ನವದೆಹಲಿ: ಆಕಾಶದಲ್ಲಿ ಹಾರುತ್ತಿರುವಾಗಲೇ ಶತ್ರುಗಳನ್ನು ಸದೆಬಡಿಯುವ ಸಾಮರ್ಥ್ಯ ರಫೇಲ್ ಯುದ್ಧ ವಿಮಾನಗಳಿಗಿದೆ. ಏರ್ ಟು ಏರ್ ಅಂದರೆ ಬಾನಿನಲ್ಲೇ ಶತ್ರು ಸೇನೆಯ ವಿಮಾನಗಳ ಮೇಲೆ ಬಾಂಬ್ ದಾಳಿ ಮಾಡುವ ಜೊತೆಗೆ ಏರ್ ಟು ಅರ್ತ್ ಅಂದರೆ ಆಕಾಶದಿಂದ ಭೂಮಿಯ ಮೇಲಿರುವ ಗುರಿಗೆ ಬಾಂಬ್ ಹಾಕುವ ನೈಪುಣ್ಯವನ್ನು ಈ ಸಮರ ವಿಮಾನಗಳು ಹೊಂದಿವೆ.
ಎಂತಹ ಹವಾಮಾನದಲ್ಲೂ ಇವು ಶತ್ರು ಪಡೆಗಳ ಮೇಲೆ ದಾಳಿ ನಡೆಸುವ ಸಾಮರ್ಥ್ಯ ಹೊಂದಿರುತ್ತವೆ. ಕಣ್ಣಿಗೆ ಕಾಣಿಸದಷ್ಟು ದೂರದಿಂದ ಅಟ್ಯಾಕ್ ಮಾಡಬಲ್ಲ ಶಕ್ತಿ ರಫೇಲ್ ಯುದ್ಧ ವಿಮಾನಗಳದ್ದು. ಈ ಯುದ್ಧ ವಿಮಾನಗಳನ್ನು ಚಲಾಯಿಸುವ ಜೊತೆಗೆ ತಾಂತ್ರಿಕ ಕೆಲಸಗಳನ್ನು ನಿರ್ವಹಿಸಲು ಪೈಲಟ್ಗಳು ವಿಶೇಷ ಪರಿಣತಿ ಹೊಂದಿರಬೇಕು.
ಇದಕ್ಕಾಗಿ ಪೈಲಟ್ಗಳಿಗೆ ಸ್ಪೆಷಲ್ ಟ್ರೈನಿಂಗ್ ಕೂಡ ನೀಡಲಾಗುತ್ತದೆ. ಫ್ರಾನ್ಸ್ನಿಂದ ಇಂದು ಭಾರತಕ್ಕೆ ಬಂದ ರಫೇಲ್ ಯುದ್ಧ ವಿಮಾನವನ್ನು ಚಾಲನೆ ಮಾಡಿದವರ ಪೈಕಿ ವಿಜಯಪುರದ ಸೈನಿಕ ಶಾಲೆಯಲ್ಲಿ ಕಲಿತ ಕನ್ನಡಿಗ ಅರುಣ್ ಕುಮಾರ್ ಕೂಡಾ ಒಬ್ಬರಾಗಿದ್ದು ಕರ್ನಾಟಕಕ್ಕೆ ಹೆಮ್ಮೆಯ ಸಂಗತಿ.