ETV Bharat / bharat

ಸಿಂಘು ಗಡಿ ಹಿಂಸಾಚಾರಕ್ಕೆ ಪಂಜಾಬ್​ ಸಿಎಂ ಖಂಡನೆ: ಪಾಕ್​ ಪಾತ್ರದ ತನಿಖೆಗೆ ಒತ್ತಾಯ

ಸಿಂಘು ಗಡಿಯಲ್ಲಿ ರೈತರು ಮತ್ತು ಸ್ಥಳೀಯರ ನಡುವೆ ನಡೆದ ಹಿಂಸಾಚಾರ ಘಟನೆಯನ್ನು ತೀವ್ರವಾಗಿ ಖಂಡಿಸಿರುವ ಪಂಜಾಬ್​ ಸಿಎಂ ಅಮರೀಂದರ್​ ಸಿಂಗ್​ ಈ ಘಟನೆ ಕುರಿತು ಸೂಕ್ತ ತನಿಖೆ ನಡೆಸಬೇಕೆಂದು ಮನವಿ ಮಾಡಿದ್ದಾರೆ. ಹಾಗೆಯೇ ರೈತ ಚಳವಳಿ ಸಮಯದಲ್ಲಿ ಉಂಟಾದ ಇತ್ತೀಚಿನ ಅಹಿತಕಾರಿ ಘಟನೆಗಳು ಮತ್ತು ಹಿಂಸಾಚಾರಗಳಲ್ಲಿ ಪಾಕಿಸ್ತಾನದ ಪಾತ್ರದ ಬಗ್ಗೆ ಕೇಂದ್ರ ಸಂಸ್ಥೆಗಳು ತನಿಖೆ ನಡೆಸಬೇಕು ಎಂದು ಪಂಜಾಬ್​ ಮುಖ್ಯಮಂತ್ರಿ ಅಮರೀಂದರ್​ ಸಿಂಗ್​ ಆಗ್ರಹಿಸಿದ್ದಾರೆ.

Punjab CM condemns Singhu border violence, says this is what Pak wants
ಪಾಕ್​ ಪಾತ್ರವಿರುವ ಬಗ್ಗೆ ತನಿಖೆ ನಡೆಸುವಂತೆ ಒತ್ತಾಯ
author img

By

Published : Jan 30, 2021, 4:50 PM IST

ಚಂಡೀಗಢ: ಸಿಂಘು ಗಡಿಯಲ್ಲಿ "ಕೆಲವು ದುಷ್ಕರ್ಮಿಗಳು" ನಡೆಸಿದ ಹಿಂಸಾಚಾರ ಖಂಡಿಸಿರುವ ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್, ಘಟನೆ ಕುರಿತು ಸೂಕ್ತ ತನಿಖೆಯಾಗಬೇಕು ಎಂದು ಆಗ್ರಹಿಸಿದ್ದಾರೆ.

ಇಂಥ ಕೃತ್ಯ ಎಸಗಿದವರು ನಿಜವಾಗಿಯೂ ಸ್ಥಳೀಯರಾಗಿದ್ದಾರೆಯೇ? "ಎಂದು ಅಮರೀಂದರ್​ ಪ್ರಶ್ನಿಸಿದ್ದಾರೆ, ಹಾಗೂ ರೈತರ ಪ್ರತಿಭಟನೆ ವೇಳೆ ತೊಂದರೆ ಉಂಟು ಮಾಡಿದವರನ್ನು "ಗುರುತಿಸಲು ಮತ್ತು ಅವರು ಎಲ್ಲಿಂದ ಬಂದರು ಎಂದು ಖಚಿತಪಡಿಸಿಕೊಳ್ಳಲು ಸರಿಯಾದ ತನಿಖೆ ನಡೆಸುವಂತೆ ಮನವಿ ಮಾಡಿದ್ದಾರೆ. ಸ್ಥಳೀಯ ಜನರು ಈ ರೀತಿ ರೈತರ ವಿರುದ್ಧ ತಿರುಗಿ ಬೀಳಬಹುದೆಂದು ನಾನು ನಂಬಲು ಸಾಧ್ಯವಿಲ್ಲ. ಅಶಾಂತಿ ಹುಟ್ಟುಹಾಕಲು ಕೆಲವು ದುಷ್ಟರನ್ನು ಇತರ ಸ್ಥಳಗಳಿಂದ ಪಟ್ಟಭದ್ರ ಹಿತಾಸಕ್ತಿಗಳು ಕರೆಸಿರಬಹುದು ಎಂದು ಅವರು ಹೇಳಿದ್ರು.

ಇಂದು ಸಿಂಘು ಗಡಿಯಲ್ಲಿ ಏನಾಗುತ್ತಿದೆ ಮತ್ತು ಏನಾಗಿದೆ ಎಂಬುದು ಪಾಕಿಸ್ತಾನಕ್ಕೆ ಬೇಕಾಗಿರುವುದು, ಪಂಜಾಬ್‌ನ ಶಾಂತಿಗೆ ಭಂಗ ತರುವಂತೆ ಕೃಷಿ ಕಾನೂನು ವಿರುದ್ಧ ನಡೆಯುತ್ತಿರುವ ಪ್ರತಿಭಟನೆಯಿಂದ ಉಂಟಾಗಿರುವ ಅಶಾಂತಿಯನ್ನು ದುರ್ಬಳಕೆ ಮಾಡಿಕೊಳ್ಳಲು ಪಾಕಿಸ್ತಾನವು ಬಹಳ ಸಮಯದಿಂದ ಕಾಯುತ್ತಿದೆ ಎಂದು ಪಂಜಾಬ್​ ಸಿಎಂ ಹೇಳಿದ್ದಾರೆ.

ರೈತ ಚಳವಳಿ ಸಮಯದಲ್ಲಿ ಉಂಟಾದ ಇತ್ತೀಚಿನ ಅಹಿತಕಾರಿ ಘಟನೆಗಳು ಮತ್ತು ಹಿಂಸಾಚಾರಗಳಲ್ಲಿ ಪಾಕಿಸ್ತಾನದ ಪಾತ್ರದ ಬಗ್ಗೆ ಕೇಂದ್ರ ಸಂಸ್ಥೆಗಳು ತನಿಖೆ ನಡೆಸಬೇಕು ಎಂದು ಪಂಜಾಬ್​ ಮುಖ್ಯಮಂತ್ರಿ ಅಮರೀಂದರ್​ ಹೇಳಿದ್ರು. ಇದೇ ವೇಳೆ, ಮಾತುಕತೆ ಮೂಲಕವೇ ರೈತರ ಸಮಸ್ಯೆಯನ್ನು ಪರಿಹರಿಸಲು ರೈತರಿಗೆ ಮತ್ತು ಕೇಂದ್ರ ಸರ್ಕಾರಕ್ಕೆ ಅಮರೀಂದರ್ ಸಲಹೆ ನೀಡಿದರು.

ರೈತರ ಆಂದೋಲನದ ಹಿಂದೆ ನೀವಿರುವಿರಿ ಎಂಬ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಸಿಂಗ್, ಪಂಜಾಬ್​ ರೈತರು ಈ ರೈತ ಚಳವಳಿ ಆರಂಭಕ್ಕೆ ಕಾರಣವಾಗಿರಬಹುದಾದರೂ ಈ ಚಳವಳಿ ಈಗ ದೇಶಾದ್ಯಂತ ಹರಡಿದೆ, ಮೂಲೆ-ಮೂಲೆಗಳಿಂದ ಆಗಮಿಸಿ ರೈತರು ಚಳವಳಿ ನಡೆಸುತ್ತಿದ್ದಾರೆ ಎಂದು ಅವರು ಸ್ಪಷ್ಟಪಡಿಸಿದ್ರು. ಪಂಜಾಬ್‌ನ ರೈತರ ಮನಸ್ಸನ್ನು ಕೇಂದ್ರ ಸರ್ಕಾರವು ಅರ್ಥಮಾಡಿಕೊಳ್ಳುವುದಿಲ್ಲ. "ರೈತರು ಯಾಕೆ ಕೇಂದ್ರದ ವಿರುದ್ಧ ಸಿಡಿದೆದ್ದಿದ್ದಾರೆ, ಈ ಹೊಸ ಕೃಷಿ ಕಾನೂನುಗಳನ್ನು ಏಕೆ ವಿರೋಧಿಸುತ್ತಿದ್ದಾರೆ ಎಂದು ಅರ್ಥಮಾಡಿಕೊಳ್ಳಲು ಪ್ರಯತ್ನಿಸದೆ, ಬಿಜೆಪಿ ಸರ್ಕಾರ ಮಾತನಾಡುತಿದೆ. ನಮ್ಮಲ್ಲಿ ಸಣ್ಣ ರೈತರು ಇದ್ದಾರೆ ಮತ್ತು ಎಂಎಸ್‌ಪಿಯನ್ನು ತೆಗೆದುಹಾಕುವುದರಿಂದ ತೀವ್ರ ತೊಂದರೆಯಾಗುತ್ತದೆ ಎಂದ್ರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.