ETV Bharat / bharat

ಮುಷ್ಕರಕ್ಕೆ 'ಕೈ'ಕೊಟ್ಟು ವಿದೇಶಕ್ಕೆ ಹಾರಿದ 'ಕೈ' ನಾಯಕ ರಾಹುಲ್​ ಗಾಂಧಿ..!

ಪಕ್ಷದ ಹಿರಿಯ ನಾಯಕರು ನವೆಂಬರ್ 5 ರಿಂದ 15 ರವರೆಗೆ ಜಿಲ್ಲೆಯಿಂದ ದೆಹಲಿ ಮಟ್ಟದವರೆಗೆ ಸುದ್ದಿಗೋಷ್ಠಿ ನಡೆಸಲಿದ್ದು, ಈ ಗೋಷ್ಠಿಗಳಿಗೆ ಇತರ ಪ್ರತಿ ಪಕ್ಷಗಳ ಮುಖಂಡರನ್ನು ಸಹ ಆಹ್ವಾನಿಸಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ರಾಹುಲ್ ಗಾಂಧಿ ಅವರು ಸೋಮವಾರದಂದು ವಿದೇಶಕ್ಕೆ ಹಾರಿದ್ದಾರೆ.

ಸಾಂದರ್ಭಿಕ ಚಿತ್ರ
author img

By

Published : Oct 30, 2019, 1:56 PM IST

ನವದೆಹಲಿ: ದೇಶದಲ್ಲಿ ಸಂಭವಿಸುತ್ತಿರುವ ಆರ್ಥಿಕ ಹಿಂಜರಿತದ ವಿರುದ್ಧ ಕಾಂಗ್ರೆಸ್ ಕರೆ ನೀಡಿದ ದೇಶವ್ಯಾಪಿ ಮುಷ್ಕರಕ್ಕೆ ಕೆಲವು ದಿನಗಳಷ್ಟೆ ಬಾಕಿ ಇರುವಂತೆ ಪಕ್ಷದ ಮಾಜಿ ಅಧ್ಯಕ್ಷ ರಾಹುಲ್​ ಗಾಂಧಿ ವಿದೇಶಕ್ಕೆ ತೆರಳಿದ್ದಾರೆ.

ಕುಸಿಯುತ್ತಿರುವ ಆರ್ಥಿಕತೆಯನ್ನು ಮೇಲೆತ್ತುವಲ್ಲಿ ಪ್ರಧಾನಿ ಮೋದಿ ನೇತೃತ್ವದ ಎನ್​ಡಿಎ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದ ಕಾಂಗ್ರೆಸ್, ನವೆಂಬರ್​ ಮೊದಲ ವಾರದಂದು ದೇಶದಾದ್ಯಂತ ಪ್ರತಿಭಟನೆಗೆ ಕರೆ ನೀಡಿದೆ.

ಕಾಂಗ್ರೆಸ್ ನವೆಂಬರ್ 1 ಮತ್ತು 8ರ ನಡುವೆ ವಿವಿಧ ರಾಜ್ಯಗಳ ಮುಖಂಡರು 35 ಪತ್ರಿಕಾಗೋಷ್ಠಿಗಳನ್ನ ನಡೆಸಿ, ದೇಶದಲ್ಲಿನ ಪ್ರಸ್ತುತ ಆರ್ಥಿಕ ಪರಿಸ್ಥಿತಿಯನ್ನು ಜನತೆಯ ಮುಂದಿಡಲಿದ್ದಾರೆ. ನವೆಂಬರ್ 5 ರಿಂದ 15ರವರೆಗೆ ಕೇಂದ್ರದ ನಡೆಯನ್ನು ವಿರೋಧಿಸಿ ಎಲ್ಲ ರಾಜ್ಯಗಳ ಜಿಲ್ಲಾ, ತಾಲೂಕು ಹಾಗೂ ಹೋಬಳಿ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಲಿದೆ.

ಕಾಂಗ್ರೆಸಿನ ಮೂಲಗಳ ಪ್ರಕಾರ, ರಾಹುಲ್​ ಗಾಂಧಿ ಅವರು ಒಂದು ವಾರ ಮಾತ್ರವೇ ವಿದೇಶ ಪ್ರವಾಸ ಕೈಗೊಂಡಿದ್ದಾರೆ. ಭಾರತಕ್ಕೆ ನವೆಂಬರ್ ಮೊದಲ ವಾರದಲ್ಲಿ ವಾಪಸ್​ ಆಗಲಿದ್ದು, ಈ ನಂತರ ಪ್ರತಿಭಟನೆಯಲ್ಲಿ ಸೇರಿಕೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.