ನವದೆಹಲಿ: ಅಶಿಸ್ತಿನ ವರ್ತನೆ ಕಾರಣದಿಂದಾಗಿ ಒಂದು ವಾರ ಕಾಲ ಎಂಟು ಸದಸ್ಯರನ್ನು ರಾಜ್ಯಸಭಾಧ್ಯಕ್ಷ ಎಂ.ವೆಂಕಯ್ಯ ನಾಯ್ಡು ಅಮಾನತುಗೊಳಿಸಿದ್ದನ್ನು ಖಂಡಿಸಿ, ಅಮಾನತುಗೊಂಡವರು ಸೇರಿದಂತೆ ವಿವಿಧ ಪ್ರತಿಪಕ್ಷಗಳ ಸಂಸದರು ಸಂಸತ್ ಬಳಿಯ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ನಡೆಸಿದರು.
ಸಂಸದರ ಅಮಾನತಿನ ಬಗ್ಗೆ ಪ್ರತಿಕ್ರಿಯಿಸಿರುವ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ, ಅಧ್ಯಕ್ಷರು ಹೆಸರು ಸೂಚಿಸಿದವರು ಆದೇಶವನ್ನು ಧಿಕ್ಕರಿಸದೆ ಸದನವನ್ನು ತೊರೆಯಲೇಬೇಕಾಗುತ್ತದೆ. ಎಂಟು ಸಂಸದರು ಕೆಟ್ಟದ್ದಾಗಿ ಗೂಂಡಾಗಳ ರೀತಿ ವರ್ತಿಸಿದ್ದಾರೆ. ಈ ಮೂಲಕ ಅವರಿಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲ ಎಂದು ಸಾಬೀತುಪಡಿಸಿದ್ದಾರೆ ಎಂದು ಹೇಳಿದರು.