ನವದೆಹಲಿ: ಕಣಿವೆಯಲ್ಲಿನ ಜೀವನದ ಅದ್ಭುತ ಚಿತ್ರಗಳಿಗಾಗಿ 2020ರ ಪುಲಿಟ್ಜರ್ ಪ್ರಶಸ್ತಿ ಪಡೆದ ಜಮ್ಮು ಮತ್ತು ಕಾಶ್ಮೀರದ ಮೂವರು ಫೋಟೋ ಜರ್ನಲಿಸ್ಟ್‌ಗಳನ್ನು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅಭಿನಂದಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಜೀವನದ ಕುರಿತ ಚಿತ್ರಗಳಿಗಾಗಿ ಪುಲಿಟ್ಜರ್ ಪ್ರಶಸ್ತಿ ಪಡೆದ ಭಾರತೀಯ ಫೋಟೋ ಜರ್ನಲಿಸ್ಟ್‌ಗಳಾದ ದಾರ್ ಯಾಸಿನ್, ಮುಖ್ತಾರ್ ಖಾನ್ ಮತ್ತು ಚನ್ನಿ ಆನಂದ್ ಅವರಿಗೆ ಅಭಿನಂದನೆಗಳು. ನಿಮ್ಮ ಬಗ್ಗೆ ಹಮ್ಮೆ ಎನಿಸುತ್ತಿದೆ ಎಂದು ಅವರು ಟ್ವೀಟ್ ಮಾಡಿದ್ದಾರೆ.
-
Congratulations to Indian photojournalists Dar Yasin, Mukhtar Khan and Channi Anand for winning a Pulitzer Prize for their powerful images of life in Jammu & Kashmir. You make us all proud. #Pulitzer https://t.co/A6Z4sOSyN4
— Rahul Gandhi (@RahulGandhi) May 5, 2020 " class="align-text-top noRightClick twitterSection" data="
">Congratulations to Indian photojournalists Dar Yasin, Mukhtar Khan and Channi Anand for winning a Pulitzer Prize for their powerful images of life in Jammu & Kashmir. You make us all proud. #Pulitzer https://t.co/A6Z4sOSyN4
— Rahul Gandhi (@RahulGandhi) May 5, 2020Congratulations to Indian photojournalists Dar Yasin, Mukhtar Khan and Channi Anand for winning a Pulitzer Prize for their powerful images of life in Jammu & Kashmir. You make us all proud. #Pulitzer https://t.co/A6Z4sOSyN4
— Rahul Gandhi (@RahulGandhi) May 5, 2020
ಕಳೆದ ವರ್ಷ ಆಗಸ್ಟ್‌ನಲ್ಲಿ 370ನೇ ವಿಧಿ ರದ್ದುಪಡಿಸಿದ ನಂತರ ಈ ಪ್ರದೇಶದ ಲಾಕ್‌ಡೌನ್ ಸಮಯದಲ್ಲಿ ಫೋಟೋ ಜರ್ನಲಿಸ್ಟ್‌ಗಳು ತೆಗೆದ ತಮ್ಮ ವೈಶಿಷ್ಟ್ಯಪೂರ್ಣ ಛಾಯಾಗ್ರಹಣಕ್ಕಾಗಿ 2020ರ ಪುಲಿಟ್ಜರ್ ಪ್ರಶಸ್ತಗೆ ಭಾಜನರಾಗಿದ್ದಾರೆ.
ಪುಲಿಟ್ಜರ್ ಪ್ರಶಸ್ತಿಯನ್ನು ಪತ್ರಿಕೋದ್ಯಮದ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿ, ಪತ್ರಿಕಾರಂಗದ ಆಸ್ಕರ್ ಎಂದೇ ಪರಿಗಣಿಸಲಾಗಿದೆ.