ETV Bharat / bharat

ಸಿಎಸ್​ಡಿ ಕ್ಯಾಂಟೀನ್ ಇನ್ನು ಆನ್ಲೈನ್.. ಹೊಸ ಪೋರ್ಟಲ್​ ಆರಂಭ - ವಸ್ತುಗಳ ಆನ್‌ಲೈನ್ ಮಾರಾಟಕ್ಕಾಗಿ ಪೋರ್ಟಲ್​​ನನ್ನು ಆರಂಭಿಸಿದ ರಾಜನಾಥ್ ಸಿಂಗ್​

ಮೈಕ್ರೊವೇವ್ ಓವನ್‌ಗಳು, ರೆಫ್ರಿಜರೇಟರ್‌ಗಳು, ಏರ್​ಕಂಡೀಷನರ್ಸ್, ಟೆಲಿವಿಷನ್ ಸೆಟ್‌ಗಳು ಮತ್ತು ಲ್ಯಾಪ್‌ಟಾಪ್‌ಗಳು ಸೇರಿದಂತೆ ಸಿಎಸ್‌ಡಿ ಕ್ಯಾಂಟೀನ್‌ಗಳ ಮೂಲಕ ದುಬಾರಿ ವಸ್ತುಗಳನ್ನು ಆನ್‌ಲೈನ್ ಮೂಲಕ ಮಾರಾಟ ಮಾಡುವ ಸಲುವಾಗಿ ಪೋರ್ಟಲ್​ವೊಂದನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಇಂದು ಪ್ರಾರಂಭಿಸಿದರು.

Rajnath
ರಕ್ಷಣಾ ಸಚಿವ ರಾಜನಾಥ್ ಸಿಂಗ್
author img

By

Published : Jan 8, 2021, 4:51 PM IST

ನವದೆಹಲಿ: ಸಿಎಸ್​ಡಿ ಕ್ಯಾಂಟೀನ್ ಸಹ ಇನ್ನು ಮುಂದೆ ಆನ್ಲೈನ್ ಆಗಲಿದೆ. ಸಿಎಸ್​ಡಿ ಕ್ಯಾಂಟೀನ್​ನಲ್ಲಿ ಮಾರಾಟ ಮಾಡಲಾಗುವ ದುಬಾರಿ ವಸ್ತುಗಳಾದ ವಾಶಿಂಗ್ ಮಶೀನ್, ಮೈಕ್ರೊವೇವ್ ಓವನ್, ರೆಫ್ರಿಜರೇಟರ್, ಏರ್ ಕಂಡಿಷನರ್, ಟಿವಿ ಮತ್ತು ಲ್ಯಾಪ್ ಟಾಪ್ ಮುಂತಾದ ವಸ್ತುಗಳ ಆನ್ಲೈನ್ ಮಾರಾಟಕ್ಕಾಗಿ ಆರಂಭಿಸಲಾಗಿರುವ ಹೊಸ ವೆಬ್ ಪೋರ್ಟಲ್​ಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಇಂದು ಚಾಲನೆ ನೀಡಿದರು.

  • The Online Portal https://t.co/Q2LdAfpUKp for purchase of items Against Firm Demand (AFD) from CSD Canteens was launched today. The Portal will enable about 45 Lakh CSD beneficiaries to purchase AFD-I items from the comfort of their home. pic.twitter.com/ZPCc2FJAbu

    — Rajnath Singh (@rajnathsingh) January 8, 2021 " class="align-text-top noRightClick twitterSection" data=" ">

ಸುಮಾರು 45 ಲಕ್ಷ ಸಿಎಸ್​​ಡಿ (ಕ್ಯಾಂಟೀನ್ ಸ್ಟೋರ್ಸ್ ಡಿಪಾರ್ಟ್ಮೆಂಟ್) ಫಲಾನುಭವಿಗಳು ಇನ್ನು ಮುಂದೆ ಕೆಲ ದುಬಾರಿ ವಸ್ತುಗಳನ್ನು ಆನ್ಲೈನ್ ಮೂಲಕವೇ ಆರ್ಡರ್ ಮಾಡಿ ಖರೀದಿಸಬಹುದಾಗಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಟ್ವೀಟ್ ಮಾಡಿದ್ದಾರೆ.

ಓದಿ:'ಸಾಯುತ್ತಿರುವೆ' ಎಂದು ತಾಯಿಗೆ ಕರೆ ಮಾಡಿ ಯುವಕ ಆತ್ಮಹತ್ಯೆ

ಪ್ರಧಾನಿ ನರೇಂದ್ರ ಮೋದಿಯವರ ಡಿಜಿಟಲ್ ಇಂಡಿಯಾದ ಒಂದು ಭಾಗವಾಗಿ ಈ ಆನ್‌ಲೈನ್ ಪೋರ್ಟಲ್​ ಪ್ರಾರಂಭಿಸಲಾಗಿದೆ ಎಂದು ಸಿಂಗ್ ಹೇಳಿದ್ದಾರೆ.

ಕ್ಯಾಂಟೀನ್ ಸ್ಟೋರ್ಸ್​ ಡಿಪಾರ್ಟಮೆಂಟ್ ಇದು ರಕ್ಷಣಾ ಪಡೆ ಸಿಬ್ಬಂದಿ ಹಾಗೂ ರಕ್ಷಣಾ ಪಡೆಯ ನಿವೃತ್ತ ಸಿಬ್ಬಂದಿಗೆ ರಿಯಾಯಿತಿ ದರದಲ್ಲಿ ದಿನನಿತ್ಯದ ವಸ್ತುಗಳನ್ನು ಮಾರಾಟ ಮಾಡುವ ಮಳಿಗೆಗಳ ಸರಣಿಯಾಗಿದೆ. ಈಗ ಈ ಮಳಿಗೆಯಲ್ಲಿ ಲಭ್ಯವಿರುವ ದುಬಾರಿ ವಸ್ತುಗಳನ್ನು ಆನ್ಲೈನ್ ಮೂಲಕ ಖರೀದಿಸುವ ಅವಕಾಶ ನೀಡಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.