ETV Bharat / bharat

ಈಶಾನ್ಯ ದೆಹಲಿ ಪ್ರಕ್ಷುಬ್ಧ: ಮತ್ತೆ ಅಲ್ಲಲ್ಲಿ ಕಲ್ಲು ತೂರಾಟ, ಸಾವಿನ ಸಂಖ್ಯೆ 7ಕ್ಕೆ ಏರಿಕೆ, ನೂರಕ್ಕೂ ಹೆಚ್ಚು ಮಂದಿಗೆ ಗಾಯ - ಪಿಸ್ತೂಲ್​ ತೋರಿಸಿದ್ದ ವ್ಯಕ್ತಿ ಶಾರುಕ್

ಈಶಾನ್ಯ ದೆಹಲಿಯಲ್ಲಿ ನಿನ್ನೆ (ಫೆ.24) ನಡೆದ ಹಿಂಸಾಚಾರದ ವೇಳೆ ಪೊಲೀಸರ ಮೇಲೆ ಗುಂಡು ಹಾರಿಸಲು ಯತ್ನಿಸಿದ ಕೆಂಪು ಟಿ ಶರ್ಟ್ ಧರಿಸಿದ್ದ ಶಾರುಖ್ ಎಂಬ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಜೊತೆಗೆ ಸಿಎಎ ಪರ-ವಿರೋಧದ ಪ್ರತಿಭಟನೆ ಕೋಮು ಹಿಂಸಾಚಾರಕ್ಕೆ ತಿರುಗಿದ ಹಿನ್ನೆಲೆಯಲ್ಲಿ ದೆಹಲಿ ಸದ್ಯ ಪ್ರಕ್ಷುಬ್ಧಗೊಂಡಿದೆ. ಮುನ್ನೆಚ್ಚರಿಕಾ ಕ್ರಮವಾಗಿ ರಾಷ್ಟ್ರ ರಾಜಧಾನಿಯಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

pro-and-anti-caa-group-clashes-shahrukh-arrested-for-showing-pistol-to-police
ಈಶಾನ್ಯ ದೆಹಲಿ ಪ್ರಕ್ಷುಬ್ಧ
author img

By

Published : Feb 25, 2020, 8:59 AM IST

Updated : Feb 25, 2020, 12:04 PM IST

ನವದೆಹಲಿ: ಈಶಾನ್ಯ ದೆಹಲಿಯಲ್ಲಿ ನಿನ್ನೆ ನಡೆದ ಹಿಂಸಾಚಾರದ ವೇಳೆ ಪೊಲೀಸರ ಮೇಲೆ ಗುಂಡು ಹಾರಿಸಿದ ಕೆಂಪು ಟಿ ಶರ್ಟ್ ಧರಿಸಿದ್ದ ಶಾರುಖ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹಿಂಸಾಚಾರದಲ್ಲಿ ಓರ್ವ ಪೊಲೀಸ್‌ ಸಿಬ್ಬಂದಿ ಸೇರಿದಂತೆ ಒಟ್ಟು ಏಳು ಮಂದಿ ಸಾವನ್ನಪ್ಪಿದ್ದಾರೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. ಜೊತೆಗೆ ಮುನ್ನೆಚ್ಚರಿಕಾ ಕ್ರಮವಾಗಿ ಈಶಾನ್ಯ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ.

7 ಸಾವು, 100 ಕ್ಕೂ ಹೆಚ್ಚು ಮಂದಿಗೆ ಗಾಯ:

ಜಫ್ರಾಬಾದ್​ನಲ್ಲಿ ನಡೆದ ಪೌರತ್ವ (ತಿದ್ದುಪಡಿ) ಕಾಯ್ದೆ ಪರ-ವಿರೋಧದ ಪ್ರತಿಭಟನೆಯು ತೀವ್ರ ಹಿಂಸಾಚಾರಕ್ಕೆ ತಿರುಗಿತ್ತು. ಈ ವೇಳೆ ಪೊಲೀಸ್​ ಕಾನ್​ಸ್ಟೇಬಲ್​ ಸೇರಿದಂತೆ 7 ಮಂದಿ ಮೃತಪಟ್ಟಿದ್ದು, 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಕಿಡಿಗೇಡಿಗಳು, ವಾಹನಗಳು, ಮನೆಗಳು ಹಾಗು ಪೆಟ್ರೋಲ್ ಬಂಕ್‌ಗಳಿಗೆ ಬೆಂಕಿ ಹಚ್ಚಿದ್ದು, ಬೆಂಕಿ ನಂದಿಸುವ ವೇಳೆ ಮೂವರು ಅಗ್ನಿಶಾಮಕ ಸಿಬ್ಬಂದಿ ಗಾಯಗೊಂಡಿದ್ದಾರೆ.

ಸಿಎಎ ಪರ-ವಿರೋಧ ಪ್ರತಿಭಟನೆ

ಮೆಟ್ರೋ ಸಂಚಾರ ಸ್ಥಗಿತ:

ದೆಹಲಿಯ ಅಲ್ಲಲ್ಲಿ ಹಿಂಸಾಚಾರ ವರದಿಯಾಗಿದ್ದು ಜಫ್ರಾಬಾದ್​, ಮೌಜ್ಪುರ್​, ಬಾಬರ್​ಪುರ, ಗೋಕುಲ್ಪುರಿ ಹಾಗು ಶಿವ ವಿಹಾರ್‌ನಲ್ಲಿ ಮೆಟ್ರೋ ಸಂಚಾರ ಸ್ಥಗಿತಗೊಳಿಸಲಾಗಿದೆ.

ಮೌಜ್‌ಪುರಿ ಬ್ರಹ್ಮಪುರಿಯಲ್ಲಿ ಬೆಳಿಗ್ಗೆ ಕಲ್ಲು ತೂರಾಟ:

ಇವತ್ತು ಬೆಳಿಗ್ಗೆ ಈಶಾನ್ಯ ದೆಹಲಿಯ ಮೌಜ್‌ಪುರಿ ಮತ್ತು ಬ್ರಹ್ಮಪುರಿಯಲ್ಲಿ ಕಿಡಿಗೇಡಿಗಳು ಪೊಲೀಸರ ಮೇಲೆ ಕಲ್ಲು ತೂರಿದ ಘಟನೆ ನಡೆದಿದೆ. ಆರ್‌ಎಎಫ್‌ ಸಿಬ್ಬಂದಿ ಫ್ಲಾಗ್ ಮಾರ್ಚ್ ನಡೆಸುತ್ತಿದ್ದ ವೇಳೆ ಕಲ್ಲು ತೂರಾಟ ಮಾಡಲಾಗಿದೆ.

ಹಿರಿಯ ಪೊಲೀಸ್‌ ಅಧಿಕಾರಿಗಳೊಂದಿಗೆ ಅಮಿತ್ ಶಾ ಚರ್ಚೆ:

ಈಶಾನ್ಯ ದೆಹಲಿ ಪ್ರಕ್ಷುಬ್ಧಗೊಂಡ ಹಿನ್ನೆಲೆಯಲ್ಲಿ ನಿನ್ನೆ ರಾತ್ರಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ಗೃಹ ಸಚಿವಾಲಯದ ಹಿರಿಯ ಅಧಿಕಾರಿಗಳು ಹಾಗು ದೆಹಲಿಯ ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ತುರ್ತು ಸಭೆ ನಡೆಸಿದ್ದು, ಭದ್ರತೆಗೆ ಸಂಬಂಧಪಟ್ಟಂತೆ ಕೈಗೊಂಡ ಕ್ರಮಗಳ ಮಾಹಿತಿ ಪಡೆದಿದ್ದಾರೆ.

ಶಾಸಕರು, ಅಧಿಕಾರಿಗಳ ಜೊತೆಗೆ ತುರ್ತು ಸಭೆ ಕರೆದ ಕೇಜ್ರಿವಾಲ್:

  • Delhi: CM Arvind Kejriwal is holding a meeting with the officials and MLAs of the violence-affected areas of the city, at his residence. pic.twitter.com/8ZwMoyyFNS

    — ANI (@ANI) February 25, 2020 " class="align-text-top noRightClick twitterSection" data=" ">

ಇದೇ ವೇಳೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ತನ್ನ ಅಧಿಕೃತ ನಿವಾಸದಲ್ಲಿ ಹಿಂಸಾಚಾರಕ್ಕೊಳಗಾದ ಪ್ರದೇಶದ ಶಾಸಕರು ಹಾಗು ಹಿರಿಯ ಅಧಿಕಾರಿಗಳ ಜೊತೆ ತುರ್ತು ಸಭೆ ಕರೆದಿದ್ದಾರೆ.

Last Updated : Feb 25, 2020, 12:04 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.