ETV Bharat / bharat

ಪ್ರವಾಹಕ್ಕೆ ಮಹಾರಾಷ್ಟ್ರ ತತ್ತರ: ಮೃತರ ಸಂಖ್ಯೆ 48ಕ್ಕೆ ಏರಿಕೆ

ಮಹಾರಾಷ್ಟ್ರದಲ್ಲಿ ಧಾರಾಕಾರವಾಗಿ ಸುರಿಯುತ್ತಿರುವ ಮಳೆ ಪ್ರವಾಹ ಪರಿಸ್ಥಿತಿ ತಂದಿಟ್ಟಿದ್ದು, ಬರೋಬ್ಬರಿ 48 ಜನರು ಪ್ರಾಣ ಕಳೆದುಕೊಂಡಿದ್ದಾರೆ.

author img

By

Published : Oct 17, 2020, 7:53 AM IST

Maharashtra floods
ಮಹಾರಾಷ್ಟ್ರ ಪ್ರವಾಹ

ಪುಣೆ: ಭೀಕರ ಪ್ರವಾಹಕ್ಕೆ ಮಹಾರಾಷ್ಟ್ರ ತಲ್ಲಣಗೊಂಡಿದ್ದು, ಸಾವಿನ ಸಂಖ್ಯೆ 48ಕ್ಕೆ ಏರಿಕೆಯಾಗಿದೆ. ಲಕ್ಷಾಂತರ ಎಕರೆ ಬೆಳೆಗಳು, ಸಾವಿರಾರು ಗ್ರಾಮಗಳು ನೀರುಪಾಲಾಗಿವೆ.

ಮಹಾರಾಷ್ಟ್ರದಲ್ಲಿ ಕಳೆದ ಮೂರು ದಿನಗಳಿಂದ ಧಾರಾಕಾರವಾಗಿ ಸುಳಿಯುತ್ತಿರುವ ಮಳೆ ಹಾಗೂ ಜಲಾಶಯಗಳಿಂದ ಬಿಡುಗಡೆಯಾದ ನೀರು ಪ್ರವಾಹ ಪರಿಸ್ಥಿತಿ ತಂದಿಟ್ಟಿದ್ದು, ಬರೋಬ್ಬರಿ 48 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಪುಣೆ ವಲಯದಲ್ಲೇ 29 ಮಂದಿ, ಔರಂಗಾಬಾದ್​ ವಲಯದಲ್ಲಿ 16 ಜನರು ಹಾಗೂ ಕೊಂಕಣ ಕರಾವಳಿ ಭಾಗದಲ್ಲಿ ಮೂವರು ಸಾವನ್ನಪ್ಪಿದ್ದಾರೆ.

  • Spoke to Maharashtra CM Uddhav Thackeray Ji regarding the situation arising due to flooding and heavy rain in parts of the state. My thoughts and prayers are with those sisters and brothers affected. Reiterated Centre’s support in the ongoing rescue and relief work. @OfficeofUT

    — Narendra Modi (@narendramodi) October 16, 2020 " class="align-text-top noRightClick twitterSection" data=" ">

ರಾಜ್ಯದ ಸೊಲ್ಲಾಪುರ, ಕೊಲ್ಲಾಪುರ, ಸಾಂಗ್ಲಿ, ಪುಣೆ, ಸತಾರಾ ಮತ್ತು ಮರಾಠವಾಡ, ಲಾತೂರ್, ಉಸ್ಮಾನಾಬಾದ್ ಮತ್ತು ಬೀಡ್ ಅತಿ ಹೆಚ್ಚು ಹಾನಿಗೊಳಗಾದ ಪ್ರದೇಶಗಳಾಗಿವೆ. ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್​​ ಠಾಕ್ರೆ ಜೊತೆ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, ಕೇಂದ್ರದಿಂದ ಸಾಧ್ಯವಾಗುವಷ್ಟು ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.