ETV Bharat / bharat

ಸತ್ತರೂ ಪರವಾಗಿಲ್ಲ ನನ್ನ ಮೇಲೆ ಕೋವಿಡ್​ ಲಸಿಕೆ ಪ್ರಯೋಗಿಸಿ: ಸಿಎಂಗೆ ಪತ್ರ ಬರೆದ ರಾಜಸ್ಥಾನಿ ವಿದ್ಯಾರ್ಥಿ - ಕೋವಿಡ್​ ಲಸಿಕೆ ನನ್ನ ಮೇಲೆ ಪ್ರಯೋಗಿಸಿ ಎಂದು ಪತ್ರ ಬರೆದ ವಿದ್ಯಾರ್ಥಿ

ಕೋವಿಡ್​ ಲಸಿಕೆ ಕಂಡು ಹಿಡಿಯುವಾಗ ಅದನ್ನು ಮಾನವನ ಮೇಲೆ ಪ್ರಯೋಗಿಸುವುದು ಅತ್ಯಗತ್ಯವಾಗಿದೆ. ಆದ್ದರಿಂದ ನನ್ನನ್ನು ಬಳಸಿಕೊಳ್ಳಿ, ನನ್ನ ದೇಹದ ಮೇಲೆ ಲಸಿಕೆ ಪ್ರಯೋಗಿಸಿ. ಈ ವೇಳೆ ನಾನು ಜೀವ ಕಳೆದುಕೊಂಡರೂ ಅಭ್ಯಂತರವಿಲ್ಲ ಎಂದು ರಾಜಸ್ಥಾನದ ವಿದ್ಯಾರ್ಥಿಯೊಬ್ಬ ಸಿಎಂ, ಮತ್ತು ಪ್ರಧಾನಿ ಮತ್ತು ಅಧಿಕಾರಿಗಳಿಗೆ ಪತ್ರ ಬರೆದಿದ್ದಾನೆ.

Rajasthan student offers himself for human trial of COVID-19 vaccine
ಕೋವಿಡ್​ ಲಸಿಕೆ ನನ್ನ ಮೇಲೆ ಪ್ರಯೋಗಿಸಿ ಎಂದು ಪತ್ರ ಬರೆದ ರಾಜಸ್ಥಾನದ ವಿದ್ಯಾರ್ಥಿ
author img

By

Published : May 28, 2020, 9:37 AM IST

ಜೋಧ್‌ಪುರ: ಕೋವಿಡ್​ -19 ಗೆ ಲಸಿಕೆ ಕಂಡು ಹಿಡಿಯುವ ಸಂದರ್ಭ ಅಗತ್ಯವಿದ್ದರೆ ವೈದ್ಯಕೀಯ ಪ್ರಯೋಗಕ್ಕೆ ನನ್ನನ್ನು ಬಳಸಿಕೊಳ್ಳಿ ಎಂದು ವಿದ್ಯಾರ್ಥಿಯೊಬ್ಬ ಹೇಳಿದ್ದಾನೆ.

ಜಿಲ್ಲೆಯ ಪಲಸ್ನಿ ಗ್ರಾಮದ ದೇವೇಂದ್ರ ಗೆಹ್ಲೋಟ್ ಎಂಬ ವಿದ್ಯಾರ್ಥಿ ಈ ಬಗ್ಗೆ ರಾಜಸ್ಥಾನ ಸಿಎಂ, ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಜ್ಯ ಮತ್ತು ಕೇಂದ್ರ ಸ್ವಯಂಸೇವಕರ ಆರೋಗ್ಯ ಅಧಿಕಾರಿಗಳಿಗೆ ಪತ್ರ ಬರೆದಿದ್ದು, ಕೋವಿಡ್​ ಲಸಿಕೆ ಕಂಡು ಹಿಡಿಯುವ ಸಂದರ್ಭ ಮಾನವನ ಮೇಲೆ ಪ್ರಯೋಗಿಸುವ ಅಗತ್ಯ ಬಂದರೆ ನನ್ನನ್ನು ಬಳಸಿಕೊಳ್ಳಿ ಎಂದಿದ್ದಾನೆ.

ಹೊಸ ಲಸಿಕೆ ಕಂಡು ಹಿಡಿಯುವಾಗ ಅದನ್ನು ಮಾನವನ ಮೇಲೆ ಪ್ರಯೋಗಿಸುವುದು ಅತ್ಯಗತ್ಯವಾಗಿದೆ. ಆದ್ದರಿಂದ ನನ್ನನ್ನು ಬಳಸಿಕೊಳ್ಳಿ, ನನ್ನ ದೇಹದ ಮೇಲೆ ಲಸಿಕೆ ಪ್ರಯೋಗಿಸಿ. ಈ ವೇಳೆ ನಾನು ಜೀವ ಕಳೆದುಕೊಂಡರೂ ಅಭ್ಯಂತರವಿಲ್ಲ ಎಂದು ವಿದ್ಯಾರ್ಥಿ ಪತ್ರದಲ್ಲಿ ತಿಳಿಸಿದ್ದಾನೆ.

ಈ ಪತ್ರದ ಬಗ್ಗೆ ಪ್ರತಿಕ್ರಿಯಿಸಿರುವ ಜಿಲ್ಲಾಧಿಕಾರಿ, ವಿದ್ಯಾರ್ಥಿಯ ಪತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಲಸಿಕೆ ಪ್ರಯೋಗಿಸುವುದಾದರೆ ಕೆಲವು ವೈದ್ಯಕೀಯ ಮಾನದಂಡಗಳಿವೆ, ಅವುಗಳನ್ನು ಪೂರೈಸಬೇಕು. ಭವಿಷ್ಯದಲ್ಲಿ ದೇಶ ಅಥವಾ ವಿದೇಶಗಳಲ್ಲಿ ಲಸಿಕೆ ಪ್ರಯೋಗಿಸಲು ಮಾನವನ ಅಗತ್ಯವಿದ್ದರೆ ಖಂಡಿತ ಈ ಯುವಕನ ಬಗ್ಗೆ ಯೋಚಿಸುವುದಾಗಿ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.