ನವದೆಹಲಿ: ಕೇಂದ್ರದ ಕೃಷಿ ಕಾನೂನುಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ರಾಜಸ್ಥಾನದ ರೈತರು ಅಲ್ವಾರ್ ಜಿಲ್ಲೆಯ ಶಹಜಹಾನ್‌ಪುರ ಬಳಿ ದೆಹಲಿ-ಜೈಪುರ ರಾಷ್ಟ್ರೀಯ ಹೆದ್ದಾರಿ ತಡೆ ನಡೆಸಿದರು.
ರಾಜಧಾನಿ ದೆಹಲಿಗೆ ತೆರಳಲು ಪೊಲೀಸರು ಅನುಮತಿಸದ ಕಾರಣ ಶರಾಜಹಾನ್ಪುರದ ಜೈಸಿಂಗ್‌ಪುರ-ಖೇರಾ ಗಡಿಯಲ್ಲಿ ಸ್ವರಾಜ್ ಅಭಿಯಾನ್ ಮುಖ್ಯಸ್ಥ ಯೋಗೇಂದ್ರ ಯಾದವ್ ನೇತೃತ್ವದಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದು, ಕೆಲವರು ಉಪವಾಸ ಸತ್ಯಾಗ್ರಹವನ್ನೂ ಮಾಡುತ್ತಿದ್ದಾರೆ.
ಓದಿ: ಮೋದಿ 'ಮನ್ ಕಿ ಬಾತ್' ವೇಳೆ ಪಾತ್ರೆಗಳನ್ನು ಬಡಿಯಿರಿ: ರೈತ ಮುಖಂಡರ ಮನವಿ
ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಂಗಸಂಸ್ಥೆಗಳಾದ ಸ್ವದೇಶಿ ಜಾಗ್ರನ್ ಮಂಚ್ ಮತ್ತು ಭಾರತೀಯ ಕಿಸಾನ್ ಸಂಘ ಇತ್ತೀಚೆಗೆ ಎಂಎಸ್‌ಪಿಗೆ ಕಾನೂನು ಖಾತರಿ ನೀಡುವ ಬೇಡಿಕೆಯನ್ನು ಹೆಚ್ಚಿಸಿದ್ದರಿಂದ, ಕೃಷಿ ಕಾನೂನುಗಳ ಬಗ್ಗೆ ತಮ್ಮ ನಿಲುವುಗಳನ್ನು ಸ್ಪಷ್ಟಪಡಿಸುವಂತೆ ಯೋಗೇಂದ್ರ ಯಾದವ್ ಆರೆಸ್ಸೆಸ್ಗೆ ಒತ್ತಾಯಿಸಿದ್ದಾರೆ.
ಆರೆಸ್ಸೆಸ್ ಬೆಂಬಲಿತ ಬಿಕೆಎಸ್ ಮತ್ತು ಎಸ್‌ಜೆಎಂಗೆ ನನ್ನ ಒಂದು ಸರಳ ಪ್ರಶ್ನೆ, ಅವರು ಕೃಷಿ ಕಾನೂನುಗಳನ್ನು ಬೆಂಬಲಿಸುತ್ತಾರೆಯೇ? ಈ ಬಗ್ಗೆ ಸ್ಪಷ್ಟಪಡಿಸಲಿ ಎಂದು ಯಾದವ್ ಹೇಳಿದ್ದಾರೆ.