ಚೆನ್ನೈ: ಗಾನ ಸಾಮ್ರಾಟ, ಭಾರತೀಯ ಚಿತ್ರರಂಗದ ಮೇರು ಗಾಯಕ ಎಸ್.ಪಿ ಬಾಲಸುಬ್ರಹ್ಮಣಂ ನಿಧನಕ್ಕೆ ಇಡೀ ದೇಶವೇ ಕಂಬನಿ ಮಿಡಿಯುತ್ತಿದೆ. ದೇಶದ 16 ಭಾಷೆಗಳಲ್ಲಿ 40 ಸಾವಿರಕ್ಕೂ ಹೆಚ್ಚು ಹಾಡು ಹಾಡಿರುವ ಎಸ್ಪಿಬಿ ನಿಧನಕ್ಕೆ ಸ್ಯಾಂಡಲ್ವುಡ್, ಬಾಲಿವುಡ್, ಕಾಲಿವುಡ್, ಟಾಲಿವುಡ್ನ ಅನೇಕ ದಿಗ್ಗಜರು ಸಂತಾಪ ಸೂಚಿಸಿದ್ದಾರೆ.
-
#RIP Balu sir ... you have been my voice for many years ... your voice and your memories will live with me forever ... I will truly miss you ... pic.twitter.com/oeHgH6F6i4
— Rajinikanth (@rajinikanth) September 25, 2020 " class="align-text-top noRightClick twitterSection" data="
">#RIP Balu sir ... you have been my voice for many years ... your voice and your memories will live with me forever ... I will truly miss you ... pic.twitter.com/oeHgH6F6i4
— Rajinikanth (@rajinikanth) September 25, 2020#RIP Balu sir ... you have been my voice for many years ... your voice and your memories will live with me forever ... I will truly miss you ... pic.twitter.com/oeHgH6F6i4
— Rajinikanth (@rajinikanth) September 25, 2020
ಎಸ್ಪಿಬಿ ನಿಧನಕ್ಕೆ ತಮಿಳುನಾಡಿನ ಸೂಪರ್ ಸ್ಟಾರ್ ರಜನಿಕಾಂತ್ ಕೂಡ ಕಂಬನಿ ಮಿಡಿದಿದ್ದಾರೆ. RIP ಬಾಲು ಸರ್ ನೀವು ಅನೇಕ ವರ್ಷಗಳಿಂದ ನನ್ನ ಧ್ವನಿಯಾಗಿದ್ದೀರಿ.. ನಿಮ್ಮ ಧ್ವನಿ ಮತ್ತು ನೆನಪು ನನ್ನೊಂದಿಗೆ ಶಾಶ್ವತವಾಗಿ ಇರಲಿದೆ. ಖಂಡಿತವಾಗಿ ನಿಮ್ಮನ್ನು ಮಿಸ್ ಮಾಡಿಕೊಳ್ಳಲಿದ್ದೇನೆ ಎಂದಿದ್ದಾರೆ.
ಇಂದು ಎಲ್ಲರಿಗೂ ತುಂಬಾ ದುಃಖದ ದಿನ. ಕೊನೆಯ ಕ್ಷಣದವರೆಗೆ ತಮ್ಮ ಪ್ರಾಣಕ್ಕಾಗಿ ಎಸ್ಪಿಬಿ ಹೋರಾಟ ನಡೆಸಿ, ಇಹಲೋಕ ತ್ಯಜಿಸಿದ್ದಾರೆ. ಅವರ ಅಗಲಿಕೆ ಅತ್ಯಂತ ನೋವಿನಿಂದ ಕೂಡಿದೆ. ಭಾರತದಲ್ಲಿ ಅನೇಕ ಪ್ರಸಿದ್ದ ವ್ಯಕ್ತಿಗಳಿದ್ದಾರೆ. ಆದರೆ, ಎಸ್ಪಿಬಿಯಂತೆ ಯಾರೂ ಇಲ್ಲ. ಎಲ್ಲ ಭಾಷೆಗಳಲ್ಲಿ ಹಾಡುವ ಮೂಲಕ ಅಭಿಮಾನಿಗಳನ್ನ ರಂಜಿಸಿದ್ದಾರೆ. ಅವರ ಮಧುರ, ಭವ್ಯವಾದ ಧ್ವನಿ ನೂರಾರು ವರ್ಷಗಳ ಕಾಲ ನಮ್ಮ ಕಿವಿಯಲ್ಲಿ ಮೊಳಗುತ್ತಲೇ ಇರುತ್ತದೆ. ದುಃಖಿತ ಕುಟುಂಬಕ್ಕೆ ನಾನು ಸಂತಾಪ ಸೂಚಿಸುತ್ತೇನೆ ಎಂದಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ರಜನಿಕಾಂತ್ ವಿಡಿಯೋ ಹಂಚಿಕೊಂಡಿದ್ದು, ನೆಚ್ಚಿನ ಗಾಯಕನ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.