ETV Bharat / bharat

ಮತ್ತೊಮ್ಮೆ ಪ್ರಯತ್ನ: ಹಥ್ರಾಸ್​ ಸಂತ್ರಸ್ತೆ ಕುಟುಂಬಸ್ಥರ ಭೇಟಿಗೆ ತೆರಳಿದ ರಾಹುಲ್​, ಪ್ರಿಯಾಂಕಾ ಗಾಂಧಿ!

ಹಥ್ರಾಸ್​ ಅತ್ಯಾಚಾರ ಪ್ರಕರಣಕ್ಕೆ ಇನ್ನಿಲ್ಲದ ಆಕ್ರೋಶ ವ್ಯಕ್ತವಾಗುತ್ತಿದ್ದು, ಯೋಗಿ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್​ ತಿರುಗಿ ಬಿದ್ದಿದೆ. ಇದೀಗ ಸಂತ್ರಸ್ತೆ ಕುಟುಂಬ ಭೇಟಿ ಮಾಡಲು ಕಾಂಗ್ರೆಸ್​ ಮುಖಂಡರು ಪ್ರಯಾಣ ಬೆಳೆಸಿದ್ದಾರೆ.

Rahul Gandhi, Priyanka
Rahul Gandhi, Priyanka
author img

By

Published : Oct 3, 2020, 3:37 PM IST

ನವದೆಹಲಿ: ಉತ್ತರ ಪ್ರದೇಶದ ಹಥ್ರಾಸ್​​ನಲ್ಲಿ ನಡೆದಿರುವ ದಲಿತ ಯುವತಿ ಮೇಲಿನ ಅತ್ಯಾಚಾರ ಪ್ರಕರಣ ಇದೀಗ ರಾಜಕೀಯ ತಿರುವು ಪಡೆದುಕೊಂಡಿದ್ದು, ಆಡಳಿತ - ವಿಪಕ್ಷಗಳ ನಡುವೆ ಇದೇ ವಿಚಾರವಾಗಿ ವಾಕ್ಸಮರ ನಡೆಯುತ್ತಿದೆ.

ನಮ್ಮ ಸಹೋದರಿಗೆ ನ್ಯಾಯ ಸಿಗುವವರೆಗೂ ಸುಮ್ಮನೆ ಕುಳಿತುಕೊಳ್ಳಲ್ಲ: ವಾಲ್ಮೀಕಿ ದೇವಸ್ಥಾನದಲ್ಲಿ ಪ್ರಿಯಾಂಕಾ ಪ್ರತಿಜ್ಞೆ!

ಸಂತ್ರಸ್ತೆ ಕುಟುಂಬ ಭೇಟಿ ಮಾಡಲು ಕಳೆದೆರಡು ದಿನಗಳ ಹಿಂದೆ ದೆಹಲಿಯಿಂದ ಪ್ರಯಾಣ ಬೆಳೆಸಿದ್ದ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿಯನ್ನ ನೋಯ್ಡಾ ಪೊಲೀಸರು ತಡೆದು ಕೆಲಹೊತ್ತು ವಶಕ್ಕೆ ಪಡೆದುಕೊಂಡು ಆ ಬಳಿಕ ದೆಹಲಿಗೆ ವಾಪಸ್​ ಕಳುಹಿಸಿದ್ದರು. ಈ ವೇಳೆ, ಯಮುನಾ ಎಕ್ಸ್​​ಪ್ರೆಸ್​ ವೇ ಬಳಿ ಪೊಲೀಸರು ಹಾಗೂ ಕಾಂಗ್ರೆಸ್​ ಕಾರ್ಯಕರ್ತರ ನಡುವೆ ಜಟಾಪಟಿ ಸಹ ನಡೆದಿತ್ತು. ಈ ವೇಳೆ ತಮ್ಮ ಮೇಲೆ ಲಾಠಿಚಾರ್ಜ್ ನಡೆಸಲಾಗಿದೆ ಎಂದು ರಾಗಾ ಗಂಭೀರ ಆರೋಪ ಮಾಡಿದ್ದರು.

ಹಥ್ರಾಸ್​ ಸಂತ್ರಸ್ತೆ ಕುಟುಂಬಸ್ಥರ ಭೇಟಿಗೆ ತೆರಳಿದ ರಾಹುಲ್​, ಪ್ರಿಯಾಂಕಾ

ಇದರ ಬೆನ್ನಲ್ಲೇ ಇದೀಗ ಮತ್ತೊಮ್ಮೆ ರಾಹುಲ್​ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಮತ್ತೊಮ್ಮೆ ಹಥ್ರಾಸ್​​ನತ್ತ ಪ್ರಯಾಣ ಬೆಳೆಸಿದ್ದಾರೆ. ಆದರೆ, ನೋಯ್ಡಾ ಪೊಲೀಸರು ಯಮುನಾ ಎಕ್ಸ್​ಪ್ರೆಸ್​ ವೇ ಬಳಿ ಬ್ಯಾರಿಕೇಡ್​ ಹಾಕಿದ್ದಾಗಿ ತಿಳಿದು ಬಂದಿದೆ.

ಪ್ರಿಯಾಂಕಾ​ ಗಾಂಧಿ ಪ್ರತಿಕ್ರಿಯೆ

ಈ ವೇಳೆ, ಸುದ್ದಿಗಾರರೊಂದಿಗೆ ಮಾತನಾಡಿರುವ ರಾಹುಲ್​ ಗಾಂಧಿ, ಈ ಸಲ ಆಗದಿದ್ರೆ ಮತ್ತೊಮ್ಮೆ ಪ್ರಯತ್ನಿಸುವೆ. ಯಾವುದೇ ಕಾರಣಕ್ಕೂ ನಮ್ಮ ಹೋರಾಟ ನಿಲ್ಲಿಸುವುದಿಲ್ಲ ಎಂದು ತಿಳಿಸಿದ್ದಾರೆ. ಹಥ್ರಾಸ್​ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ಜಂತರ್​ ಮಂತರ್​​ನಲ್ಲಿ ಪ್ರತಿಭಟನೆ ನಡೆಸಲಾಗಿತ್ತು. ಇದರಲ್ಲಿ ಸೀತಾರಾಮ್ ಯಚೊರಿ, ದೆಹಲಿ ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್​ ಭಾಗಿಯಾಗಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.