ETV Bharat / bharat

ಮುತ್ತಿನನಗರಿಯಲ್ಲಿ ಪ್ರವಾಹದಬ್ಬರ: ಮತ್ತೆ ಮೂವರು ಬಲಿ - Hyderabad rain

ರಾತ್ರಿಯಿಡೀ ಸುರಿದ ಧಾರಾಕಾರ ಮಳೆಗೆ ಹೈದರಾಬಾದ್​ನ ವಿವಿಧೆಡೆ ರಸ್ತೆಗಳು, ಕಾಲೊನಿಗಳು ಜಲಾವೃತವಾಗಿದ್ದು, ವಿದ್ಯುತ್​ ಶಾಕ್​ನಿಂದಾಗಿ ಮೂವರು ಮೃತಪಟ್ಟಿದ್ದಾರೆ.

Rain hits back the Hyderabad
ಮುತ್ತಿನನಗರಿಯಲ್ಲಿ ಪ್ರವಾಹದಬ್ಬರ
author img

By

Published : Oct 18, 2020, 12:45 PM IST

ಹೈದರಾಬಾದ್: ತೆಲಂಗಾಣದಲ್ಲಿ ಎರಡು ದಿನಗಳ ಹಿಂದೆ ಅಬ್ಬರಿಸಿ 50ಕ್ಕೂ ಹೆಚ್ಚು ಜನರನ್ನು ಬಲಿಪಡೆದಿದ್ದ ಪ್ರವಾಹ ನಿನ್ನೆ ಮತ್ತೆ ಆರ್ಭಟಿಸಿದ್ದು, ಬೆಳಗಾಗುವಷ್ಟರಲ್ಲಿ ಹೈದರಾಬಾದ್​ನಲ್ಲಿ ಮೂವರು ಸಾವನ್ನಪ್ಪಿದ್ದಾರೆ.

ರಾತ್ರಿಯಿಡೀ ಸುರಿದ ಧಾರಾಕಾರ ಮಳೆಗೆ ವನಸ್ಥಲಿಪುರಂ, ಎಲ್​.ಬಿ ನಗರ್​, ಉಪ್ಪಲ್​​, ಸಿಕಿಂದರಾಬಾದ್​, ಖೈರತಾಬಾದ್​, ಕುಕಟ್​ಪಲ್ಲಿ, ಹೈ-ಟೆಕ್​ ಸಿಟಿ, ಮೆಹದಿಪಟ್ಟಣಂ, ಆರಂ​ಘರ್​​, ಗೋಲ್ಕೊಂಡ, ನಾಗೋಲ್​​, ಸರೂರ್​ ನಗರ್​ ಸೇರಿದಂತೆ ಹೈದರಾಬಾದ್​ನ ಅನೇಕ ಪ್ರದೇಶಗಳ ರಸ್ತೆಗಳು, ಕಾಲೋನಿಗಳು ಜಲಾವೃತವಾಗಿದ್ದು, ವಾಹನಗಳು ಪ್ರವಾಹದ ನೀರಿನಲ್ಲಿ ಕೊಚ್ಚಿ ಹೋಗಿವೆ.

ಹೈದರಾಬಾದ್​ನಲ್ಲಿ ಪ್ರವಾಹದಬ್ಬರ

ಮಲಕ್​ಪೇಟ್​, ಅರುಂಧತಿ ನಗರ್​ ಹಾಗೂ ಉಪ್ಪಲ್​​​ನಲ್ಲಿ ವಿದ್ಯುತ್​ ಶಾಕ್​ನಿಂದಾಗಿ ಮೂವರು ಮೃತಪಟ್ಟಿದ್ದಾರೆ. ಮಜೀದ್​ಪುರ್​ ಪ್ರದೇಶದಲ್ಲಿ ಇಬ್ಬರು ವ್ಯಕ್ತಿಗಳಿದ್ದ ಕಾರೊಂದು ಕೊಚ್ಚಿ ಹೋಗಿದ್ದು, ಅವರ ಕುರಿತು ಮಾಹಿತಿ ತಿಳಿದು ಬಂದಿಲ್ಲ.

ನಗರದ ವಿವಿಧೆಡೆ ವಿದ್ಯುತ್​ ಕಡಿತಗೊಂಡಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ. ಹೈದರಾಬಾದ್​ನ ಹಾರ್ಸ್ ರೈಡಿಂಗ್ ಸ್ಕೂಲ್ ತಂಡವು ಕುದುರೆ ಏರಿ ಪ್ರವಾಹ ಪೀಡಿತ ಪ್ರದೇಶಗಳಿಗೆ ತೆರಳಿ ಆಹಾರ ಪದಾರ್ಥಗಳನ್ನು ನೀಡುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.