ಜೈಪುರ(ರಾಜಸ್ಥಾನ) : ರೈಲ್ವೆಯ ಖಾಸಗೀಕರಣ ವಿಚಾರ, ಕೇಂದ್ರ ಸರ್ಕಾರದ ವಿರುದ್ಧವಾಗಿ ವಿಪಕ್ಷಗಳು ಹರಡುತ್ತಿರುವ ಗೊಂದಲಮಯ ವದಂತಿಗಳಷ್ಟೇ. ಖಾಸಗಿಯಾಗಿ ರೈಲು ಓಡಿಸುವ ಮೂಲಕ ಯಾರಿಗೂ ಯಾವುದೇ ಹಾನಿ ಆಗೋದಿಲ್ಲ. ವಿರೋಧ ಪಕ್ಷಕ್ಕೆ ಯಾವುದೇ ಕೆಲಸವಿಲ್ಲ, ಜನರಲ್ಲಿ ಗೊಂದಲ ಉಂಟುಮಾಡುವ ಕೇಂದ್ರದ ನೀತಿಗಳನ್ನು ತಪ್ಪಾಗಿ ತಿಳಿಸಲಾಗುತ್ತಿದೆ ಎಂದು ರೈಲ್ವೆ ರಾಜ್ಯ ಸಚಿವ ಸುರೇಶ್ ಅಂಗಡಿ ಹೇಳಿದರು.
ಇಂದು ಜೈಪುರಕ್ಕೆ ಆಗಮಿಸಿದ ಸುರೇಶ್ ಅಂಗಡಿ, ಜೈಪುರ ಜಂಕ್ಷನ್ ರೈಲ್ವೆ ನಿಲ್ದಾಣಕ್ಕೆ ಭೇಟಿ ನೀಡಿದರು. ಈ ವೇಳೆ ನಿಲ್ದಾಣದ ಶುಚಿ, ಕಾರ್ಯವೈಖರಿಯನ್ನು ಕೊಂಡಾಡಿದರು.