ಅಮರಾವತಿ: ಆನ್‌ಲೈನ್ ಆಟದಿಂದ ಇತ್ತೀಚೆಗೆ ನಡೆಯುತ್ತಿರುವ ದುರಂತಗಳನ್ನು ಮನಗಂಡಿರುವ ಆಂಧ್ರಪ್ರದೇಶ ರಾಜ್ಯ ಸರ್ಕಾರ, ಇಂದು ನಡದೆ ಅಧಿವೇಶನದಲ್ಲಿ ಆನ್‌ಲೈನ್ ಗೇಮಿಂಗ್ ನಿಷೇಧಿಸುವ ಮಹತ್ವದ ತಿದ್ದುಪಡಿಗೆ - 2020 ಧ್ವನಿ ಮತದಿಂದ ಮಂಗಳವಾರ ಅಂಗೀಕರಿಸಿದೆ.
ಎಪಿ ಫಿಶ್ ಫೀಡ್ (ಕ್ವಾಲಿಟಿ ಕಂಟ್ರೋಲ್) ಮಸೂದೆ, ಎಪಿ ಅಕ್ವಾಕಲ್ಚರ್ ಸೀಡ್ (ಕ್ವಾಲಿಟಿ ಕಂಟ್ರೋಲ್) ತಿದ್ದುಪಡಿ ಮಸೂದೆ ಮತ್ತು ಆಂಧ್ರಪ್ರದೇಶ ಮೀನುಗಾರಿಕೆ ವಿಶ್ವವಿದ್ಯಾಲಯ ಮಸೂದೆ - 2020 ಅನ್ನು ಪ್ರತಿಪಕ್ಷ ತೆಲುಗು ದೇಶಂ ಪಕ್ಷದ ಪ್ರತಿಭಟನೆಯ ನಡುವೆಯೂ ಧ್ವನಿ ಮತದಿಂದ ಇಂದು ಅಂಗೀಕರಿಸಲಾಯಿತು.
ಗೇಮಿಂಗ್ ತಿದ್ದುಪಡಿ ಮಸೂದೆ ಬಗ್ಗೆ ಮಾತನಾಡಿದ ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ, ಇತ್ತೀಚಿನ ದಿನಗಳಲ್ಲಿ ಯುವ ಸಮೂಹ ಆನ್‌ಲೈನ್ ಗೇಮಿಂಗ್ಗೆ ದಾಸರಾಗಿದ್ದರು. ಇದಕ್ಕಾಗಿಯೇ ಸಾಲ - ಸೂಲ ಮಾಡಿ ಆತ್ಮಹತ್ಯೆ ಅಂತಹ ದಾರಿ ಹಿಡಿಯುತ್ತಿದ್ದಾರೆ. ಇಂತಹ ಸಾಕಷ್ಟು ಪ್ರಕರಣಗಳು ಕೇಳಿ ಬಂದಿದ್ದರಿಂದ ಹಾಗೂ ಇಂತಹ ಪ್ರಕರಣಗಳನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದರಿಂದ ಗೇಮಿಂಗ್ ಕಾಯ್ದೆ 2020 ಅನ್ನು ಅಂಗೀಕರಿಸಲಾಗಿದೆ ಎಂದರು.
ಇದನ್ನೂ ಓದಿ : ಆನ್‌ಲೈನ್ ಗೇಮ್ ಬ್ಯಾನ್: ನಿಯಮ ಮೀರಿ ಆಡಿದ್ರೆ ದಂಡದ ಜೊತೆ ಜೈಲು ಖಾಯಂ..!
ಆಂಧ್ರಪ್ರದೇಶ ಜೂಜು ನಿಯಂತ್ರಣ ಕಾಯ್ದೆ 1974ರ ಅನ್ವಯ ಆನ್‌ಲೈನ್ ಗೇಮಿಂಗ್ ಕಾನೂನನ್ನು ತಿದ್ದುಪಡಿ ಮಾಡುವ ಹಿಂದಿನ ಉದ್ದೇಶವನ್ನು ವಿವರಿಸಿದ ಗೃಹ ಸಚಿವ ಸುಚರಿತಾ, ಆನ್‌ಲೈನ್ ಜೂಜಾಟವು ಸಮಾಜದಲ್ಲಿ ಕ್ರಿಮಿನಲ್ ನಡವಳಿಕೆಯನ್ನು ಪ್ರೇರೇಪಿಸುತ್ತದೆ. ಅಲ್ಲದೇ ಮನಿ ಲಾಂಡರಿಂಗ್ ಮತ್ತು ವಂಚನೆಯಂತಹ ಪ್ರಕರಣಗಳನ್ನು ಹೆಚ್ಚಿಸುತ್ತದೆ. ಹಾಗಾಗಿ ಗಂಭೀರವಾಗಿ ಪರಿಗಣಿಸಿದ್ದ ರಾಜ್ಯ ಸರ್ಕಾರ ಇವುಗಳಿಗ ಕಡಿವಾಣಕ್ಕಾಗಿ ಆನ್‌ಲೈನ್ ಗೇಮಿಂಗ್ ಕಾಯ್ದೆಗೆ ತಿದ್ದುಪಡಿಯನ್ನು ತರಲಾಗಿದೆ ಎಂದರು.
ಸರ್ಕಾರದ ನಿಷೇಧಾಜ್ಞೆಯನ್ನೂ ಮೀರಿ ಗೇಮಿಂಗ್ನಲ್ಲಿ ತೊಡಗಿದರೆ ಅಂತಹವರಿಗೆ ರಾಜ್ಯ ಸರ್ಕಾರ ಕೈಗೊಳ್ಳಲಿರುವ ಕಾನೂನು ಕ್ರಮ ಹಾಗೂ ದಂಡದ ಪ್ರಸ್ತಾವನೆಯನ್ನು ಸಹ ಅವರು ಇದೇ ವೇಳೆ ವಿವರಿಸಿದರು.