ETV Bharat / bharat

ಆನ್​ಲೈನ್​ ಪಾಠ: ಬುಡಕಟ್ಟು ವಿದ್ಯಾರ್ಥಿಗಳಿಗೆ ಸ್ಮಾರ್ಟ್ ಟಿವಿ ಒದಗಿಸಿದ ರಾಹುಲ್ ಗಾಂಧಿ - ಆನ್​ಲೈನ್​ ಪಾಠ ಕೇಳಲು ಸ್ಮಾರ್ಟ್ ಟಿವಿ ಒದಗಿಸಿದ ರಾಹುಲ್ ಗಾಂಧಿ

ಕೇರಳ ಸರ್ಕಾರ ಪ್ರಾರಂಭಿಸಿರುವ ಫಸ್ಟ್ ಬೆಲ್ ಎಂಬ ಆನ್​ಲೈನ್ ತರಗತಿಯ ಸದುಪಯೋಗ ಪಡೆಯಲು ಅಸಾಧ್ಯವಾದ ವಯನಾಡ್​ ಜಿಲ್ಲೆಯ ಬುಡಕಟ್ಟು ವಿದ್ಯಾರ್ಥಿಗಳಿಗೆ ಕಾಂಗ್ರೆಸ್​ ನಾಯಕ ಹಾಗೂ ವಯನಾಡ್​ ಸಂಸದ ರಾಹುಲ್ ಗಾಂಧಿ ಸ್ಮಾರ್ಟ್​ ಟಿವಿಗಳನ್ನು ಒದಗಿಸಿದ್ದಾರೆ.

Rahul Gandhi provides 175 smart televisions to Wayanad tribal students
ಬುಡಕಟ್ಟು ವಿದ್ಯಾರ್ಥಿಗಳಿಗೆ ಸ್ಮಾರ್ಟ್ ಟಿವಿ ಒದಗಿಸಿದ ರಾಹುಲ್ ಗಾಂಧಿ
author img

By

Published : Jul 2, 2020, 10:08 AM IST

ವಯನಾಡ್ (ಕೇರಳ) : ಕೊರೊನಾ ವೈರಸ್​ ಹಿನ್ನೆಲೆ ರಾಜ್ಯ ಸರ್ಕಾರ ಪ್ರಾರಂಭಿಸಿರುವ ಆನ್​ಲೈನ್ ತರಗತಿಗಳ ಸದುಪಯೋಗ ಪಡೆಯಲು ಬುಡಕಟ್ಟು ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕಾಂಗ್ರೆಸ್​ ನಾಯಕ ಮತ್ತು ವಯನಾಡ್​ ಸಂಸದ ರಾಹುಲ್ ಗಾಂಧಿ 175 ಸ್ಮಾರ್ಟ್ ಟಿವಿಗಳನ್ನು ಕಲ್ಪೆಟ್ಟ ಪಟ್ಟಣದಲ್ಲಿ ಬುಧವಾರ ಹಸ್ತಾಂತರಿಸಿದರು.

ಕೋವಿಡ್​ ಹಿನ್ನೆಲೆ ಶಿಕ್ಷಣ ಸಂಸ್ಥೆಗಳು ಮುಚ್ಚಿರುವುದರಿಂದ ರಾಜ್ಯ ಸರ್ಕಾರ ಕೈಟ್​ವಿಕ್ಟರ್ಸ್​ ಚಾನೆಲ್ ಮತ್ತು ಇತರ ಆನ್​ಲೈನ್​ ವೇದಿಕೆಗಳ ಮೂಲಕ 'ಫಸ್ಟ್ ಬೆಲ್' ಎಂಬ ಆನ್​ಲೈನ್ ತರಗತಿಗಳನ್ನು ಪ್ರಾರಂಭಿಸಿದೆ. ಆದರೆ, ವಯನಾಡ್​ ಜಿಲ್ಲೆಯ ಕೆಲ ಬುಡಕಟ್ಟು ವಿದ್ಯಾರ್ಥಿಗಳಿಗೆ ಈ ತರಗತಿಗಳು ತಲುಪುತ್ತಿರಲಿಲ್ಲ. ಹೀಗಾಗಿ ಸಂಸದ ರಾಹುಲ್ ಗಾಂಧಿ 175 ಸ್ಮಾರ್ಟ್​ ಟಿವಿಗಳನ್ನು ಒದಗಿಸಿದ್ದಾರೆ. ಇದಕ್ಕೂ ಮೊದಲು ತನ್ನ ಜನ್ಮ ದಿನದಂದು ಬುಡಕಟ್ಟು ವಿದ್ಯಾರ್ಥಿಗಳಿಗಾಗಿ 50 ಟಿವಿಗಳನ್ನು ನೀಡಿದ್ದರು.

ಕಲ್ಪೆಟ್ಟದ ಸಂಸದರ ಕಚೇರಿಯಲ್ಲಿ ಜಿಲ್ಲಾ ಕಾಂಗ್ರೆಸ್​ ಅಧ್ಯಕ್ಷ ಐ.ಸಿ.ಬಾಲಕೃಷ್ಣನ್ ನೇತೃತ್ವದಲ್ಲಿ ಟಿವಿ ಹಸ್ತಾಂತರ ಕಾರ್ಯಕ್ರಮ ನಡೆಯಿತು. ಈ ವೇಳೆ, ಮಾತನಾಡಿದ ಬಾಲಕೃಷ್ಣನ್, ಜೂನ್ 1 ರಂದು ಸರ್ಕಾರ ಆನ್​ಲೈನ್​ ತರಗತಿ ಪ್ರಾರಂಭಿಸಿದಾಗ ವಯನಾಡ್​​ನ ಅನೇಕ ಬುಡಕಟ್ಟು ವಿದ್ಯಾರ್ಥಿಗಳು ಇದರಿಂದ ಹೊರಗುಳಿದಿದ್ದರು, ರಾಹುಲ್ ಗಾಂಧಿ ಸಾಕಷ್ಟು ಸಹಾಯ ಮಾಡಿದ್ದಾರೆ ಎಂದು ಹೇಳಿದರು.

ವಿದ್ಯಾರ್ಥಿಗಳ ಸಮಸ್ಯೆ ಕುರಿತು ರಾಹುಲ್ ಗಾಂಧಿ ವಯನಾಡ್​ ಜಿಲ್ಲಾಧಿಕಾರಿ ಅದೀಲಾ ಅಬ್ದುಲ್ಲಾ ಮತ್ತು ಮುಖ್ಯಮಂತ್ರಿಗೆ ಪತ್ರ ಬರೆದಿದ್ದರು. ಸೌಲಭ್ಯದ ಅಗತ್ಯವಿರುವ ಬುಡಕಟ್ಟು ವಿದ್ಯಾರ್ಥಿಗಳ ಕುರಿತು ಜಿಲ್ಲಾಧಿಕಾರಿ ಸಂಸದರಿಗೆ ಮಾಹಿತಿ ನೀಡಿದ್ದರು. ಕೇವಲ ವಯನಾಡ್​ ಮಾತ್ರವಲ್ಲದೇ, ಕೋಯಿಕೋಡ್​ ಮತ್ತು ಮಲಪ್ಪುರಂ ಜಿಲ್ಲೆಗಳಲ್ಲೂ 100 ಹೆಚ್ಚು ಟಿವಿಗಳನ್ನು ರಾಹುಲ್ ಗಾಂಧಿ ವಿತರಿಸಿದ್ದಾರೆ ಎಂದು ಬಾಲಕೃಷ್ಣನ್ ತಿಳಿಸಿದರು.

ಈ ಹಿಂದೆ ಫಸ್ಟ್​ ಬೆಲ್ ಕಾರ್ಯಕ್ರಮ ಪ್ರಾರಂಭವಾದಾಗ ಮುಖ್ಯಮಂತ್ರಿ ಪಿಣರಾಯಿ ವಿಜಯನ್​ಗೆ ಪತ್ರ ಬರೆದಿದ್ದ ರಾಹುಲ್ ಗಾಂಧಿ ಬುಡಕಟ್ಟು ವಿದ್ಯಾರ್ಥಿಗಳ ಸಮಸ್ಯೆಗಳ ಕುರಿತು ಗಮನ ಸೆಳೆದಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.