ETV Bharat / bharat

ಸೋದ್ರಾ ನದಿಯಲ್ಲಿ ಬಿದ್ದು ಇಬ್ಬರು ಸಾವು, ಮೃತ ದೇಹಗಳಿಗಾಗಿ ಶೋಧ

ರಾಜಸ್ಥಾನದ ಸೋದ್ರಾನದಿಯಲ್ಲಿ ಬಿದ್ದು, ಇಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದ್ದು, ರಾಜ್ಯ ವಿಕೋಪ ನಿರ್ವಹಣಾ ತಂಡದಿಂದ ಶೋಧ ಕಾರ್ಯ ನಡೆಯುತ್ತಿದೆ.

sodra river
ಸೋದ್ರಾ ನದಿ
author img

By

Published : Aug 16, 2020, 4:42 PM IST

ಟೊಂಕ್​ (ರಾಜಸ್ಥಾನ): ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಸೋದ್ರಾ ನದಿಗೆ ಬಿದ್ದು ಇಬ್ಬರು ಮೃತಪಟ್ಟು, ಮತ್ತಿಬ್ಬರು ಸಾವನ್ನಪ್ಪಿರುವ ದಾರುಣ ಘಟನೆ ರಾಜಸ್ಥಾನ ಟೊಂಕ್​ ಜಿಲ್ಲೆಯಲ್ಲಿ ನಡೆದಿದೆ.

ಸೇತುವೆ ಮೇಲೆ ತೆರಳುತ್ತಿದ್ದ ಬೈಕ್​ ಜಾರಿ ತುಂಬಿ ಹರಿಯುತ್ತಿದ್ದ ಸೋದ್ರಾ ನದಿಗೆ ಬಿದ್ದಿತ್ತು. ಈ ವೇಳೆ ಬೈಕ್​ನಲ್ಲಿದ್ದ ಇಬ್ಬರು ನದಿಯಲ್ಲಿ ಬಿದ್ದಿದ್ದು, ಓರ್ವನನ್ನು ರಕ್ಷಿಸಲಾಗಿದ್ದು, ಮತ್ತೋರ್ವನ ಮೃತದೇಹಕ್ಕಾಗಿ ಶೋಧ ಕಾರ್ಯ ನಡೆಯುತ್ತಿದೆ.

ಮತ್ತೊಂದು ಪ್ರಕರಣದಲ್ಲಿ ರೈತನೋರ್ವ ಮನೆಗೆ ಹಿಂತಿರುಗುವಾಗ ಮೇಕೆಯೊಂದು ನದಿಗೆ ಬಿದ್ದಿತ್ತು ಎಂಬ ಕಾರಣಕ್ಕೆ ತಾನೂ ನದಿಗೆ ಹಾರಿದ್ದನು. ಇದನ್ನು ಕಂಡ ಆತನ ಮಗ ಕೂಡಾ ನದಿಗೆ ಹಾರಿದ್ದನು. ಈ ವೇಳೆ ತಂದೆಯನ್ನು ರಕ್ಷಿಸಲಾಗಿದ್ದು, ಮಗ ಸಾವನ್ನಪ್ಪಿದ್ದು, ಇನ್ನೂ ಮೃತದೇಹ ಸಿಕ್ಕಿಲ್ಲ.

ಈ ಕುರಿತು ಪ್ರತಿಕ್ರಿಯೆ ನೀಡಿದ ಪೊಲೀಸ್ ಅಧಿಕಾರಿ ಬಾಲಕೃಷ್ಣ ಶರ್ಮ ಶನಿವಾರ ಸಂಜೆ ಪ್ರತ್ಯೇಕ ಪ್ರಕರಣಗಳಲ್ಲಿ ನಾಲ್ವರು ನದಿಯಲ್ಲಿ ಬಿದ್ದು, ಇಬ್ಬರು ಕಾಣೆಯಾಗಿರುವ ಬಗ್ಗೆ ಮಾಹಿತಿ ದೊರಕಿದೆ. ಕಾಣೆಯಾದ ವ್ಯಕ್ತಿಯ ಶೋಧಕ್ಕಾಗಿ ಕಾರ್ಯ ನಡೆಯುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ರಾಜ್ಯ ವಿಪತ್ತು ನಿರ್ವಹಣಾ ತಂಡ ಭೇಟಿ ನೀಡಿದ್ದು ಮೃತದೇಹಗಳಿಗಾಗಿ ಶೋಧ ಕಾರ್ಯ ನಡೆಯುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.