ETV Bharat / bharat

ದೆಹಲಿ ರೈತರಿಂದ ಆವೃತವಾಗಿದೆ, ನಮಗೆ ಆಹಾರ ನೀಡುವ ಅನ್ನದಾತರಿಗೆ ಬೆದರಿಸಿ, ಹೊಡೆಯಲಾಗ್ತಿದೆ: ರಾಹುಲ್ - ರೈತರ ಪ್ರತಿಭಟನೆ ನ್ಯೂಸ್​

ನಮಗೆ ಅನ್ನ ನೀಡುವ ರೈತರ ಮೇಲೆ ಕೇಂದ್ರ ಸರ್ಕಾರ ದಾಳಿ ನಡೆಸುತ್ತಿದ್ದು, ಈ ಸಮಸ್ಯೆ ದೇಶಕ್ಕೆ ಒಳ್ಳೆಯದಲ್ಲ ಎಂದು ರಾಹುಲ್ ಗಾಂಧಿ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದರು.

Rahul Gandhi
Rahul Gandhi
author img

By

Published : Feb 3, 2021, 4:35 PM IST

ನವದೆಹಲಿ: ದೆಹಲಿ ರೈತರಿಂದ ಆವೃತವಾಗಿದೆ. ಅವರು ನಮಗೆ ಆಹಾರ ನೀಡುವ ಅನ್ನದಾತರು. ಆದರೆ, ದೆಹಲಿಯನ್ನ ಕೋಟೆಯಾಗಿ ಏಕೆ ಪರಿವರ್ತಿಸಲಾಗುತ್ತಿದೆ? ಕೇಂದ್ರ ಸರ್ಕಾರದಿಂದ ಅವರನ್ನ ಬೆದರಿಸುವ, ಹೊಡೆಯುವ ಹಾಗೂ ಕೊಲ್ಲುವ ಯತ್ನ ನಡೆಯುತ್ತಿದೆ. ಸರ್ಕಾರ ಅವರೊಂದಿಗೆ ಏಕೆ ಮಾತನಾಡುತ್ತಿಲ್ಲ. ಮತ್ತು ಸಮಸ್ಯೆ ಬಗೆಹರಿಸಲು ಯಾಕೆ ಮುಂದಾಗುತ್ತಿಲ್ಲ ಎಂದು ರಾಹುಲ್ ಗಾಂಧಿ ಪ್ರಶ್ನೆ ಮಾಡಿದ್ದು, ಈ ಸಮಸ್ಯೆ ದೇಶಕ್ಕೆ ಒಳ್ಳೆಯದಲ್ಲ ಎಂದಿದ್ದಾರೆ.

ಕೇಂದ್ರ ಸರ್ಕಾರದ ವಿರುದ್ಧ ರಾಹುಲ್ ವಾಗ್ದಾಳಿ

ರೈತರ ವಿಚಾವನ್ನಿಟ್ಟುಕೊಂಡು ಸುದ್ದಿಗೋಷ್ಠಿ ನಡೆಸಿ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ ರಾಹುಲ್ ಗಾಂದಿ, ಮುಂದಿನ ಎರಡು ವರ್ಷಕ್ಕೆ ಕಾನೂನು ಅಮಾನತಿನಲ್ಲಿಡುವ ಆಫರ್ ಈಗಲೂ ಟೆಬಲ್​ ಮೇಲಿದೆ ಎಂದು ಪ್ರಧಾನಿ ಹೇಳಿದ್ದಾರೆ. ಇದರ ಅರ್ಥವೇನು? ಆದಷ್ಟು ಬೇಗ ಈ ಸಮಸ್ಯೆ ಪರಿಹರಿಸಬೇಕಾಗಿದೆ. ಕೇಂದ್ರ ಸರ್ಕಾರ ರೈತರ ಸಮಸ್ಯೆ ಆಲಿಸಬೇಕು. ಅವರೂ ಎಲ್ಲಿಗೂ ಹೊಗುತ್ತಿಲ್ಲ ಎಂದಿದ್ದಾರೆ.

ಕೇಂದ್ರ ಸರ್ಕಾರ ಕೇವಲ ಖಾಸಗೀಕರಣದ ಬಗ್ಗೆ ಮಾತನಾಡುತ್ತಿದೆ. ಇದರಿಂದ ಅವರಿಗೆ ಪ್ರಯೋಜನವಿದೆ. ಉತ್ತಮ ಆರ್ಥಿಕತೆ ಮರು ಪ್ರಾರಂಭ ಮಾಡಬೇಕಾದ್ರೆ ಜನರ ಕೈಯಲ್ಲಿ ಹಣ ನೀಡಬೇಕು. ಆದರೆ, ಕೇಂದ್ರ ಸರ್ಕಾರ ಆ ಕೆಲಸ ಮಾಡುತ್ತಿಲ್ಲ ಎಂದು ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದರು.

ಓದಿ: 'ಮೋದಿ ಪ್ಲಾನಿಂಗ್​ ಫಾರ್ಮರ್​ ಜಿನೊಸೈಡ್' ಹ್ಯಾಷ್​ಟ್ಯಾಗ್​ ಟ್ರೆಂಡಿಂಗ್​: ಟ್ವಿಟರ್​ಗೆ ನೋಟಿಸ್ ನೀಡಿದ ಕೇಂದ್ರ !

ಕೇಂದ್ರ ಬಜೆಟ್​ನಿಂದ ದೇಶದ ಶೇ.99ರಷ್ಟು ಜನರಿಗೆ ಸಹಾಯ ಮಾಡುತ್ತದೆ ಎಂದು ನಾನು ಅಂದುಕೊಂಡಿದ್ದೇನು. ಆದರೆ ಶೇ.1ರಷ್ಟು ಜನರಿಗೆ ಮಾತ್ರ ಅದರಿಂದ ಸಹಾಯವಾಗಿದ್ದು, ಸಣ್ಣ ಮತ್ತು ಮಧ್ಯಮ ವರ್ಗದ ಜನರು, ಕಾರ್ಮಿಕರು, ರೈತರ ಹಣ ಕಸಿದಿಕೊಂಡು ಕೇವಲ 5-10 ಜನರ ಜೇಬಿಗೆ ಹಾಕಿದ್ದೀರಿ, ಇದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಧಾನಿಗಳನ್ನು ಪ್ರಶ್ನಿಸಿದರು.

ಚೀನಾ ಭಾರತದ ಗಡಿಯೊಳಗೆ ಪ್ರವೇಶ ಮಾಡಿ ಭೂಮಿ ತನ್ನ ವಶಕ್ಕೆ ಪಡೆದುಕೊಂಡಿದೆ. ಆದರೆ, ಇಲ್ಲಿಯವರೆಗೆ ಅವರಿಗೆ ತಿರುಗೇಟು ನೀಡಿಲ್ಲ. ಇದರಿಂದ ದೇಶದ ಜನರಿಗೆ ಯಾವ ಸಂದೇಶ ರವಾನೆ ಮಾಡುತ್ತೀರಿ ಎಂದು ಪ್ರಶ್ನೆ ಮಾಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.