ETV Bharat / bharat

ನಗ್ನವಾಗಿ ಬಂದು ಮನೆಗಳ್ಳತನ: ಸೈಕೋ ಕಳ್ಳನ ಕಂಡು ಬೆಚ್ಚಿದ ಜನ!

author img

By

Published : Sep 9, 2020, 7:29 AM IST

ಬೆತ್ತಲೆಯಾಗಿ ಮನೆಗಳಿಗೆ ನುಗ್ಗಿ ಕಳ್ಳತನ ಮಾಡುತ್ತಿರುವ ಸೈಕೋ ಕಳ್ಳನ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ವಿಶಾಖಪಟ್ಟಣಂ ಜನರನ್ನು ಬೆಚ್ಚಿ ಬೀಳಿಸಿದೆ.

Psycho thief
ಸೈಕೋ ಕಳ್ಳ

ವಿಶಾಖಪಟ್ಟಣಂ (ಆಂಧ್ರ ಪ್ರದೇಶ): ನಗ್ನವಾಗಿ ಮನೆಗಳನ್ನು ಹೊಕ್ಕು ಕಳ್ಳತನ ಮಾಡುವ ಸೈಕೋ ಕಳ್ಳ ವಿಶಾಖಪಟ್ಟಣಂನಲ್ಲಿ ಪತ್ತೆಯಾಗಿದ್ದು, ಜನರಲ್ಲಿ ಆತಂಕ ಮೂಡಿಸಿದೆ.

ವಿಶಾಖಪಟ್ಟಣದ ಉದ್ಯಮಿ ವಡ್ಡಾಡಿ ತ್ರಿನಧರಾವ್ ಎಂಬುವವರ ಮನೆಯಲ್ಲಿ ಈ ಸೈಕೋ ಕಳ್ಳ ಸೋಮವಾರ ಮುಂಜಾನೆ 3 ಗಂಟೆಗೆ ಮನೆಯ ಬಾಗಿಲನ್ನು ಮುರಿದು ಒಳ ನುಗ್ಗಿ 10 ಸಾವಿರ ರೂಪಾಯಿ ದೋಚಿದ್ದಾನೆ.

ಸೈಕೋ ಕಳ್ಳ

ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಉದ್ಯಮಿ ಕಂಚರಪಾಲೆಂ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪೊಲೀಸರು ಆರೋಪಿ ಪತ್ತೆಗಾಗಿ ತನಿಖೆ ನಡೆಸುತ್ತಿದ್ದಾರೆ.

ಸೈಕೋ ಕಳ್ಳನ ಕಾರಣದಿಂದ ಜನರಲ್ಲಿ ಆತಂಕ ಹೆಚ್ಚಾಗಿದ್ದು, ಆದಷ್ಟು ಬೇಗ ಕಳ್ಳನನ್ನು ಬಂಧಿಸಬೇಕೆಂದು ಪೊಲೀಸರಲ್ಲಿ ಮನವಿ ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.