ETV Bharat / bharat

ಚಿತಾ ಭಸ್ಮ ವಿಸರ್ಜನೆಗೆ ವಿಶೇಷ ಬಸ್​ ವ್ಯವಸ್ಥೆ: ರಾಜಸ್ಥಾನ ಸರ್ಕಾರ ನಿರ್ಧಾರ - ಅಶೋಕ್ ಗೆಹ್ಲೋಟ್ ಲೇಟೆಸ್ಟ್​ ನ್ಯೂಸ್

ಚಿತಾ ಭಸ್ಮವನ್ನು ವಿಸರ್ಜನೆ ಮಾಡಲು ಜನರಿಗೆ ಅನುಕೂಲವಾಗುವಂತೆ ವಿಶೇಷ ಬಸ್​ಗಳ ವ್ಯವಸ್ಥೆ ಮಾಡಲು ರಾಜಸ್ಥಾನ ಸರ್ಕಾರ ತೀರ್ಮಾನಿಸಿದೆ.

buses to immerse ashes
ಚಿತಾಭಸ್ಮ ವಿಸರ್ಜನೆಗೆ ವಿಶೇಷ ಬಸ್​ ವ್ಯವಸ್ಥೆ
author img

By

Published : May 22, 2020, 1:23 PM IST

ಜೈಪುರ(ರಾಜಸ್ಥಾನ): ಲಾಕ್​ಡೌನ್ ಅವಧಿಯಲ್ಲಿ ಪ್ರಾಣ ಕಳೆದುಕೊಂಡ ಕುಟುಂಬ ಸದಸ್ಯರ ಚಿತಾ ಭಸ್ಮವನ್ನು ವಿಸರ್ಜನೆ ಮಾಡಲು ಜನರಿಗೆ ಅನುಕೂಲವಾಗುವಂತೆ ವಿಶೇಷ ಬಸ್​ಗಳನ್ನು ಓಡಿಸಲಾಗುವುದು ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹೇಳಿದ್ದಾರೆ.

ಬಸ್‌ಗಳ ಕಾರ್ಯಾಚರಣೆಗೆ ಒಪ್ಪಿಗೆ ನೀಡುವಂತೆ ಉತ್ತರಾಖಂಡ್​​ ಮತ್ತು ಉತ್ತರ ಪ್ರದೇಶ ಸರ್ಕಾರಗಳೊಂದಿಗೆ ಮಾತುಕತೆ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ತಮ್ಮ ನಿವಾಸದಲ್ಲಿ ಅಧಿಕಾರಿಗಳ ಸಭೆ ನಡೆಸಿದ ಗೆಹ್ಲೋಟ್, ಲಾಕ್​ಡೌನ್​ ಕಾರಣ ಕುಟುಂಬ ಸದಸ್ಯರ ಮರಣದ ನಂತರ ಚಿತಾ ಭಸ್ಮವನ್ನು ವಿಸರ್ಜಿಸಲು ಹೋಗದಿರುವುದು ಅತ್ಯಂತ ದುರದೃಷ್ಟಕರ ಮತ್ತು ನೋವಿನ ಸಂಗತಿಯಾಗಿದೆ. ಈ ಅಂಶವನ್ನು ಗಮನದಲ್ಲಿಟ್ಟುಕೊಂಡು ವಿಶೇಷ ಬಸ್‌ಗಳನ್ನು ಓಡಿಸಲು ನಿರ್ಧರಿಸಲಾಗಿದೆ ಎಂದ್ದಾರೆ.

ಇತರ ರಾಜ್ಯಗಳಿಂದ ಬರುವ ವಲಸಿಗರ ಕ್ವಾರಂಟೈನ್​ ವಿಚಾರದಲ್ಲಿ ಯಾವುದೇ ನಿರ್ಲಕ್ಷ್ಯ ಇರಬಾರದು. ಜಿಲ್ಲಾ ಮಟ್ಟದಲ್ಲಿ ಹಿರಿಯ ಅಧಿಕಾರಿಗಳು ನಿರಂತರವಾಗಿ ಸಾಂಸ್ಥಿಕ ಮತ್ತು ಹೋಂ ಕ್ವಾರಂಟೈನ್​ ಬಗ್ಗೆ ಜಾಗೃತರಾಗಿರಬೇಕು ಎಂದಿದ್ದಾರೆ. ರಾಜಸ್ಥಾನದಲ್ಲಿ ಸದ್ಯ 7 ಲಕ್ಷಕ್ಕೂ ಅಧಿಕ ಮಂದಿಯನ್ನು ಕ್ವಾರಂಟೈನ್​ನಲ್ಲಿ ಇಡಲಾಗಿದೆ. ಈ ಪೈಕಿ 34 ಸಾವಿರ ಜನರು ಸಾಂಸ್ಥಿಕ ಕ್ವಾರಂಟೈನ್​ನಲ್ಲಿ ಇದ್ದರೆ, ಉಳಿದವರನ್ನು ಹೋಂ ಕ್ವಾರಂಟೈನ್​ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.