.

ಸೇನೆಯ ಮೂರೂ ವಿಭಾಗಗಳಲ್ಲಿ ಶಸ್ತ್ರಾಸ್ತ್ರಗಳನ್ನು ಪೂರೈಸಲು ಏಪ್ರಿಲ್ 2015ರಿಂದ ಆಗಸ್ಟ್​ 2020ರವರೆಗೆ ಸುಮಾರು 3.5 ಲಕ್ಷ ಕೋಟಿ ರೂಪಾಯಿ ಮೊತ್ತದ 260 ಯೋಜನೆಗಳನ್ನು ರೂಪಿಸಲಾಗಿದೆ. ಮುಂದಿನ ಆರೇಳು ವರ್ಷಗಳಲ್ಲಿ ದೇಶಿಯ ಉದ್ಯಮದಲ್ಲಿ ರಕ್ಷಣಾ ಸಾಮಗ್ರಿಗಳ ಉತ್ಪಾದನೆಗೆ 4 ಲಕ್ಷ ಕೋಟಿ ರೂಪಾಯಿ ವಿನಿಯೋಗಿಸಲಾಗುತ್ತದೆ ಎಂದು ಟ್ವೀಟ್​ನಲ್ಲಿ ಸ್ಪಷ್ಟನೆ ನೀಡಲಾಗಿದೆ.

ಭೂಸೇನೆ ಹಾಗೂ ವಾಯುಪಡೆಗೆ ತಲಾ 1,30,000 ಕೋಟಿ, ನೌಕಾಪಡೆಗೆ 1,40,000 ರೂಪಾಯಿಯನ್ನು ಆತ್ಮ ನಿರ್ಭರದಡಿಯಲ್ಲಿ ವಿನಿಯೋಗಿಸಲಾಗುತ್ತದೆ ಎಂದು ಟ್ವೀಟ್​ನಲ್ಲಿ ಸ್ಪಷ್ಟನೆ ನೀಡಲಾಗಿದೆ.

ಭಾರತಕ್ಕೆ ಆಮದು ಮಾಡಲು ನಿರ್ಬಂಧಿಸಲಾಗಿರುವ ಪಟ್ಟಿಯಲ್ಲಿ ಸರಳ ಸಾಮಗ್ರಿಗಳು ಮಾತ್ರವಲ್ಲದೇ ರಕ್ಷಣಾ ಶಸ್ತ್ರಾಸ್ತ್ರಗಳಾದ ಫಿರಂಗಿ ಬಂದೂಕುಗಳು, ಆಕ್ರಮಣಕಾರಿ ಬಂದೂಕುಗಳು, ಸೋನಾರ್ ವ್ಯವಸ್ಥೆಗಳು, ಸಾರಿಗೆ ವಿಮಾನಗಳು, ಎಲ್‌ಸಿಹೆಚ್‌ಗಳು, ರಾಡಾರ್‌ಗಳು ಮತ್ತು ನಮ್ಮ ರಕ್ಷಣಾ ಸೇವೆಗಳ ಅಗತ್ಯಗಳನ್ನು ಪೂರೈಸಲು ಅನೇಕ ಇತರ ವಸ್ತುಗಳನ್ನು ಒಳಗೊಂಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.