ನವದೆಹಲಿ: 1984ರಲ್ಲಿ ರಾಜೀವ್ ಗಾಂಧಿ ಅವರಿಗೆ ಸಂಪೂರ್ಣ ಜನಾದೇಶ ಸಿಕ್ಕಿತ್ತು. ಆದರೆ ಅವರು ಭಯದ ವಾತಾವರಣ ಸೃಷ್ಟಿಸಲು ತಮ್ಮ ಅಧಿಕಾರವನ್ನು ಬಳಸಲಿಲ್ಲ ಎಂದು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ತಿಳಿಸಿದರು.
ರಾಜೀವ್ ಗಾಂಧಿ ಅವರ 75ನೇ ವರ್ಷದ ಜಯಂತಿ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, ರಾಜೀವ್ ಗಾಂಧಿ ಅವರು ಜನರನ್ನು ಹೆದರಿಸಲು ಅಥವಾ ಸರ್ಕಾರಿ ಸಂಸ್ಥೆಗಳನ್ನು ನಾಶ ಮಾಡಲು, ಜನರ ಗಮನವನ್ನು ಬೇರೆಡೆ ಸೆಳೆಯಲು ತಮ್ಮ ಅಧಿಕಾರವನ್ನು ಬಳಸಲಿಲ್ಲ ಎಂದರು.
ರಾಜೀವ್ ಅವರು ಮಾಡಿದ ಕೆಲಸಗಳು ಶ್ರಮ, ದೃಢ ಮನಸ್ಸಿನಿಂದ ಆಯಿತೇ ಹೊರತು ಘೋಷಣೆ ಕೂಗುವುದರಿಂದ ಆಗಿಲ್ಲ ಎಂದು ಹೇಳಿದರು.
ಕಾಂಗ್ರೆಸ್ ಸದ್ಯ ತನ್ನ ಒಂದು ಸವಾಲನ್ನು ಎದುರಿಸುತ್ತಿರಬಹುದು, ಸಂಕಷ್ಟದ ಪರಿಸ್ಥಿತಿಯಲ್ಲಿರಬಹುದು ಆದರೆ, ತನ್ನ ಸಿದ್ಧಾಂತವನ್ನು ಎಂದಿಗೂ ಬಿಟ್ಟುಕೊಡುವುದಿಲ್ಲ ಎಂದರು.
ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂ ಅವರ ಬಂಧನ ವಿಚಾರವನ್ನೇ ಮುಂದಿಟ್ಟುಕೊಂಡು ಸೋನಿಯಾ ಅವರು ಭಾಷಣ ಮಾಡಿದರು.