ETV Bharat / bharat

ಹುತಾತ್ಮ ಸಲೀಮ್‌ಖಾನ್‌ ಕುಟುಂಬಕ್ಕೆ ₹50 ಲಕ್ಷ ಪರಿಹಾರ ಘೋಷಿಸಿದ ಪಂಜಾಬ್ ಸಿಎಂ!!

author img

By

Published : Jun 27, 2020, 9:28 PM IST

ಸೈನಿಕನ ಕುಟುಂಬಕ್ಕೆ ರಾಜ್ಯಸರ್ಕಾರ ಸಾಧ್ಯವಿರುವ ಎಲ್ಲ ಸಹಾಯ ಮತ್ತು ಬೆಂಬಲವನ್ನು ನೀಡುತ್ತದೆ ಎಂದು ಹೇಳಿದ್ದಾರೆ. ಹುತಾತ್ಮ ಸೈನಿಕರ ಅಂತ್ಯಸಂಸ್ಕಾರ ಅವರ ಸ್ವಗ್ರಾಮದಲ್ಲಿ ಮಿಲಿಟರಿ ಗೌರವಗಳೊಂದಿಗೆ ನಡೆದಿದೆ. ಕ್ಯಾಬಿನೆಟ್ ಸಚಿವ ಸಾಧು ಸಿಂಗ್ ಧರ್ಮಸೋಟ್ ಸರ್ಕಾರದ ಪರ ಅಂತ್ಯಸಂಸ್ಕಾರದಲ್ಲಿ ಭಾಗವಹಿಸಿದ್ದರು..

Punjab announces Rs 50 lakh ex gratia
ಹುತಾತ್ಮ ಲ್ಯಾನ್ಸ್ ನಾಯಕ

ಚಂಡೀಗಢ (ಪಂಜಾಬ್) : ಭಾರತ- ಚೀನಾ ನಡುವಿನ ಗಡಿ ಸಂಘರ್ಷದಲ್ಲಿ ಗಾಯಗೊಂಡಿದ್ದ ಲ್ಯಾನ್ಸ್ ನಾಯಕ ಸಲೀಮ್ ಖಾನ್ ಹುತಾತ್ಮರಾಗಿದ್ದಾರೆ. ಅವರ ಕುಟುಂಬಕ್ಕೆ ಪಂಜಾಬ್ ಸಿಎಂ ಅಮರೀಂದರ್‌ ಸಿಂಗ್ 50 ಲಕ್ಷ ರೂ. ಪರಿಹಾರ ಮತ್ತು ಕುಟುಂಬದಲ್ಲಿ ಒಬ್ಬರಿಗೆ ಸರ್ಕಾರಿ ಕೆಲಸ ನೀಡುವುದಾಗಿ ಘೋಷಿಸಿದ್ದಾರೆ.

ಲಡಾಖ್‌ನಲ್ಲಿ ಲ್ಯಾನ್ಸ್ ನಾಯಕ ಸಲೀಮ್ ಖಾನ್ ಹುತಾತ್ಮರಾದ ಸುದ್ದಿ ಕೇಳಿ ಬೇಸರವಾಯಿತು. ಅವರು ಪಟಿಯಾಲ ಜಿಲ್ಲೆಯ ಮರ್ದಾಹೇರಿ ಗ್ರಾಮಕ್ಕೆ ಸೇರಿದವರು. ಅವರ ಕುಟುಂಬಕ್ಕೆ ಸಂತಾಪ ತಿಳಿಸುತ್ತೇನೆ. ಇಡೀ ರಾಷ್ಟ್ರ ಕೆಚ್ಚೆದೆಯ ಸೈನಿಕನಿಗೆ ನಮಸ್ಕರಿಸುತ್ತದೆ ಎಂದು ಸಿಎಂ ಟ್ವೀಟ್ ಮಾಡಿದ್ದಾರೆ.

  • Saddened to hear about the demise of Lance Naik Saleem Khan in Ladakh. He belonged to Mardaheri village in Patiala district. My sincere condolences to his family. The nation salutes the brave soldier. Jai Hind! 🇮🇳 pic.twitter.com/BPOQjXmKLA

    — Capt.Amarinder Singh (@capt_amarinder) June 27, 2020 " class="align-text-top noRightClick twitterSection" data=" ">

ಸೈನಿಕನ ಕುಟುಂಬಕ್ಕೆ ರಾಜ್ಯಸರ್ಕಾರ ಸಾಧ್ಯವಿರುವ ಎಲ್ಲ ಸಹಾಯ ಮತ್ತು ಬೆಂಬಲವನ್ನು ನೀಡುತ್ತದೆ ಎಂದು ಹೇಳಿದ್ದಾರೆ. ಹುತಾತ್ಮ ಸೈನಿಕರ ಅಂತ್ಯಸಂಸ್ಕಾರ ಅವರ ಸ್ವಗ್ರಾಮದಲ್ಲಿ ಮಿಲಿಟರಿ ಗೌರವಗಳೊಂದಿಗೆ ನಡೆದಿದೆ. ಕ್ಯಾಬಿನೆಟ್ ಸಚಿವ ಸಾಧು ಸಿಂಗ್ ಧರ್ಮಸೋಟ್ ಸರ್ಕಾರದ ಪರ ಅಂತ್ಯಸಂಸ್ಕಾರದಲ್ಲಿ ಭಾಗವಹಿಸಿದ್ದರು.

ಭಾರತ-ಚೀನಾ ಗಡಿ ಪ್ರದೇಶದಲ್ಲಿ ನಡೆದಿದ್ದ ಘರ್ಷಣೆ ವೇಳೆ ಭಾರತದ 20 ಯೋಧರು ಸ್ಥಳದಲ್ಲೇ ಹುತಾತ್ಮರಾಗಿದ್ದರು. ಚೀನಾದ ಅನೇಕ ಯೋಧರು ಘಟನೆಯಲ್ಲಿ ಸಾವನ್ನಪ್ಪಿದ್ದರು ಎಂಬ ಮಾಹಿತಿ ಇದೆ. ಆದರೆ, ಇದುವರೆಗೂ ಡ್ರ್ಯಾಗನ್​ ಸಾವು-ನೋವಿನ ಬಗ್ಗೆ ಅಧಿಕೃತವಾಗಿ ದೃಢಪಡಿಸಿಲ್ಲ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.