ETV Bharat / bharat

ಕೋವಿಡ್ ಸೋಂಕಿತರ ಮೃತದೇಹವನ್ನು ಅಂತಿಮ ಸಂಸ್ಕಾರಕ್ಕಾಗಿ ಕುಟುಂಬಕ್ಕೆ ನೀಡಲು ನಿರ್ದೇಶನ! - ರಾಜಸ್ಥಾನ ಸರ್ಕಾರ ಮಹತ್ವದ ನಿರ್ಧಾರ

ವೈದ್ಯಕೀಯ ನಿಯಮಗಳನ್ನು ಅನುಸರಿಸಿ ಕೋವಿಡ್ ಸೋಂಕಿತ ರೋಗಿಗಳ ಶವಗಳನ್ನು ಅಂತಿಮ ಸಂಸ್ಕಾರಕ್ಕಾಗಿ ಅವರ ಕುಟುಂಬ ಸದಸ್ಯರಿಗೆ ಹಸ್ತಾಂತರಿಸಬೇಕೆಂದು ರಾಜಸ್ಥಾನ ಸರ್ಕಾರ ನಿರ್ದೇಶನ ನೀಡಿದೆ.

Rajasthan to hand over COVID victims' bodies to family for cremation
ರಾಜಸ್ಥಾನ ಸರ್ಕಾರ ನಿರ್ದೇಶನ
author img

By

Published : Sep 9, 2020, 8:15 AM IST

ಜೈಪುರ (ರಾಜಸ್ಥಾನ): ಮಾನವ ಸಹಾನುಭೂತಿಯನ್ನು ಗಮನದಲ್ಲಿಟ್ಟುಕೊಂಡು ಸಾರ್ವಜನಿಕರ ಭಾವನೆಗಳನ್ನು ಅರ್ಥಮಾಡಿಕೊಳ್ಳುತ್ತಾ, ವೈದ್ಯಕೀಯ ನಿಯಮಗಳನ್ನು ಅನುಸರಿಸಿ ಕೋವಿಡ್ ಸೋಂಕಿತ ರೋಗಿಗಳ ಶವಗಳನ್ನು ಅಂತ್ಯ ಸಂಸ್ಕಾರಕ್ಕಾಗಿ ಅವರ ಕುಟುಂಬ ಸದಸ್ಯರಿಗೆ ಹಸ್ತಾಂತರಿಸಬೇಕೆಂದು ರಾಜ್ಯ ಸರ್ಕಾರ ಮತ್ತು ಆರೋಗ್ಯ ಇಲಾಖೆ ನಿರ್ದೇಶಿಸಿದೆ.

ಕೋವಿಡ್ ಸೋಂಕಿತ ರೋಗಿಗಳ ಶವಗಳನ್ನು ಅವರ ಕುಟುಂಬ ಸದಸ್ಯರಿಗೆ ಅಂತಿಮ ಸಂಸ್ಕಾರಕ್ಕಾಗಿ ಹಸ್ತಾಂತರಿಸುವಂತೆ ಮುಖ್ಯಮಂತ್ರಿಗಳು ಆರೋಗ್ಯ ಇಲಾಖೆಗೆ ನಿರ್ದೇಶನ ನೀಡಿದ್ದಾರೆ ಎಂದು ಆರೋಗ್ಯ ಸಚಿವ ಡಾ. ರಘು ಶರ್ಮಾ ತಿಳಿಸಿದ್ದಾರೆ. ಕೋವಿಡ್ ಸಾಂಕ್ರಾಮಿಕ ರೋಗವು ಇಡೀ ದೇಶದಲ್ಲಿ ವೇಗವಾಗಿ ಹರಡುತ್ತಿದ್ದು, ಸಾರ್ವಜನಿಕರು ಬಹಳ ಜಾಗರೂಕರಾಗಿರಬೇಕು ಎಂದು ಹೇಳಿದ್ದಾರೆ.

ತಜ್ಞರ ಪ್ರಕಾರ, ಕೋವಿಡ್-19 ಸೋಂಕಿನ ಹರಡುವಿಕೆಯು ಹನಿಗಳ(droplets) ಮೂಲಕ ನಡೆಯುತ್ತದೆ. ಎಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡು ಪ್ರೋಟೋಕಾಲ್​ಗಳನ್ನು ಅನುಸರಿಸಿದರೆ ಮೃತದೇಹದಿಂದ ಕೋವಿಡ್ ಸೋಂಕು ಹರಡುವ ಬಗ್ಗೆ ಯಾವುದೇ ಪುರಾವೆಗಳಿಲ್ಲ ಎಂದು ರಘು ಶರ್ಮಾ ಹೇಳಿದ್ದಾರೆ.

ಮಾರ್ಗಸೂಚಿಗಳ ಪ್ರಕಾರ, ಸತ್ತ ಪ್ರತಿಯೊಬ್ಬ ವ್ಯಕ್ತಿಗೂ ಕೋವಿಡ್ ಪರೀಕ್ಷೆ ನಡೆಸುವುದು ಮುಖ್ಯವಲ್ಲ ಎಂದು ಆರೋಗ್ಯ ಸಚಿವರು ಹೇಳಿದ್ದಾರೆ. ಕೋವಿಡ್-19 ಪರೀಕ್ಷೆಯನ್ನು ILI ಅಥವಾ SARIಯಿಂದ ಮರಣ ಹೊಂದಿದವರಿಗೆ ಮಾತ್ರ ಮಾಡಬೇಕು. ಪರೀಕ್ಷಾ ವರದಿಗಾಗಿ ಕಾಯದೆ ಮೃತ ವ್ಯಕ್ತಿಯ ಶವವನ್ನು ಕುಟುಂಬ ಸದಸ್ಯರಿಗೆ ನೀಡಬಹುದು ಎಂದು ಹೇಳಿದ್ದಾರೆ. ಸತ್ತ ಪ್ರತಿಯೊಬ್ಬರ ಶವ ಪರೀಕ್ಷೆ ನಡೆಸುವುದು ಸಹ ಅನಿವಾರ್ಯವಲ್ಲ. ಯಾವುದೇ ನಿರ್ದಿಷ್ಟ ಕಾರಣಕ್ಕಾಗಿ ಮರಣೋತ್ತರ ಪರೀಕ್ಷೆ ನಡೆಸಿದರೆ, ಅದನ್ನು ಭಾರತ ಸರ್ಕಾರ ಹೊರಡಿಸಿದ ಮಾರ್ಗಸೂಚಿಗಳ ಪ್ರಕಾರ ಮಾಡಬೇಕು.

ಪ್ರೋಟೋಕಾಲ್ ಪ್ರಕಾರ ಪಾರದರ್ಶಕ ಚೀಲದಲ್ಲಿ ರೋಗಿಯ ಬಗ್ಗೆ ಮಾಹಿತಿಯನ್ನು ಗುರುತಿಸುವ ಮೂಲಕ ಕುಟುಂಬ ಸದಸ್ಯರು ತಮ್ಮ ಪೂರ್ವಜರ ಶವಾಗಾರ ಅಥವಾ ಸ್ಮಶಾನಕ್ಕೆ ಕೊನೆಯ ವಿಧಿಗಳಿಗಾಗಿ ದೇಹವನ್ನು ತೆಗೆದುಕೊಂಡು ಹೋಗಲು ಮುಕ್ತರಾಗುತ್ತಾರೆ. ಶವದ ಬಗ್ಗೆ ಕುಟುಂಬ ಸದಸ್ಯರು ಜಿಲ್ಲಾಡಳಿತಕ್ಕೆ ತಿಳಿಸಬೇಕಾಗುತ್ತದೆ ಎಂದಿದ್ದಾರೆ. ಯಾವುದೇ ಕುಟುಂಬವು ಕೋವಿಡ್ ಸೋಂಕಿತ ವ್ಯಕ್ತಿಯ ದೇಹವನ್ನು ತೆಗೆದುಕೊಳ್ಳಲು ಬಯಸದಿದ್ದರೆ ಆಸ್ಪತ್ರೆ ಅಥವಾ ಸ್ಥಳೀಯ ಅಧಿಕಾರಿಗಳು ಶವ ಸಂಸ್ಕಾರ ಮಾಡಬಹುದು.

ಕೊನೆಯ ಬಾರಿಗೆ ಸತ್ತವರ ದರ್ಶನ ಪಡೆಯಲು ಪ್ರೋಟೋಕಾಲ್​ನಲ್ಲಿ ನಿರ್ಧರಿಸಲಾಗಿದೆ ಎಂದು ಆರೋಗ್ಯ ಸಚಿವರು ಹೇಳಿದ್ದಾರೆ. ಆದರೂ ಮೃತದೇಹವನ್ನು ಸ್ಪರ್ಶಿಸುವುದು, ತಬ್ಬಿಕೊಳ್ಳುವುದು, ಚುಂಬಿಸುವುದನ್ನು ನಿಷೇಧಿಸಲಾಗಿದೆ. ಶವ ಸಂಸ್ಕಾರದ ಸಮಯದಲ್ಲಿ 20ಕ್ಕಿಂತ ಹೆಚ್ಚು ಜನರು ಇರಬಾರದು ಮತ್ತು ಅವರಿಗೆ ಪಿಪಿಇ ಕಿಟ್, ಕೈಗವಸುಗಳು, ಮಾಸ್ಕ್​ ಧರಿಸುವುದು, ಸಾಮಾಜಿಕ ದೂರವನ್ನು ಕಾಪಾಡಿಕೊಳ್ಳುವುದು ಮತ್ತು ಇತರ ಎಲ್ಲಾ ಪ್ರೋಟೋಕಾಲ್‌ಗಳನ್ನು ಸಂಪೂರ್ಣವಾಗಿ ಪಾಲಿಸುವುದು ಅಗತ್ಯವಾಗಿರುತ್ತದೆ. ಶವವನ್ನು ಒಂದು ಜಿಲ್ಲೆಯಿಂದ ಮತ್ತೊಂದು ಜಿಲ್ಲೆಗೆ ಕೊಂಡೊಯ್ಯಲು ಯಾರಿಂದಲೂ ಅನುಮತಿ ಪಡೆಯುವ ಅಗತ್ಯವಿಲ್ಲ ಸಚಿವ ರಘು ಶರ್ಮಾ ಹೇಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.