ನವದೆಹಲಿ : ಇಂಧನ ದರ ಹೆಚ್ಚಳದ ವಿರುದ್ಧ ಧ್ವನಿಯೆತ್ತಿ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ದೇಶದ ಜನತೆಗೆ ಕರೆ ನೀಡಿದ್ದಾರೆ.
ಇಂಧನ ಬೆಲೆ ಹೆಚ್ಚಳದ ವಿರುದ್ಧ ಮಾತನಾಡಿ(#SpeakUpAgainstFuelHike) ಅಭಿಯಾನಕ್ಕೆ ದೇಶದ ಜನರು ಸೇರಬೇಕೆಂದು ಮೈಕ್ರೋ ಬ್ಲಾಗಿಂಗ್ ಸೈಟ್ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ ವಿಡಿಯೋ ಮೂಲಕ ರಾಹುಲ್ ಗಾಂಧಿ ಮನವಿ ಮಾಡಿದ್ದಾರೆ.
-
आइये #SpeakUpAgainstFuelHike campaign से जुड़ें। pic.twitter.com/oh8AEfqM3y
— Rahul Gandhi (@RahulGandhi) June 29, 2020 " class="align-text-top noRightClick twitterSection" data="
">आइये #SpeakUpAgainstFuelHike campaign से जुड़ें। pic.twitter.com/oh8AEfqM3y
— Rahul Gandhi (@RahulGandhi) June 29, 2020आइये #SpeakUpAgainstFuelHike campaign से जुड़ें। pic.twitter.com/oh8AEfqM3y
— Rahul Gandhi (@RahulGandhi) June 29, 2020
ಕೊರೊನಾ ವೈರಸ್ ಮತ್ತು ಚೀನಾ ಸಂಘರ್ಷವನ್ನು ಮುಂದಿಟ್ಕೊಂಡು ಕೇಂದ್ರ ಸರ್ಕಾರ ಜನರ ಹಣವನ್ನು ಸುಲಿಗೆ ಮಾಡುತ್ತಿದೆ. ಸತತ 21 ದಿನಗಳ ಕಾಲ ಇಂಧನ ಬೆಲೆ ಹೆಚ್ಚಿಸುವ ಮೂಲಕ ಕೇಂದ್ರವು ಜನರನ್ನು ಲೂಟಿ ಮಾಡುತ್ತಿದೆ. ಹೆಚ್ಚಿದ ಬೆಲೆಗಳನ್ನು ಹಿಂತೆಗೆದುಕೊಳ್ಳುವಂತೆ ಸರ್ಕಾರವನ್ನು ಒತ್ತಾಯಿಸಲು ನಾವು ಧ್ವನಿ ಎತ್ತೋಣ. ನಿಮ್ಮ ಸಾಮಾಜಿಕ ಮಾಧ್ಯಮದಲ್ಲಿ ಇಂಧನ ಬೆಲೆ ಏರಿಕೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಎಂದು ರಾಗಾ ಕರೆ ನೀಡಿದ್ದಾರೆ.
ಸೋಮವಾರದಂದು ಪೆಟ್ರೋಲ್ ಬೆಲೆ 80.43 ರೂ. (5 ಪೈಸೆ ಹೆಚ್ಚಳ) ಮತ್ತು ದೆಹಲಿಯಲ್ಲಿ ಡೀಸೆಲ್ ಬೆಲೆ 80.53 ರೂ. (13 ಪೈಸೆ ) ಹೆಚ್ಚಾಗಿದೆ. ರಾಷ್ಟ್ರ ರಾಜಧಾನಿ ಸೇರಿ ಎಲ್ಲೆಡೆ ಇಂಧನ ಬೆಲೆ ಹೆಚ್ಚುತ್ತಿದಿಯೇ ಹೊರತು ಕಡಿಮೆಯಾಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಉಂಟಾದ ಹೆಚ್ಚಳವನ್ನು ಅನ್ಯಾಯ ಮತ್ತು ಚಿಂತನಶೀಲ ಎಂದು ಕಾಂಗ್ರೆಸ್ ದೂರಿದೆ. ಈ ದರ ಹೆಚ್ಚಳವನ್ನು ತಗ್ಗಿಸಿ, ತೈಲ ಬೆಲೆಯ ಲಾಭವನ್ನು ನೇರವಾಗಿ ಜನರಿಗೆ ತಲುಪಿಸಬೇಕು ಎಂದು ಕೇಂದ್ರ ಸರ್ಕಾರವನ್ನು ಕಾಂಗ್ರೆಸ್ ಒತ್ತಾಯಿಸಿದೆ.