ಮುಂಬೈ: ಕಾಂಗ್ರೆಸ್ ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ಗುರುವಾರ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರನ್ನು ದೆಹಲಿಯ ನಿವಾಸದಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.
ಲೋಕಸಭೆ ಚುನಾವಣೆಯಲ್ಲಿ ಹೀನಾಯ ಸೋಲಿನ ಬಳಿಕ ಇಬ್ಬರೂ ನಾಯಕರು ಸುಮಾರು ಒಂದು ಗಂಟೆಗಳ ಕಾಲ ಚರ್ಚೆ ನಡೆಸಿರುವುದು ಎರಡು ಪಕ್ಷಗಳು ವಿಲೀನದ ಬಗ್ಗೆ ಚರ್ಚಿಸಿರಬಹುದೇ ಎಂಬುದು ಎಲ್ಲರ ಲೆಕ್ಕಾಚಾರವಾಗಿದೆ.
-
Congress President Mr. @RahulGandhi met up with me today at my residence in Delhi. We discussed matters pertaining to the forthcoming Vidhan Sabha Elections and the drought situation in Maharashtra. pic.twitter.com/SUQHzjAbOB
— Sharad Pawar (@PawarSpeaks) ಮೇ 30, 2019 " class="align-text-top noRightClick twitterSection" data="
">Congress President Mr. @RahulGandhi met up with me today at my residence in Delhi. We discussed matters pertaining to the forthcoming Vidhan Sabha Elections and the drought situation in Maharashtra. pic.twitter.com/SUQHzjAbOB
— Sharad Pawar (@PawarSpeaks) ಮೇ 30, 2019Congress President Mr. @RahulGandhi met up with me today at my residence in Delhi. We discussed matters pertaining to the forthcoming Vidhan Sabha Elections and the drought situation in Maharashtra. pic.twitter.com/SUQHzjAbOB
— Sharad Pawar (@PawarSpeaks) ಮೇ 30, 2019
ಈ ರೀತಿಯ ಊಹಾಪೋಹವನ್ನು ತಳ್ಳಿ ಹಾಕಿರುವ ಎನ್‌ಸಿಪಿ ಪಕ್ಷದ ಮುಖಂಡರು, ವಿಲೀನದ ಬಗ್ಗೆ ಯಾವುದೇ ಪ್ರಸ್ತಾಪವನ್ನು ನಾಯಕರುಗಳು ಮಾಡಿಲ್ಲ ಎಂದು ಹೇಳಿದ್ದಾರೆ. ರಾಹುಲ್ ಭೇಟಿ ಬಗ್ಗೆ ಟ್ವೀಟ್ ಮಾಡಿರುವ ಕೇಂದ್ರದ ಮಾಜಿ ಶರದ್ ಪವಾರ್, ರಾಹುಲ್ ಗಾಂಧಿ ದೆಹಲಿಯ ನನ್ನ ನಿವಾಸದಲ್ಲಿ ಇಂದು ನನ್ನನ್ನು ಭೇಟಿಯಾದರು. ಮುಂಬರುವ ವಿಧಾನಸಭಾ ಚುನಾವಣೆ ಮತ್ತು ಮಹಾರಾಷ್ಟ್ರದ ಬರ / ಜಲಕ್ಷಾಮ ಪರಿಸ್ಥಿತಿಗೆ ಸಂಬಂಧಿಸಿದಂತೆ ನಾವು ಚರ್ಚಿಸಿದ್ದೇವೆ '' ಎಂದು ಟ್ವೀಟ್ ಮಾಡುವ ಮೂಲಕ ಊಹಾಪೋಹಕ್ಕೆ ತೆರೆ ಎಳೆದಿದ್ದಾರೆ. ಇದೇ ಸಂದರ್ಭದಲ್ಲಿ ರಾಹುಲ್ ಕರ್ನಾಟಕ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರನ್ನೂ ಭೇಟಿ ಮಾಡಿ ರಾಜ್ಯದಲ್ಲಿ ಸಮ್ಮಿಶ್ರ ಸರಕಾರದ ಬಿಕ್ಕಟ್ಟಿನ ಬಗ್ಗೆ ಚರ್ಚೆ ನಡೆಸಿದ್ದಾರೆ.