ಶ್ರೀನಗರ: 2019ರಲ್ಲಿ ನಡೆದ ಪುಲ್ವಾಮಾ ದಾಳಿಯ ಚಾರ್ಜ್‌ಶೀಟ್ ಇಂದು ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ)ಯಿಂದ ಸಲ್ಲಿಕೆಯಾಗಿದ್ದು, ಇದರಲ್ಲಿ ಮೋಸ್ಟ್ ವಾಟೆಂಡ್ ಉಗ್ರ, ಜೈಶ್-ಎ-ಮೊಹಮ್ಮದ್ ಉಗ್ರ ಸಂಘಟನೆ ಮುಖ್ಯಸ್ಥ ಮಸೂದ್ ಅಜರ್ ಹೆಸರು ಸೇರಿಕೊಂಡಿದೆ.
ಪುಲ್ವಾಮಾ ದಾಳಿ ಪ್ರಕರಣ: ಚಾರ್ಜ್‌ಶೀಟ್ ಸಲ್ಲಿಸಿದ ಎನ್‌ಐಎ
ಜಮ್ಮು ನ್ಯಾಯಾಲಯಕ್ಕೆ ಸುಮಾರು 5 ಸಾವಿರ ಪುಟಗಳ ಚಾರ್ಜ್‌ಶೀಟ್ ಸಲ್ಲಿಕೆ ಮಾಡಲಾಗಿದ್ದು, ಸಿಆರ್‌ಪಿಎಫ್ ಪಡೆ ಮೇಲೆ ಭಯೋತ್ಪಾದಕ ದಾಳಿ ನಡೆದು 18 ತಿಂಗಳ ಬಳಿಕ ವರದಿ ಸಲ್ಲಿಕೆಯಾಗಿದೆ.
ದಾಳಿ ನಡೆಯಲು ಮುಖ್ಯವಾಗಿ ಮಸೂದ್ ಅಜರ್ ಪ್ರಮುಖ ರೂವಾರಿ ಎಂದು ಇದರಲ್ಲಿ ಉಲ್ಲೇಖ ಮಾಡಲಾಗಿದೆ. ಉಳಿದಂತೆ ಇವರ ಸಹೋದರ ಅಬ್ದುಲ್ ಅಸ್ಗರ್,ಅಮರ್ ಅಲ್ವಿ ಹಾಗೂ ಸೋದರಳಿಯ ಉಮರ್ ಫಾರೂಖ್ ಹೆಸರು ಇದೆ.
ಚಾರ್ಜ್ಶೀಟ್ನಲ್ಲಿರುವ ಉಗ್ರರ ಹೆಸರು ಇಂತಿವೆ
1. ಮಸೂದ್ ಅಜರ್ ಅಲಿ
2. ಅಸ್ಗರ್ ಅಲ್ವಿ
3. ಅಮ್ಮರ್ ಅಲ್ವಿ
4. ಶಕೀರ್ ಬಶೀರ್
5. ಇನ್ಶಾ ಜನ
6. ಪೀರ್ ತಾರಿಕ್ ಅಹ್ಮದ್ ಷಾ
7. ವೈಜ್-ಉಲ್-ಇಸ್ಲಾಂ
8. ಮೊಹಮ್ಮದ್ ಅಬ್ಬಾಸ್ ರಾಥರ್
9. ಬಿಲಾಲ್ ಅಹ್ಮದ್ ಕುಚೇ
10. ಮೊಹಮ್ಮದ್ ಇಕ್ಬಾಲ್ ರಾಥರ್
11. ಮೊಹಮ್ಮದ್ ಇಸ್ಮಾಯಿಲ್
12. ಸಮೀರ್ ಅಹ್ಮದ್ ದಾರ್
13. ಆಶಾಕ್ ಅಹ್ಮದ್ ನೆಂಗ್ರೂ
14. ಆದಿಲ್ ಅಹ್ಮದ್ ದಾರ್(ಮೃತ)
15. ಮುಹಮ್ಮದ್ ಉಮರ್ ಫಾರೂಖ್(ಮೃತ)
16. ಮೊಹಮ್ಮದ್ ಕಮ್ರಾನ್ ಅಲಿ(ಮೃತ)
17. ಸಜ್ಜಾದ್ ಅಹ್ಮದ್ ಭಟ್(ಮೃತ)
18. ಮುದಾಸೀರ್ ಅಹ್ಮದ್ ಖಾನ್(ಮೃತ)
19. ಖಾರಿ ಯಾಸಿರ್(ಮೃತ)
ಚಾರ್ಜ್ಶೀಟ್ನಲ್ಲಿ ಸಲ್ಲಿಕೆಯಾಗಿರುವ ಆರೋಪಿಗಳಲ್ಲಿ ಅನೇಕರು ಸ್ಥಳೀಯರು ಆಗಿದ್ದಾರೆ. ಈ ದಾಳಿವೊಂದು ವ್ಯವಸ್ಥಿತವಾಗಿ ನಡೆದಿದ್ದು, ದಾಳಿ ನಡೆದ ಬಳಿಕ ಮಸೂದ್ ಸಂಭ್ರಮಾಚರಣೆ ಮಾಡಿದ್ದ ವಿಡಿಯೋ ಕೂಡ ಚಾರ್ಟ್ಶೀಟ್ ಜತೆ ಸಲ್ಲಿಕೆಯಾಗಿದೆ. 2019, ಫೆಬ್ರವರಿ 14ರಂದು ಅಲಿ ಅಹ್ಮದ್ ದಾರ್ ಎಂಬ ಆತ್ಮಾಹುತಿ ದಾಳಿಕೋರನೋರ್ವ ಸಿಆರ್‌ಪಿಎಫ್ ವಾಹನದ ಮೇಲೆ ಸ್ಫೋಟಕ ತುಂಬಿದ್ದ ಕಾರು ನುಗ್ಗಿಸಿದ್ದನು. ಪರಿಣಾಮ ಅದರಲ್ಲಿದ್ದ 40 ಯೋಧರು ಹುತಾತ್ಮರಾಗಿದ್ದರು.