ETV Bharat / bharat

ವಿದ್ಯುತ್​ ಬಿಲ್​ ಕಟ್ಟೋದಕ್ಕೆ ರಿಯಾಯಿತಿ, ನೀರಿನ ಬಿಲ್​ ಮನ್ನಾ ಮಾಡಿದ  ಸರ್ಕಾರ..!

ದೇಶಾದ್ಯಂತ ಲಾಕ್​ಡೌನ್​ ಘೋಷಣೆಯಾಗಿದೆ. ಈ ವೇಳೆ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೊರೊನಾ ವಿರುದ್ಧ ಸಮರ ಸಾರುತ್ತಿವೆ. ಈ ಹಿನ್ನೆಲೆಯಲ್ಲಿ ರಾಜಸ್ಥಾನ ಸರ್ಕಾರ ಕೂಡಾ ಕೆಲವೊಂದು ಜನಪರ ನಿರ್ಧಾರಗಳನ್ನು ಕೈಗೊಂಡಿದೆ.

Ashok Gehlot
ಅಶೋಕ್​ ಗೆಹ್ಲೋಟ್​
author img

By

Published : Apr 3, 2020, 1:23 PM IST

Updated : Apr 3, 2020, 8:23 PM IST

ಜೈಪುರ(ರಾಜಸ್ಥಾನ): ಮಾರ್ಚ್​ ಹಾಗೂ ಏಪ್ರಿಲ್​ ತಿಂಗಳಿನ ವಿದ್ಯುತ್​ ಬಿಲ್​ ಕಟ್ಟಲು ಮೇ ತಿಂಗಳವರೆಗೆ ಕಾಲಾವಕಾಶ ನೀಡಿ ರಾಜಸ್ಥಾನ ಸರ್ಕಾರ ಆದೇಶ ಹೊರಡಿಸಿದೆ. ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಲಾಕ್​ಡೌನ್​ ಘೋಷಣೆ ಮಾಡಿರುವ ಕಾರಣದಿಂದಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ರಾಜಸ್ಥಾನದಲ್ಲಿ ಸಿಎಂ ಅಶೋಕ್​ ಗೆಹ್ಲೋಟ್​ ನೇತೃತ್ವದ ಕಾಂಗ್ರೆಸ್​ ಸರ್ಕಾರ ಈ ಆದೇಶ ಹೊರಡಿಸಿದ್ದು, ಕೃಷಿಗಾಗಿ ಬಳಸುವ ವಿದ್ಯುತ್​ ಶುಲ್ಕಗಳಿಗೂ ಇದು ಅನ್ವಯವಾಗಲಿದ್ದು, ಸುಮಾರು 13 ಲಕ್ಷ ಕೃಷಿಕರು ಇದರ ಲಾಭ ಪಡೆದುಕೊಳ್ಳಲಿದ್ದಾರೆ.

ಮನೆಗಳಲ್ಲಿ 150 ಯುನಿಟ್​ ವಿದ್ಯುತ್ ಬಳಸುವ 1.05 ಕೋಟಿ ಬಳಕೆದಾರರಿಗೆ ಮಾತ್ರ ಸರ್ಕಾರದ ಈ ನಿರ್ಧಾರ ಅನ್ವಯವಾಗಲಿದೆ. ಅವರು ಮೇ ತಿಂಗಳಿನಲ್ಲಿ ಬಿಲ್​ ಪಾವತಿಸಬಹುದಾಗಿದೆ. ಜೊತೆಗೆ ಕೈಗಾರಿಕೆಗಳಿಗೂ ಸ್ವಲ್ಪ ಮಟ್ಟಿಗೆ ರಿಲೀಫ್​ ಒದಗಿಸಲಾಗಿದೆ. ಮೇ ತಿಂಗಳಲ್ಲಿ ವಿದ್ಯುತ್ ಬಿಲ್​​ ಕಟ್ಟುವ ಗ್ರಾಹಕರಿಗೆ ಶೇಕಡಾ 5ರಷ್ಟು ರಿಯಾಯಿತಿ ಘೋಷಣೆ ಮಾಡಲಾಗಿದೆ.

ಇದರ ಜೊತೆಗೆ ರಾಜ್ಯದ ಎಲ್ಲ ಕುಟುಂಬಗಳ ನೀರಿನ ಬಿಲ್​ ಅನ್ನು ಮನ್ನಾ ಮಾಡಲಾಗಿದೆ. ಮಾರ್ಚ್​ ಮತ್ತು ಏಪ್ರಿಲ್​ ತಿಂಗಳ ಬಿಲ್​ ಅನ್ನು ಗ್ರಾಹಕರು ಕಟ್ಟುವ ಹಾಗಿಲ್ಲ. ಪ್ರಧಾನಮಂತ್ರಿ ಬೆಳೆ ವಿಮೆ ಯೋಜನೆಯ ವಿಮಾ ಕಂತುಗಳ ಹಣವನ್ನೂ ರಾಜ್ಯ ಸರ್ಕಾರವೇ ತುಂಬಲು ನಿರ್ಧರಿಸಿದೆ.

Last Updated : Apr 3, 2020, 8:23 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.