ETV Bharat / bharat

2ನೇ ಸಿಎಲ್​​ಪಿ ಸಭೆಯಲ್ಲೂ ಭಾಗವಹಿಸದ ಸಚಿನ್​ ಪೈಲಟ್​.. ಬಿಕ್ಕಟ್ಟು ಮತ್ತಷ್ಟು ಉಲ್ಬಣ - ಸಿಎಲ್‌ಪಿ ಸಭೆಯಲ್ಲೂ ಭಾಗವಹಿಸದ ಸಚಿನ್ ಪೈಲಟ್

ಇಂದು ನಡೆದ ರಾಜಸ್ಥಾನ ಕಾಂಗ್ರೆಸ್​​​​​​​​ ಶಾಸಕಾಂಗ ಪಕ್ಷದ ಸಭೆ, ಸಚಿನ್​ ಪೈಲಟ್​ಗೆ ಎರಡನೇ ಅವಕಾಶ ಎಂದೇ ಹೇಳಲಾಗಿತ್ತು. ಆದರೆ, ಸಚಿನ್​‌ ಹಾಗೂ ಅವರ ಹತ್ತಿರದ ಶಾಸಕರು ಇಂದಿನ ಸಭೆಯಲ್ಲೂ ಭಾಗವಹಿಸಿಲ್ಲ. ನಿನ್ನೆ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರ ಮನೆಯಲ್ಲಿ ನಡೆದ ಮೊದಲ ಸಭೆ ನಡೆದಿತ್ತು. ಆದರೆ ಈ ಸಭೆಯಲ್ಲಿಯೂ ಸಚಿನ್ ಪೈಲಟ್ ಭಾಗವಹಿಸಿರಲಿಲ್ಲ.

gehlot pilot
gehlot pilot
author img

By

Published : Jul 14, 2020, 12:57 PM IST

ಜೈಪುರ( ರಾಜಸ್ಥಾನ): ಸಚಿನ್ ಪೈಲಟ್ 2ನೇ ಬಾರಿ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲೂ ಭಾಗಿಯಾಗಿಲ್ಲ. ಎರಡು ದಿನಗಳಲ್ಲಿ 2 ಬಾರಿ ಕಾಂಗ್ರೆಸ್ ಶಾಸಕಾಂಗ ಸಭೆ ನಡೆಯಿತು. ಇಂದು ಬೆಳಗ್ಗೆ ನಡೆದ ಸಿಎಲ್​​​ಪಿ ಸಭೆಯಲ್ಲೂ ರಾಜಸ್ಥಾನದ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ಭಾಗವಹಿಸಲಿಲ್ಲ.

ಸಭೆ ಪ್ರಾರಂಭವಾಗಿತ್ತಿದ್ದಂತೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅವಿನಾಶ್ ಪಾಂಡೆ ಅವರು ಪೈಲಟ್‌ ಅವರಿಗೆ ಸಭೆಗೆ ಹಾಜರಾಗುವಂತೆ ಮತ್ತೊಂದು ಮನವಿ ಸಲ್ಲಿಸಿದ್ದರು.

ನಿನ್ನೆ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರ ಮನೆಯಲ್ಲಿ ನಡೆದ ಮೊದಲ ಸಿಎಲ್‌ಪಿ ಸಭೆಯಲ್ಲಿಯೂ ಸಚಿನ್ ಪೈಲಟ್ ಭಾಗವಹಿಸಿರಲಿಲ್ಲ.

ಇತರ ಹದಿನೆಂಟು ಕಾಂಗ್ರೆಸ್ ಶಾಸಕರು ಕೂಡಾ ಸಭೆಯಲ್ಲಿ ಭಾಗವಹಿಸಲಿಲ್ಲ ಎಂದು ಮೂಲಗಳು ತಿಳಿಸಿವೆ. ಆದರೆ, ಇತರ ಪಕ್ಷಗಳ ಸ್ವತಂತ್ರ ಶಾಸಕರು ಭಾಗವಹಿಸಿ, ಗೆಹ್ಲೋಟ್‌ಗೆ ಬೆಂಬಲ ವ್ಯಕ್ತಪಡಿಸಿದರು.

ಇಂದು ನಡೆದ ಸಭೆಯು ಪಕ್ಷದ ರಾಜ್ಯ ಘಟಕದ ಅಧ್ಯಕ್ಷರೂ ಆಗಿರುವ ಪೈಲಟ್‌ಗೆ ಎರಡನೇ ಅವಕಾಶ ನೀಡಲಾಗಿತ್ತು ಎಂದು ಹೇಳಲಾಗಿದೆ. ಆದರೆ ಪೈಲಟ್‌ ಹಾಗೂ ಅವರ ಆಪ್ತ ಶಾಸಕರು ಸಭೆಯಲ್ಲಿ ಭಾಗವಹಿಸಲಿಲ್ಲ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.