ಮುಂಬೈ: ಸಂಗೀತ ಮಾಂತ್ರಿಕ ಎ ಆರ್ ರೆಹಮಾನ್ ತನ್ನ ಮಗಳು ಖತೀಜಾ ರಹಮಾನ್ ಬುರ್ಖಾ ಧರಿಸಿದ ವಿಚಾರವಾಗಿ ಲೇಖಕಿ ತಸ್ಲೀಮಾ ನಸ್ರೀನ್ ಮಾಡಿದ ಟೀಕೆ ಬಗ್ಗೆ ಸಂದರ್ಶನವೊಂದರಲ್ಲಿ ಸ್ಪಷ್ಟನೆ ನೀಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ರೆಹಮಾನ್ ಅವರು, ನನ್ನ ಮಗಳು ಬುರ್ಖಾ ವಿಚಾರವಾಗಿ ಎದುರಿಸಿದ ಟೀಕೆಗಳ ಬಗ್ಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ಇಂತಹ ಟೀಕೆಗಳಿಗೆ ನಾನು ಪ್ರತಿಕ್ರಿಯಿಸುವುದಿಲ್ಲ ಎಂದಿದ್ದಾರೆ.
ಸಂದರ್ಶನವೊಂದರಲ್ಲಿ ನಿಮ್ಮ ಮಗಳು ಮತ್ತು ಲೇಖಕಿ ತಸ್ಲೀಮಾ ನಡುವೆ ಉಂಟಾದ ಬುರ್ಖಾ ವಾಕ್ ಸಮರದ ಬಗ್ಗೆ ರೆಹಮಾನ್ಗೆ ಪ್ರಶ್ನೆ ಕೇಳಿದಾಗ ಅದಕ್ಕೆ ಉತ್ತರಿಸಿದ ರೆಹಮಾನ್, ಮಕ್ಕಳನ್ನು ಸಾಮಾನ್ಯವಾಗಿ ತಮ್ಮ ಪೂರ್ವಿಕರು ಬೆಳೆದು ಬಂದಂತೆ ಬೆಳೆಸಲಾಗುತ್ತೆ. ಆದರೂ ಮಕ್ಕಳ ಇಚ್ಛೆಗೆ ಕೂಡ ಮುಕ್ತ ಅವಕಾಶ ಇದೆ ಎಂದಿದ್ದಾರೆ. ನಮ್ಮ ಸಮಸ್ಯೆಗಳನ್ನು ಅವರು ತಿಳಿದಿರುವ ರೀತಿ ನಾವು ಅವರನ್ನು ಬೆಳೆಸಿದರೆ ಒಳ್ಳೆಯದು ಏನು ಎಂದು ನಾನು ಭಾವಿಸುತ್ತೇನೆ. ಅವರು ನಮ್ಮಿಂದ ಒಳ್ಳೆಯದು ಮತ್ತು ಕೆಟ್ಟದ್ದನ್ನು ಆನುವಂಶಿಕವಾಗಿ ಪಡೆಯಬೇಕು ಎಂದು ಅವರಿಗೆ ತಿಳಿದಿದೆ. ಹಾಗೆಯೇ ಅವರಿಗೆ ಅವರಿಷ್ಟದಂತೆ ಇರಲು ಅವಕಾಶ ನೀಡಲಾಗುತ್ತದೆ. ಅವಳು ಅವಳ ಇಚ್ಛೆಯಂತೆ ನಡೆದುಕೊಂಡಿದ್ದಾಳೆ ಎಂದ್ರು.
![Rahman on Taslima Nasreen criticising his daughter's attire](https://etvbharatimages.akamaized.net/etvbharat/prod-images/6149814_mumbai.jpg)
ನಿಮ್ಮ ಮಗಳು ಬುರ್ಖಾ ಹಾಕಿರುವ ಫೊಟೋ ನೀವು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುವ ಮೊದಲು ಅವರನ್ನು ಸಂಪರ್ಕಿಸಿದ್ದೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ರೆಹಮಾನ್, ಅವಳು ನನಗಿಂತ ಮೊದಲೇ ಈ ಫೊಟೋ ಅಪ್ಲೋಡ್ ಮಾಡಿದ್ದಾಳೆ. ನಂತರ ನಾನು ಆ ಫೋಟೋವನ್ನು ಇನ್ಸ್ಟಾಗ್ರಾಂನಲ್ಲಿ ಹಾಕಿಕೊಂಡಿದ್ದೇನೆ, ಬುರ್ಖಾ ತೊಡುವುದು ಅವಳ ಆಯ್ಕೆ ಎಂದಿದ್ದಾರೆ.
ಖತೀಜಾ ಧರಿಸುವ ಉಡುಪಿನ ವಿಚಾರ ಧಾರ್ಮಿಕ ವಿಷಯ ಮೀರಿದೆ. ಅದು ಅವಳ ವೈಯುಕ್ತಿಕ ಆಯ್ಕೆಯಾಗಿದೆ ಮತ್ತು ಆಕೆಗೆ ಬೇಕಾಗಿರೋದನ್ನು ಧರಿಸಲು ಅವಳಿಗೆ ಸ್ವಾತಂತ್ರ್ಯವಿದೆ ಎಂದು ರೆಹಮಾನ್ ಸ್ಪಷ್ಟಪಡಿಸಿದ್ದಾರೆ. ಖತೀಜಾ ಅವರ ಉಡುಪು ಧಾರ್ಮಿಕ ವಿಷಯಕ್ಕಿಂತ ಹೆಚ್ಚಿನದಾಗಿದೆ. ಅದು ಅವರ ವೈಯಕ್ತಿಕ ಆಯ್ಕೆಯಾಗಿದೆ ಮತ್ತು ಆಕೆಗೆ ಬೇಕಾದುದನ್ನು ಧರಿಸಲು ಅವರಿಗೆ ಸ್ವಾತಂತ್ರ್ಯವಿದೆ ಎಂದು ರೆಹಮಾನ್ ಸ್ಪಷ್ಟಪಡಿಸಿದ್ದಾರೆ. ಧಾರ್ಮಿಕ ವಿಷಯಕ್ಕಿಂತ ಹೆಚ್ಚಾಗಿ, ಇದು ಮಾನಸಿಕ ವಿಷಯ ಎಂಬುದು ನನ್ನ ವೈಯುಕ್ತಿಕ ಅಭಿಪ್ರಾಯ ಎಂದಿದ್ದಾರೆ ಸಂಗೀತ ಮಾಂತ್ರಿಕ.
ಒಂದು ವೇಳೆ ಗಂಡು ಬುರ್ಖಾ ಧರಿಸುವಂತಿದ್ದರೆ ನಾನು ಧರಿಸುತ್ತಿದ್ದೆ. ಶಾಪಿಂಗ್ ಮಾಡುವುದು ಸ್ಥಿರವಾದ ಜೀವನವನ್ನು ಕಂಡುಕೊಳ್ಳುವುದು ತುಂಬಾ ಸುಲಭ. ಆದರೆ, ಖತೀಜಾ ಯಾರದೋ ಸಂಬಂಧಿಯ ಅಂತ್ಯಕ್ರಿಯೆಗೂ ಕೆಲಸದವರ ತಾಯಿಯ ಅಂತ್ಯಕ್ರಿಯೆಗೋ ಹೋಗುತ್ತಾಳೆ. ಅವಳ ಈ ಸರಳತೆ ಮತ್ತು ಸಾಮಾಜಿಕ ಕಳಕಳಿ ಎಷ್ಟೋ ಬಾರಿ ನನ್ನನ್ನು ಆಶ್ಚರ್ಯ ಚಕಿತನಾಗಿಸಿದೆ ಎಂದಿದ್ದಾರೆ.
ಲೇಖಕಿ ತಸ್ಲೀಮಾ ನಸ್ರೀನ್ ರೆಹಮಾನ್ ಮಗಳು ಬುರ್ಖಾ ತೊಟ್ಟಿರುವ ಫೋಟೋವನ್ನು ನೋಡಿ, ರೆಹಮಾನ್ ಮಗಳು ಬುರ್ಖಾ ತೊಟ್ಟಿರುವುದನ್ನು ನೋಡಿದಾಗಲೆಲ್ಲಾ ಉಸಿರು ಕಟ್ಟಿದಂತಾಗುತ್ತದೆ ಎಂದು ಟ್ವೀಟ್ ಮಾಡಿದ್ರು. ಅಲ್ಲದೇ ಪ್ರಸಿದ್ಧ ಸಂಗೀತ ನಿರ್ದೇಶಕನ ಮನೆಯಲ್ಲೇ ಹೆಣ್ಣಿಗೆ ಸ್ವಾತಂತ್ರ್ಯ ಇಲ್ಲ ಎಂದು ಟೀಕಿಸಲಾಗಿತ್ತು. “ನಾನು ಎ ಆರ್ ರೆಹಮಾನ್ ಅವರ ಸಂಗೀತ ಇಷ್ಟಪಡುತ್ತೇನೆ. ಆದರೆ, ಅವರ ಪ್ರೀತಿಯ ಮಗಳನ್ನು ನೋಡಿದಾಗಲೆಲ್ಲ ಉಸಿರು ಕಟ್ಟಿದಂತಾಗುತ್ತದೆ. ಸಂಸ್ಕೃತಿ ಬದ್ಧ ಕುಟುಂಬದಲ್ಲಿ ವಿದ್ಯಾವಂತ ಮಹಿಳೆಯರ ಬ್ರೈನ್ ವಾಶ್ ಎಷ್ಟು ಸುಲಭವಾಗಿ ಮಾಡಬಹುದು ಎಂದು ಯೋಚಿಸಿದರೆ ಚಿಂತೆ ಕಾಡುತ್ತದೆ” ಎಂದು ಟ್ವೀಟ್ ಮಾಡಿದ್ರು. ಇದಕ್ಕೆ ರೆಹಮಾನ್ ಮಗಳು ಖತೀಜಾ ಕೂಡ ಇನ್ಸ್ಟಾಗ್ರಾಮ್ನಲ್ಲಿ ತಸ್ಲಿಮಾಗೆ ಸರಿಯಾಗೇ ಪ್ರತ್ಯುತ್ತರ ನೀಡಿದ್ರು.