ETV Bharat / bharat

ರೈಲ್ವೆ ಇಲಾಖೆಯಿಂದ ಗುಡ್​​ನ್ಯೂಸ್​... ಹೆಚ್ಚುವರಿ 200 ರೈಲುಗಳ ಸೇವೆ ಆರಂಭಿಸಲು ನಿರ್ಧಾರ! - Railways latest news

ಮುಂದಿನ ಕೆಲ ತಿಂಗಳು ಸತತವಾಗಿ ಹಬ್ಬಗಳು ಆಗಮಿಸುತ್ತಿರುವ ಕಾರಣ ಕೇಂದ್ರ ರೈಲ್ವೆ ಇಲಾಖೆ 200 ಹೆಚ್ಚುವರಿ ರೈಲುಗಳ ಓಡಾಟ ನಡೆಸಲು ನಿರ್ಧರಿಸಿದೆ.

Railways
Railways
author img

By

Published : Oct 1, 2020, 9:50 PM IST

ನವದೆಹಲಿ: ದೇಶಾದ್ಯಂತ ಇಂದಿನಿಂದ ಅನ್​ಲಾಕ್​ 5.0 ಜಾರಿಗೊಂಡಿದ್ದು, ಕೇಂದ್ರ ಗೃಹ ಸಚಿವಾಲಯ ಮತ್ತಷ್ಟು ಸಡಲಿಕೆ ನೀಡಿ ಆದೇಶ ಹೊರಡಿಸಿದೆ. ಇದೀಗ ಕೇಂದ್ರ ರೈಲ್ವೆ ಇಲಾಖೆ ಸಹ ಪ್ರಯಾಣಿಕರಿಗೆ ಗುಡ್​​ನ್ಯೂಸ್​ ನೀಡಿದೆ.

ಅಕ್ಟೋಬರ್​​ 15ರಿಂದ ನವೆಂಬರ್​​ 30ರವರೆಗೆ ಹೊಸದಾಗಿ 200 ರೈಲು ಓಡಾಟ ಆರಂಭಿಸಲು ನಿರ್ಧರಿಸಿದೆ. ಹಬ್ಬದ ದಿನಗಳಾಗಿರುವ ಕಾರಣ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ರೈಲ್ವೆ ಇಲಾಖೆ ಚೇರಮನ್​ ವಿನೋದ್ ಕುಮಾರ್​ ಯಾದವ್​ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿ ಮಾತನಾಡಿರುವ ಯಾದವ್​, ಎಲ್ಲ ವಲಯಗಳ ಜನರಲ್​ ಮ್ಯಾನೇಜರ್​​ಗಳೊಂದಿಗೆ ಸಭೆ ನಡೆಸಲಾಗಿದ್ದು, ವರದಿ ನೀಡಲು ಸೂಚನೆ ನೀಡಲಾಗಿದೆ. ರಜಾ ದಿನಗಳಲ್ಲಿ ಎಷ್ಟು ರೈಲು ಅವಶ್ಯಕತೆ ಇದೆ ಎಂಬುದರ ಬಗ್ಗೆ ನಿರ್ಧರಿಸಲು ತಿಳಿಸಲಾಗಿದೆ ಎಂದಿದ್ದಾರೆ.

ಕೊರೊನಾ ವೈರಸ್​ ಹಾವಳಿ ಕಾರಣ ದೇಶದಲ್ಲಿ ಪ್ಯಾಸೆಂಜರ್​ ರೈಲು ಓಡಾಟ ಸ್ಥಗಿತಗೊಳಿಸಲಾಗಿದ್ದು, 310 ವಿಶೇಷ ರೈಲು ಓಡಾಟ ನಡೆಸಿವೆ ಎಂದು ತಿಳಿಸಿದ್ದಾರೆ. ಲಾಕ್​ಡೌನ್​ ಸಮಯದಲ್ಲಿ ಪ್ರಯಾಣಿಕರ ಸೇವೆ ಸ್ಥಗಿತಗೊಂಡಿದ್ದರಿಂದ ಭಾರತೀಯ ರೈಲ್ವೆ ಸರಕು ಮತ್ತು ಸಾಗಣೆಯಿಂದ 9896.86 ಕೋಟಿ ರೂ ಗಳಿಸಿದ್ದು, ಕಳೆದ ವರ್ಷಕ್ಕೆ ಹೋಲಿಕೆ ಮಾಡಿದಾಗ ಶೇ. 13.54ರಷ್ಟು ಹೆಚ್ಚಾಗಿದೆ ಎಂದು ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.